‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಒಂಬತ್ತನೇ ವಾರ ಮುಗಿಸಿ ಮುನ್ನುಗ್ಗುತ್ತಿದೆ. ದೊಡ್ಮನೆಲಿ ದಿನದಿಂದ ದಿನಕ್ಕೆ ಟ್ವಿಸ್ಟ್ಗಳು ಎದುರಾಗುತ್ತಿವೆ. ಇದು ನೋಡುಗರಲ್ಲಿ ಮತ್ತಷ್ಟು ಕುತೂಹಲ ಉಂಟುಮಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಲ್ಲಿ ಕಾಂಪಿಟೇಷನ್ ಕಿಚ್ಚು ಹೆಚ್ಚಾಗುತ್ತಿದೆ. ಈ ವಾರವಂತೂ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ದೊಡ್ಮನೆ ಮಂದಿ ಯಾರು ಕೂಡ ಉತ್ತಮ ಆಟ ಪ್ರದರ್ಶಿಸದ ಕಾರಣ ಈ ವಾರ ಮನೆಗೆ ಕ್ಯಾಪ್ಟನ್ ಕೂಡ ಇರಲಿಲ್ಲ. ಹಾಗಾಗಿ ಬಿಗ್ ಬಾಸ್ ಮಂದಿ ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ಎಲ್ಲ ರೀತಿಯಿಂದಲೂ ಕಸರತ್ತು ಮಾಡಿದ್ದರು.
ಈ ವಾರ ಬಿಗ್ ಬಾಸ್ ‘ಅರಣ್ಯಕಾಂಡ’ ಎಂಬ ವಿಶೇಷ ಟಾಸ್ಕ್ ನೀಡಿದ್ದರು. ಇದರ ಅನುಸಾರ ಮನೆಮಂದಿಯಲ್ಲ ವನವಾಸ ಅನುಭವಿಸಬೇಕಿತ್ತು. ಆಟವಾಡಿ ತಮಗೆ ಬೇಕಾದ ಸೌಕರ್ಯಗಳನ್ನು ಪಡೆದುಕೊಂಡು ಬದುಕಬೇಕಿತ್ತು. ಆದರೆ ಕೆಲವು ಸ್ಪರ್ಧಿಗಳು ಆಟದ ನಿಯಮ ಸರಿಯಾಗಿ ತಿಳಿದುಕೊಳ್ಳದೆ ತಪ್ಪಾಗಿ ಆಡಿದ್ದರು. ಇದರಿಂದ ತಮಗೆ ಸಿಗಬೇಕಾದ ಸೌಕರ್ಯವನ್ನು ಕಳೆದುಕೊಂಡಿದ್ದರು. ಈ ಟಾಸ್ಕ್ನ ವಿಚಾರವಾಗಿ ನಟ ಕಿಚ್ಚ ಸುದೀಪ್ ಅವರು ಶನಿವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಪ್ರತಿಯೊಬ್ಬರು ನಾಮಿನೇಟ್ ಆಗಿದ್ದರು. ಸ್ಪರ್ಧಿಗಳಲ್ಲಿ ಕೆಲವರು ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಮತ್ತೆ ಕೆಲವರು ಸಾಧಾರಣವಾಗಿ ತಮ್ಮ ಆಟವನ್ನು ಪ್ರದರ್ಶಿಸಿದ್ದಾರೆ. ಹಾಗಾಗಿ ಈ ವಾರ ಮನೆಯಿಂದ ಯಾರು ಹೊರ ನಡೆಯುತ್ತಾರೆ ಎಂಬ ಕುತೂಹಲವು ಸಹಜವಾಗಿ ನೋಡುಗರಲ್ಲಿ ಮೂಡಿತ್ತು.
ದೊಡ್ಮನೆಯಿಂದ ಈ ವಾರ ವಿನೋದ್ ಗೊಬ್ಬರಗಾಲ ಅವರು ಹೊರ ನಡೆದಿದ್ದಾರೆ. ‘ಅರಣ್ಯಕಾಂಡ’ ಟಾಸ್ಕ್ನಲ್ಲಿ ಆರ್ಯವರ್ಧನ ಗುರೂಜೀ ಮಾಡಿರುವ ತಪ್ಪನ್ನೇ ಇವರು ಮಾಡಿದ್ದರು. ‘ಸಮಯಕ್ಕೆ ಸವಾಲು’ ಟಾಸ್ಕ್ನಲ್ಲಿಯೂ ಕೂಡ ಅವರು ಸಾಕಷ್ಟು ಬಾರಿ ಫೌಲ್ ಮಾಡಿದ್ದರು. ಜೊತೆಗೆ ಇಷ್ಟು ವಾರದಲ್ಲಿ ಈ ವಾರವೇ ತುಂಬಾ ಕನ್ಫ್ಯೂಶನ್ ಆಗಿದೆ ಎಂದು ಅವರೆ ಹೇಳಿದ್ದಾರೆ. ಈ ಎಲ್ಲ ವಿಚಾರಗಳು ವಿನೋದ್ ಗೊಬ್ಬರಗಾಲ ಅವರು ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಯಿಂದ ಹೊರ ನಡೆಯಲು ಕಾರಣವಾಗಿರಬಹುದಾಗಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:13 pm, Sun, 27 November 22