ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ (Tamannaah Bhatia) ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇವರು ಒಟ್ಟಾಗಿ ಸುತ್ತಾಡುತ್ತಾರೆ. ಇತ್ತೀಚೆಗೆ ಈ ಜೋಡಿ ಮಾಲ್ಡೀವ್ಸ್ಗೆ ತೆರಳಿತ್ತು. ತಮನ್ನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಮುದ್ರ ತೀರದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಟ್ರಿಪ್ ಮುಗಿಸಿ ಈ ಜೋಡಿ ಮುಂಬೈಗೆ ಆಗಮಿಸಿದೆ. ಈ ವೇಳೆ ಪಾಪರಾಜಿಗಳು ಕೇಳಿದ ಪ್ರಶ್ನೆ ವಿಜಯ್ ವರ್ಮಾ ಅವರ ಸಿಟ್ಟಿಗೆ ಕಾರಣವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೆಲೆಬ್ರಿಟಿಗಳು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಪಾಪರಾಜಿಗಳು ವಿಡಿಯೋ-ಫೋಟೋಗೆ ಮುಗಿಬೀಳುತ್ತಾರೆ. ಅದೇ ರೀತಿ ವಿಜಯ್ ವರ್ಮಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಫೋಟೋ-ವಿಡಿಯೋ ಕ್ಲಿಕ್ಕಿಸಲು ಎಲ್ಲರೂ ಮುಗಿಬಿದ್ದರು. ಪಾಪರಾಜಿ ಹೇಳಿದ ಮಾತನ್ನು ವಿಜಯ್ ವರ್ಮಾ ಯಾವ ರೀತಿಯಲ್ಲಿ ಅರ್ಥೈಸಿಕೊಂಡರೋ ಗೊತ್ತಿಲ್ಲ, ಕೊಂಚ ಗರಂ ಆದರು.
‘ಹೇಗಿತ್ತು ಸರ್ ಟ್ರಿಪ್’ ಎಂದು ವಿಜಯ್ ವರ್ಮಾ ಅವರನ್ನು ಕೇಳಲಾಯಿತು. ‘ಚೆನ್ನಾಗಿತ್ತು’ ಎಂದು ಕೂಲ್ ಆಗಿಯೇ ಉತ್ತರಿಸಿದರು ವಿಜಯ್. ಬಳಿಕ, ‘ಮಾಲ್ಡೀವ್ಸ್ ಸಮುದ್ರ ತೀರದ ಮಜವನ್ನು ಪಡೆದು ಬಂದಿರೇ’ ಎಂದು ಓರ್ವ ಪಾಪರಾಜಿ ಕೇಳಿದರು. ಇದಕ್ಕೆ ಉತ್ತರಿಸಿದ ವಿಜಯ್ ವರ್ಮಾ, ‘ಈ ರೀತಿ ನೀವು ಮಾತನಾಡುವಂತಿಲ್ಲ’ ಎಂದು ನೇರವಾಗಿಯೇ ಹೇಳಿದ್ದಾರೆ. ಈ ವೇಳೆ ಅವರು ಕೊಂಚ ಗರಂ ಆದಂತೆ ಕಂಡುಬಂತು.
ಇನ್ನು, ನಟಿ ತಮನ್ನಾ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಯಾರ ಜೊತೆಗೂ ಮಾತಿಗೆ ಸಿಕ್ಕಿಲ್ಲ. ಅವರು ನೇರವಾಗಿ ಕಾರು ಹತ್ತಿ ತೆರಳಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿದೆ.
ಇದನ್ನೂ ಓದಿ: ‘ತಮನ್ನಾ ಮೇಲೆ ನನಗೆ ಹುಚ್ಚು ಪ್ರೀತಿ ಆಗಿದೆ’; ಪಬ್ಲಿಸಿಟಿ ಸ್ಟಂಟ್ಸ್ ಎಂದವರಿಗೆ ವಿಜಯ್ ವರ್ಮಾ ಉತ್ತರ
ತಮನ್ನಾ ಹಾಗೂ ವಿಜಯ್ ವರ್ಮಾ ಅವರು ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ತಮನ್ನಾ ಹಾಗೂ ವಿಜಯ್ ಮೊದಲ ಬಾರಿಗೆ ತೆರೆಮೇಲೆ ಒಂದಾದರು. ಈ ಸಿನಿಮಾಗೋಸ್ಕರ ‘ನೋ ಕಿಸ್’ ಪಾಲಿಸಿಯನ್ನು ತಮನ್ನಾ ಬ್ರೇಕ್ ಮಾಡಿದರು. ಶೀಘ್ರವೇ ಇವರು ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ತಮನ್ನಾ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ