ಧನುಶ್, ಮಾಧವನ್ ಬಳಿಕ ವಿಜಯ್​ಗೆ ಸಿಗುತ್ತಿದೆ ಮಹತ್ವದ ಗೌರವ

Vijay: ಪ್ರತಿಷ್ಠಿತ ಟೈಮ್ಸ್ ಸ್ಕೇರ್​ನ ಬಿಲ್​ಬೋರ್ಡ್​ ಮೇಲೆ ವಿಜಯ್​ರ ವಿಡಿಯೋ ಪ್ರದರ್ಶಿತವಾಗಿದೆ. ಈ ಖ್ಯಾತಿಗೆ ಪಾತ್ರವಾದ ತಮಿಳಿನ ಮೂರನೇ ನಟ ವಿಜಯ್. ಮೊದಲಿಬ್ಬರು ನಟರು ಯಾರು?

ಧನುಶ್, ಮಾಧವನ್ ಬಳಿಕ ವಿಜಯ್​ಗೆ ಸಿಗುತ್ತಿದೆ ಮಹತ್ವದ ಗೌರವ
ವಿಜಯ್
Follow us
ಮಂಜುನಾಥ ಸಿ.
|

Updated on: Jun 21, 2023 | 3:59 PM

ಭಾರತದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ (Vijay) ಸಹ ಒಬ್ಬರು. ಅವರ ಅಭಿಮಾನಿಗಳು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ತಮಿಳುನಾಡಿನಲ್ಲಿ ಅವರ ಸಿನಿಮಾ ಬಿಡುಗಡೆ ದಿನ ಚಿತ್ರಮಂದಿರ ತುಂಬುವಂತೆ ಸಿಂಗಪುರ, ಮಲೇಷ್ಯಾ, ನ್ಯೂಯಾರ್ಕ್​ಗಳಲ್ಲಿಯೂ ತುಂಬುತ್ತದೆ. ಇದೀಗ ವಿಜಯ್​ರ ಹುಟ್ಟುಹಬ್ಬ (Birthday) ಬಂದಿದ್ದು ಅಭಿಮಾನಿಗಳು (Fan) ನೆಚ್ಚಿನ ನಟನ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಿಸುತ್ತಿದ್ದಾರೆ.

ವಿಜಯ್​ರ ಅಭಿಮಾನಿಗಳು ನ್ಯೂಯಾರ್ಕ್​ನ ಪ್ರತಿಷ್ಠಿತ ಟೈಮ್ಸ್ ಸ್ಕೇರ್​ ವೃತ್ತದ ಬಿಲ್​ಬೋರ್ಡ್​ ಮೇಲೆ ವಿಜಯ್ ವಿಡಿಯೋ ಪ್ರದರ್ಶಿಸಿ ವಿಜಯ್​ಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. ಈ ವರೆಗೆ ತಮಿಳಿನ ಇಬ್ಬರು ಸ್ಟಾರ್ ನಟರ ಚಿತ್ರ ಅಥವಾ ವಿಡಿಯೋ ಮಾತ್ರವೇ ಪ್ರತಿಷ್ಠಿತ ಟೈಮ್ಸ್ ಸ್ಕೇರ್​ನಲ್ಲಿ ಪ್ರದರ್ಶಿತಗೊಂಡಿವೆ. ಇದೀಗ ಈ ಗೌರವಕ್ಕೆ ಪಾತ್ರರಾಗುತ್ತಿರುವ ಮೂರನೇ ತಮಿಳಿನ ಸ್ಟಾರ್ ನಟ ಎಂಬ ಖ್ಯಾತಿಗೆ ವಿಜಯ್ ಪಾತ್ರರಾಗುತ್ತಿದ್ದಾರೆ.

ಈ ಹಿಂದೆ ತಮಿಳಿನ ನಟರಾದ ನಟ ಧನುಶ್ ಹಾಗೂ ಆರ್ ಮಾಧವನ್ ಅವರ ಚಿತ್ರಗಳು ಪ್ರತಿಷ್ಠಿತ ಟೈಮ್ಸ್ ಸ್ಕೇರ್​ನಲ್ಲಿ ಪ್ರದರ್ಶನಗೊಂಡಿವೆ. ಇದರ ಹೊರತಾಗಿ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ ಅವರ ಚಿತ್ರವೂ ಸಹ ಇದೇ ಜಾಗದಲ್ಲಿ ಪ್ರದರ್ಶನಗೊಂಡಿದೆ. ಟೈಮ್ಸ್ ಸ್ಕೇರ್​ನಲ್ಲಿ ಯಾವುದೇ ಸಂಸ್ಥೆಯ ಜಾಹೀರಾತು ಪ್ರದರ್ಶಿಸುವುದಾಗಲಿ, ಯಾರದ್ದೇ ಹುಟ್ಟುಹಬ್ಬಕ್ಕೆ ಶುಭಾಷಯ ಕೋರುವುದಾಗಲಿ ಪ್ರತಿಷ್ಠೆಯ ವಿಷಯವಾಗಿ ಪರಿಗಣಿತವಾಗುತ್ತದೆ. ಇಲ್ಲಿ ಜಾಹೀರಾತು ವಿಡಿಯೋ ಪ್ರದರ್ಶಿಸಲು ಭಾರಿ ಮೊತ್ತದ ಹಣ ತೆರಬೇಕಾಗುತ್ತದೆ.

ಇದನ್ನೂ ಓದಿ:ಮಕ್ಕಳೊಟ್ಟಿಗೆ ಕುಳಿತು ಭಾವುಕರಾದ ವಿಜಯ್, ಅಂಬೇಡ್ಕರ್, ಪೆರಿಯಾರ್ ಅವರ ಓದುವಂತೆ ಸಲಹೆ

ಇದೀಗ ವಿಜಯ್ ಅಭಿಮಾನಿಗಳು ಕೆಲವರು ಭಾರಿ ಮೊತ್ತದ ಹಣ ತೆತ್ತು ವಿಜಯ್​ರ ವಿಡಿಯೋವನ್ನು ಪ್ರದರ್ಶಿಸಿ ಮೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ವಿಜಯ್​ರ ವಿವಿಧ ಸಿನಿಮಾಗಳ ತುಣುಕುಗಳನ್ನು, ಮಾಸ್ ಎಂಟ್ರಿ ವಿಡಿಯೋಗಳನ್ನು ಒಟ್ಟು ಸೇರಿಸಿ ಒಳ್ಳೆಯ ಬ್ಯಾಕ್​ಗ್ರೌಂಡ್ ಸಂಗೀತ ಕೊಟ್ಟು ಟೈಮ್ಸ್ ಸ್ಕೇರ್​ನಲ್ಲಿ ಪ್ರದರ್ಶಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ವಿಜಯ್ ಅಭಿಮಾನಿಗಳು ಈ ವಿಡಿಯೋ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

ವಿಜಯ್​ರ ಹುಟ್ಟುಹಬ್ಬ ಜೂನ್ 22 ರಂದಿದೆ. ಈ ದಿನ ವಿಜಯ್​ರ ಅಭಿಮಾನಿಗಳು ಬಹು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಲು ಅಣಿಯಾಗಿದ್ದಾರೆ. ವಿಜಯ್​ರ ಹೊಸ ಸಿನಿಮಾ ಲಿಯೋನ ಟೀಸರ್ ಸಹ ಇದೇ ದಿನ ಬಿಡುಗಡೆ ಆಗುವ ಸಾಧ್ಯತೆ ಇದೆ. ಜೊತೆಗೆ ವಿಜಯ್​ರ ಮುಂದಿನ ಸಿನಿಮಾ ಸಹ ಘೋಷಣೆ ಆಗಲಿದೆ.

ವಿಜಯ್ ಪ್ರಸ್ತುತ ಲೋಕೇಶ್ ಕನಗರಾಜ್ ನಿರ್ದೇಶನದ ಲಿಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಎದುರು ಸಂಜಯ್ ದತ್ ಸಹ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿ ತ್ರಿಷಾ ನಾಯಕಿ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ