AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾದಲ್ಲಿ ಬಿಕಿನಿ ಹಾಕಲು ತಾಯಿ ಹೇಮಾ ಮಾಲಿನಿ ಬಳಿ ಒಪ್ಪಿಗೆ ಕೇಳಿದ್ದ ಇಶಾ ಡಿಯೋಲ್

2004ರಲ್ಲಿ ರಿಲೀಸ್ ಆದ ‘ಧೂಮ್’ ಚಿತ್ರವು ಇಶಾ ಡಿಯೋಲ್ ಅವರ ವೃತ್ತಿಜೀವನಕ್ಕೆ ಮೈಲೇಜ್ ನೀಡಿತು. ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ, ಉದಯ್ ಚೋಪ್ರಾ ಮೊದಲಾದವರು ನಟಿಸಿದ್ದ ಆ ಚಿತ್ರದಲ್ಲಿ ಇಶಾ ಅವರು ಬಿಕಿನಿ ಧರಿಸಿ ಮಿಂಚಿದ್ದರು. ಅವರು ಹಿಂದೆಂದೂ ತೆರೆಮೇಲೆ ಬಿಕಿನಿ ಧರಿಸಿರಲಿಲ್ಲ. ಈ ಕಾರಣಕ್ಕೆ ಅವರು ಪಾಲಕರ ಬಳಿ ಒಪ್ಪಿಗೆ ಕೇಳಿದ್ದರು.

ಸಿನಿಮಾದಲ್ಲಿ ಬಿಕಿನಿ ಹಾಕಲು ತಾಯಿ ಹೇಮಾ ಮಾಲಿನಿ ಬಳಿ ಒಪ್ಪಿಗೆ ಕೇಳಿದ್ದ ಇಶಾ ಡಿಯೋಲ್
ಇಶಾ ಡಿಯೋಲ್​, ಹೇಮಾ ಮಾಲಿನಿ
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on: Aug 31, 2023 | 7:05 PM

Share

ತೆರೆಮೇಲೆ ಬಿಕಿನಿ (Bikini) ಹಾಕಿ ಮಿಂಚೋಕೆ ಅನೇಕರು ಹಿಂಜರಿಯುತ್ತಾರೆ. ಈ ವಿಚಾರದಲ್ಲಿ ಮಡಿವಂತಿಕೆ ಕಾಯ್ದುಕೊಳ್ಳುತ್ತಾರೆ. ಅಭಿಮಾನಿಗಳು ಇದನ್ನು ಯಾವ ರೀತಿಯಲ್ಲಿ ಸ್ವೀಕರಿಸಬಹುದು ಎನ್ನುವ ಭಯ ಇರುತ್ತದೆ. ಇನ್ನೂ ಕೆಲವರಿಗೆ ಈ ಬಗ್ಗೆ ಚಿಂತೆ ಇರುವುದಿಲ್ಲ. ಯಾರು ಏನೇ ಕಮೆಂಟ್ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ನಟಿ ಇಶಾ ಡಿಯೋಲ್ (Esha Deol) ಕೂಡ ಬಿಕಿನಿ ಹಾಕಿ ಮಿಂಚಿದ್ದರು. ಅಚ್ಚರಿಯ ವಿಚಾರ ಎಂದರೆ, ಬಿಕಿನಿ ಹಾಕಲು ತಾಯಿ ಹೇಮಾ ಮಾಲಿನಿ (Hema Malini) ಬಳಿ ಅವರು ಒಪ್ಪಿಗೆ ಕೇಳಿದ್ದರು! ಈ ವಿಚಾರವನ್ನು ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇಶಾ ಡಿಯೋಲ್ ಅವರು ಸ್ಟಾರ್ ಕಿಡ್. ಇವರ ತಂದೆ ಧರ್ಮೇಂದ್ರ, ತಾಯಿ ಹೇಮಾ ಮಾಲಿನಿ. ತಂದೆ-ತಾಯಿ ಇಬ್ಬರಿಗೂ ಚಿತ್ರರಂಗದ ಹಿನ್ನೆಲೆ ಇದ್ದಿದ್ದರಿಂದ ಇಶಾಗೆ ಸುಲಭದಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. 2002ರಲ್ಲಿ ರಿಲೀಸ್ ಆದ ‘ಕೊಯಿ ಮೆರೆ ದಿಲ್ ಸೆ ಪೂಚೆ’ ಚಿತ್ರದ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು. ಮೊದಲ ಸಿನಿಮಾದಲ್ಲೇ ಫಿಲ್ಮ್​ ಫೇರ್ ಅವಾರ್ಡ್ ಗೆದ್ದು ಬೀಗಿದರು.

2004ರಲ್ಲಿ ರಿಲೀಸ್ ಆದ ‘ಧೂಮ್’ ಸಿನಿಮಾ ಅವರ ವೃತ್ತಿಜೀವನಕ್ಕೆ ಮೈಲೇಜ್ ನೀಡಿತು. ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ, ಉದಯ್ ಚೋಪ್ರಾ, ರಿಮಿ ಸೇನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಇಶಾ ಅವರು ಬಿಕಿನಿ ಧರಿಸಿ ಮಿಂಚಿದ್ದರು. ಅವರು ಹಿಂದೆಂದೂ ತೆರೆಮೇಲೆ ಬಿಕಿನಿ ಧರಿಸಿರಲಿಲ್ಲ. ಈ ಕಾರಣಕ್ಕೆ ಅವರು ಪಾಲಕರ ಬಳಿ ಒಪ್ಪಿಗೆ ಕೇಳಿದ್ದರಂತೆ!

ಇದನ್ನೂ ಓದಿ: ‘ಸೀರೆಯ ಸೆರಗು ಜಾರಿ ಬೀಳಿಸುವ ಆಲೋಚನೆಯಲ್ಲಿ ಆ ನಿರ್ದೇಶಕ ಇದ್ದ’; ಹೇಮಾ ಮಾಲಿನಿ

‘ಬಿಕಿ ಧರಿಸುವ ವಿಚಾರದಲ್ಲಿ ನಾನು ನನ್ನ ತಾಯಿ ಬಳಿ ಒಪ್ಪಿಗೆ ಕೇಳಲೇಬೇಕಿತ್ತು ಎಂದು ನನಗೆ ಅನಿಸಿತು. ಹೀಗಾಗಿ ಹೋಗಿ ಅಮ್ಮನ ಬಳಿ ಕೇಳಿದೆ’ ಎಂದು ಇಶಾ ಹೇಳಿಕೊಂಡಿದ್ದಾರೆ. ಮಗಳ ಪ್ರಶ್ನೆಗೆ ಹೇಮಾ ಮಾಲಿನಿ ನೀಡಿದ ಉತ್ತರ ವಿಶೇಷವಾಗಿತ್ತು. ‘ನೀನು ನನ್ನ ಬಳಿ ಇದನ್ನು ಗಂಭೀರವಾಗಿ ಕೇಳುತ್ತಿದ್ದೀಯಾ? ಫ್ರೆಂಡ್ಸ್ ಜೊತೆ ಸಮುದ್ರಕ್ಕೆ ತೆರಳಿದಾಗ ನೀನು ಬಿಕಿನಿ ಧರಿಸುವುದಿಲ್ಲವೇ?’ ಎಂದು ಇಶಾಗೆ ಹೇಮಾ ಮರು ಪ್ರಶ್ನೆ ಹಾಕಿದ್ದರು. ಈ ಮೂಲಕ ಮಗಳು ತೆರೆಮೇಲೆ ಬಿಕಿನಿ ಧರಿಸಿ ಕಾಣಿಸಿಕೊಳ್ಳಲು ಹೇಮಾ ಅವರ ಯಾವುದೇ ತಕರಾರು ಇರಲಿಲ್ಲ.

ಇದನ್ನೂ ಓದಿ: ತೇಜೋವಧೆ ಆರೋಪ, ಯೂಟ್ಯೂಬ್​ ಚಾನೆಲ್​ಗಳ ಮೇಲೆ ನಟಿ ಹೇಮಾ ದೂರು

2008ರಲ್ಲಿ ರಿಲೀಸ್ ಆದ ‘ಹೈಜಾಕ್’ ಚಿತ್ರವೇ ಕೊನೆ. ಇದಾದ ಬಳಿಕ ಇಶಾ ಡಿಯೋಲ್ ಚಿತ್ರರಂಗದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಅವರು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇಶಾ ಡಿಯೋಲಾ ಆ್ಯಕ್ಟೀವ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್