ಆಗರ್ಭ ಶ್ರೀಮಂತರನ್ನು ಮದುವೆ ಆದ ಬಾಲಿವುಡ್ ನಟಿಯರು ಇವರೇ ನೋಡಿ..
ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿರುವ ನಟಿಯರು ಬಳಿಕ ಉದ್ಯಮಿಗಳನ್ನು ಮದುವೆಯಾಗಿ ನಂತರ ನಟನೆಯಿಂದ ದೂರವೇ ಉಳಿದುಕೊಳ್ಳುತ್ತಾರೆ. ದೇಶ ವಿದೇಶ ಸುತ್ತುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆಗರ್ಭ ಶ್ರೀಮಂತರನ್ನು ಮದುವೆಯಾಗಿರುವ ಸೆಲೆಬ್ರೆಟಿಗಳ ಬಗ್ಗೆ ಇಲ್ಲಿದೆ ವಿವರ.
ಬಾಲಿವುಡ್ನ ಹಲವು ನಟಿಯರು ದೊಡ್ಡ ದೊಡ್ಡ ಉದ್ಯಮಿಗಳನ್ನು ಮದುವೆಯಾಗಿದ್ದಾರೆ. ಇದಕ್ಕೆ ಸೋನಂ ಕಪೂರ್, ಶಿಲ್ಪಾ ಶೆಟ್ಟಿ (Shilpa Shetty), ಮೊದಲಾದವರೇ ಸಾಕ್ಷಿ. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿರುವ ಇವರು ಬಳಿಕ ಉದ್ಯಮಿಗಳನ್ನು ಮದುವೆಯಾಗಿ ನಂತರ ನಟನೆಯಿಂದ ದೂರವೇ ಉಳಿದುಕೊಳ್ಳುತ್ತಾರೆ. ದೇಶ ವಿದೇಶ ಸುತ್ತುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಮದುವೆ ವಿಚಾರದಲ್ಲಿ ಅನೇಕರು ಟೀಕೆಗೆ ಒಳಗಾದ ಉದಾಹರಣೆ ಇದೆ. ಆದರೆ, ಇದಕ್ಕೆಲ್ಲ ಇವರು ತಲೆಕೆಡಿಸಿಕೊಂಡಿಲ್ಲ. ಆಗರ್ಭ ಶ್ರೀಮಂತರನ್ನು ಮದುವೆಯಾಗಿರುವ ಸೆಲೆಬ್ರೆಟಿಗಳ ಬಗ್ಗೆ ಇಲ್ಲಿದೆ ವಿವರ.
ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ
ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಡಿಸೆಂಬರ್ 11 2017ರಂದು ಇವರು ದೂರದ ಇಟಲಿಯಲ್ಲಿ ಮದುವೆಯಾದರು. ಇಬ್ಬರೂ ಈಗ ಹಾಯಾಗಿ ಸಂಸಾರ ನಡೆಸಿಕೊಂಡಿದ್ದಾರೆ. ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ವಮಿಕಾ ಎಂದು ಹೆಸರು ಇಡಲಾಗಿದೆ. ಅನುಷ್ಕಾ ಮದುವೆ ಆಗಿರೋದು ಶ್ರಿಮಂತ ಕ್ರಿಕೆಟರ್ನ. ಅನುಷ್ಕಾ ಶರ್ಮಾ ಕೂಡ ಶ್ರೀಮಂತ ನಟಿಯೇ. ಆದರೆ, ವಿರಾಟ್ ಆಸ್ತಿ ಇವರಿಗಿಂತಲೂ ಹೆಚ್ಚಿದೆ. ವಿರಾಟ್ ಸಾವಿರಾರು ಕೋಟಿ ರೂಪಾಯಿ ಒಡೆಯ.
ಸೋನಂ ಕಪೂರ್-ಆನಂದ್ ಅಹೂಜ
ಸೋನಂ ಕಪೂರ್ ಹಾಗೂ ಆನಂದ್ ಅಹೂಜಾ ಅವರು 2018, ಮೇ 8ರಂದು ಮದುವೆ ಆದರು. ಸೋನಂ ಕಪೂರ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಅನಿಲ್ ಕಪೂರ್ ಮಗಳಾದ ಹೊರತಾಗಿಯೂ ಹೆಚ್ಚು ಬೇಡಿಕೆ ಸೃಷ್ಟಿ ಆಗಲೇ ಇಲ್ಲ. ಅವರಿಗೆ ನಟನೆ ಬರುವುದಿಲ್ಲ ಎಂದು ಅನೇಕರು ಟೀಕೆ ಮಾಡಿದ್ದಿದೆ. ಆನಂದ್ ಅಹೂಜ ಉದ್ಯಮಿ. ಅವರು ಲಂಡನ್ ಮೊದಲಾದ ಕಡೆಗಳಲ್ಲಿ ಮನೆ ಹೊಂದಿದ್ದಾರೆ.
ರವೀನಾ ಟಂಡನ್-ಅನಿಲ್ ತಡಾನಿ
ರವೀನಾ ಟಂಡನ್ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. 1991ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಕಳೆದ ವರ್ಷ ರಿಲೀಸ್ ಆದ ‘ಕೆಜಿಎಫ್ 2’ ಚಿತ್ರದಲ್ಲಿ ಅವರು ಮಾಡಿದ ರಮಿಕಾ ಸೇನ್ ಪಾತ್ರ ಗಮನ ಸೆಳೆಯಿತು. ರವೀನಾ ಅವರು ಅನಿಲ್ ತಡಾನಿಯನ್ನು ಮದುವೆ ಆದರು. ಅನಿಲ್ ಸಿನಿಮಾ ನಿರ್ಮಾಣದ ಜೊತೆಗೆ ಹಂಚಿಕೆದಾರರೂ ಹೌದು. ಈ ದಂಪತಿಗೆ ರಣವೀರ್ವರ್ಧನ್ ಹಾಗೂ ರಾಶಾ ಹೆಸರಿನ ಮಕ್ಕಳಿದ್ದಾರೆ. ಇನ್ನು ರವೀನಾ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರಿಗೆ ಪೂಜಾ-ಛಾಯಾ ಎಂದು ಹೆಸರಿಟ್ಟಿದ್ದಾರೆ.
ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ
ಶಿಲ್ಪಾ ಶೆಟ್ಟಿ ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಇವರು ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆ ಆದರು. ರಾಜ್ ಕುಂದ್ರಾ ಅನೇಕ ಉದ್ಯಮಗಳನ್ನು ಹೊಂದಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಸಿಕ್ಕಿ ಬಿದ್ದಿದ್ದರಿಂದ ಶಿಲ್ಪಾ ಮುಜುಗರ ಎದುರಿಸಬೇಕಾಯಿತು.
ರಾಣಿ ಮುಖರ್ಜಿ-ಆದಿತ್ಯ ಚೋಪ್ರಾ
ನಟಿ ರಾಣಿ ಮುಖರ್ಜಿ ಅವರು ನಿರ್ಮಾಪಕ ಆದಿತ್ಯ ಚೋಪ್ರಾ ಅವರನ್ನು ಮದುವೆ ಆಗಿದ್ದಾರೆ. ಆದಿತ್ಯ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ನ ಮುನ್ನಡೆಸುತ್ತಿದ್ದಾರೆ. ಒಂದು ಮೂಲಗಳ ಪ್ರಕಾರ ಆದಿತ್ಯ ಚೋಪ್ರಾ ಅವರ ಒಟ್ಟೂ ಆಸ್ತಿ 6500 ಕೋಟಿ ರೂಪಾಯಿ ಇದೆ. ಆದಿತ್ಯ ಚೋಪ್ರಾಗೆ ಇದು ಎರಡನೇ ಮದುವೆ. ರಾಣಿಗೆ ಅದಿರಾ ಹೆಸರಿನ ಮಗಳಿದ್ದಾರೆ.
ಅಮೃತಾ ಅರೋರಾ-ಶಕೀಲ್ ಲಡಾಕ್
ಅಮೃತಾ ಅರೋರಾ ಅವರು ಬಾಲಿವುಡ್ನಲ್ಲಿ ದೊಡ್ಡ ಮೊತ್ತದ ಯಶಸ್ಸು ಕಂಡಿಲ್ಲ. ಅವರು ಉದ್ಯಮಿ, ಬಾಯ್ಫ್ರೆಂಡ್ ಶಕೀಲ್ ಲಡಾಕ್ ಅವರನ್ನು ಮದುವೆ ಆದರು. ಶಕೀಲ್ ಅವರ ಆಸ್ತಿ 87 ಕೋಟಿ ರೂಪಾಯಿ.
ಇದನ್ನೂ ಓದಿ: ಅಡಲ್ಟ್ ವೆಬ್ ಸೀರಿಸ್ಗಳಲ್ಲಿ ನಟಿಸಿ ಫೇಮಸ್ ಆದ 10 ಹೀರೋಯಿನ್ಗಳು ಇವರೇ ನೋಡಿ..
ಜೂಹಿ ಛಾವ್ಲಾ-ಜೇ ಮೆಹ್ತಾ
ಜೂಹಿ ಛಾವ್ಲಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೆಹ್ತಾ ಗ್ರೂಪ್ನ ಮಾಲೀಕ ಜೇ ಮೆಹ್ತಾ ಅವರನ್ನು ಜೂಹಿ ಮದುವೆ ಆಗಿದ್ದಾರೆ. ಇವರಿಗೆ ಜಾನ್ವಿ ಮೆಹ್ತಾ ಹಾಗೂ ಅರ್ಜುನ್ ಮೆಹ್ತಾ ಹೆಸರಿನ ಮಕ್ಕಳಿದ್ದಾರೆ. ಜೇ ಮೆಹ್ತಾ 254 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ವಿದ್ಯಾ ಬಾಲನ್
ವಿದ್ಯಾ ಬಾಲನ್ ಹಾಗೂ ಸಿದ್ದಾರ್ಥ್ ರಾಯ್ ಕಪೂರ್ನ ಮದುವೆ ಆಗಿದ್ದಾರೆ. ಅವರು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಅವರು ದೊಡ್ಡ ಮೊತ್ತದ ಆಸ್ತಿ ಹೊಂದಿದ್ದಾರೆ. ಹಲವು ಸಿನಿಮಾಗಳನ್ನು ಸಿದ್ದಾರ್ಥ್ ನಿರ್ಮಾಣ ಮಾಡಿದ್ದಾರೆ. ಸಿದ್ದಾರ್ಥ್ಗೆ ಇದು ಮೂರನೇ ಮದುವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:13 am, Fri, 1 September 23