‘ವಿರೂಪಾಕ್ಷ’ ನಿರ್ದೇಶಕನಿಗೆ ಐಷಾರಾಮಿ ಕಾರು ಗಿಫ್ಟ್ ಮಾಡಿದ ನಿರ್ಮಾಪಕರು
ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದ ‘ವಿರೂಪಾಕ್ಷ’, ಒಟಿಟಿಯಲ್ಲೂ ಮೆಚ್ಚುಗೆ ಪಡೆಯಿತು. ಕಾರ್ತಿಕ್ ಅವರ ಈ ಖುಷಿಯನ್ನು ಹೆಚ್ಚಿಸುವಂತಹ ಕೆಲಸ ನಿರ್ಮಾಪಕರಿಂದ ಆಗಿದೆ.
ಈ ವರ್ಷ ತೆಲುಗಿನಲ್ಲಿ ತೆರೆಗೆ ಬಂದ ‘ವಿರೂಪಾಕ್ಷ’ ಸಿನಿಮಾ (Virupaksha Movie) ಸೂಪರ್ ಹಿಟ್ ಎನಿಸಿಕೊಂಡಿತು. ಹಾರರ್ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಪ್ರೀತಿ, ಪ್ರೇಮದ ಕಥೆಯೂ ಹೈಲೈಟ್ ಆಗಿತ್ತು. ಸಾಯಿ ಧರಮ್ ತೇಜ (Sai Dharam Tej) ಅವರು ಈ ಚಿತ್ರದ ಮೂಲಕ ದೊಡ್ಡ ಯಶಸ್ಸು ಕಂಡರು. ಈ ಚಿತ್ರದ ಮೂಲಕ ನಿರ್ದೇಶಕ ಕಾರ್ತಿಕ್ ದಂಡು ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಈ ಯಶಸ್ಸಿನಿಂದ ಖುಷಿಯಾಗಿರುವ ನಿರ್ಮಾಪಕರು, ಕಾರ್ತಿಕ್ಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತದೆ. ಇದರ ಜೊತೆಗೆ ಕಥೆ ಉತ್ತಮವಾಗಿದ್ದರೆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬುದಕ್ಕೆ ‘ವಿರೂಪಾಕ್ಷ’ ಸಿನಿಮಾ ಉತ್ತಮ ಉದಾಹರಣೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದ ಈ ಚಿತ್ರ, ಒಟಿಟಿಯಲ್ಲೂ ಮೆಚ್ಚುಗೆ ಪಡೆಯಿತು. ಕಾರ್ತಿಕ್ ಅವರ ಈ ಖುಷಿಯನ್ನು ಹೆಚ್ಚಿಸುವಂತಹ ಕೆಲಸ ನಿರ್ಮಾಪಕರಿಂದ ಆಗಿದೆ.
ಕಾರಿನ ಜೊತೆ ಇರುವ ಫೋಟೋಗಳನ್ನು ಕಾರ್ತಿಕ್ ಹಂಚಿಕೊಂಡಿದ್ದಾರೆ. ‘ವಿರೂಪಾಕ್ಷ ಜೀವಮಾನದ ಒಂದೊಳ್ಳೆಯ ನೆನಪು. ನನ್ನ ಗುರು ಸುಕುಮಾರ್ ಅವರಿಗೆ ನನ್ನ ಧನ್ಯವಾದ. ನನ್ನ ಹೀರೋ ಸಾಯಿ ಧರಮ್ ತೇಜ್, ನಿರ್ಮಾಪಕರಾದ ಬಿವಿಎಸ್ಎನ್ ಪ್ರಸಾದ್, ಬಪಿನೀಡು ಭೋಗವಲ್ಲಿಗೆ ಧನ್ಯವಾದ’ ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ಕಾರ್ತಿಕ್ಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
Virupaksha is a life time memory for me.. I would like to extend my gratitude to my guru @aryasukku sir, my hero @IamSaiDharamTej and my producers @BvsnP sir and @dvlns sir for this wonderful gift ….. pic.twitter.com/VbmT5Oeiqa
— karthik varma dandu (@karthikdandu86) June 27, 2023
ಇದನ್ನೂ ಓದಿ: ಚಿರಂಜೀವಿ ಕುಟುಂಬದಿಂದ ನೆರವು ಸಿಕ್ಕಿಲ್ಲ, ಸಹಾಯ ಮಾಡಿ ಹಿಂಸೆ ಅನುಭವಿಸುತ್ತಿದ್ದೇನೆ: ಸಾಯಿ ಧರಮ್ ಜೀವ ಉಳಿಸಿದ ಅಬ್ದುಲ್
‘ವಿರೂಪಾಕ್ಷ’ ಚಿತ್ರದಲ್ಲಿ ಸಾಯಿ ಧರಮ್ ತೇಜಗೆ ಜೊತೆಯಾಗಿ ಸಂಯುಕ್ತಾ ಮೆನನ್ ಕಾಣಿಸಿಕೊಂಡಿದ್ದರು. ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈ ಚಿತ್ರ ಏಪ್ರಿಲ್ 21ರಂದು ಥಿಯೇಟರ್ನಲ್ಲಿ ಬಿಡುಗಡೆ ಆಯಿತು. ‘ವಿರೂಪಾಕ್ಷ’ ಸಿನಿಮಾ ಒಂದು ಸೇಡಿನ ಕಥೆಯನ್ನು ಹೊಂದಿದೆ. ಹೊಡೆದು, ಬಡಿದು ರಿವೇಂಜ್ ತೆಗೆದುಕೊಳ್ಳುವ ಕಥೆ ಇದರಲ್ಲಿ ಇಲ್ಲ. ಹಳ್ಳಿಯಲ್ಲಿ ಒಬ್ಬೊಬ್ಬರಾಗಿ ಸಾಯುತ್ತಾರೆ. ಆತ್ಮಹತ್ಯೆಯಂತೆ ಕಂಡರೂ ಸಾವು ನಿಗೂಢ ರೀತಿಯಲ್ಲಿರುತ್ತದೆ. ಇದನ್ನು ಹೀರೋ ಬೆನ್ನುಹತ್ತಿ ಹೋಗುತ್ತಾನೆ. ಆಗ ಕೆಲ ಭಯಾನಕ ಸತ್ಯಗಳು ಗೊತ್ತಾಗುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ