ಚಿರಂಜೀವಿ ಕುಟುಂಬದಿಂದ ನೆರವು ಸಿಕ್ಕಿಲ್ಲ, ಸಹಾಯ ಮಾಡಿ ಹಿಂಸೆ ಅನುಭವಿಸುತ್ತಿದ್ದೇನೆ: ಸಾಯಿ ಧರಮ್ ಜೀವ ಉಳಿಸಿದ ಅಬ್ದುಲ್

Sai Dharam Tej: ಸಾಯಿ ಧರಮ್ ತೇಜ್ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂದರ್ಭದಲ್ಲಿ ಸಹಾಯ ಮಾಡಿದ್ದ ಅಬ್ದುಲ್, ಆ ಘಟನೆಯ ಬಳಿಕ ನನಗೆ ಬಹಳ ಸಮಸ್ಯೆಗಳಾದವು ಎಂದಿದ್ದಾರಲ್ಲದೆ, ನನಗೆ ಮೆಗಾ ಫ್ಯಾಮಿಲಿಯಿಂದ ಉಡುಗೊರೆಗಳು ಸಿಕ್ಕಿವೆ ಎಂಬುದೆಲ್ಲ ಸುಳ್ಳು ಸುದ್ದಿ ಎಂದಿದ್ದಾರೆ.

ಚಿರಂಜೀವಿ ಕುಟುಂಬದಿಂದ ನೆರವು ಸಿಕ್ಕಿಲ್ಲ, ಸಹಾಯ ಮಾಡಿ ಹಿಂಸೆ ಅನುಭವಿಸುತ್ತಿದ್ದೇನೆ: ಸಾಯಿ ಧರಮ್ ಜೀವ ಉಳಿಸಿದ ಅಬ್ದುಲ್
ಸಾಯಿ ಧರಮ್ ತೇಜ್
Follow us
ಮಂಜುನಾಥ ಸಿ.
|

Updated on:Apr 28, 2023 | 2:27 PM

ಮೆಗಾ ಕುಟುಂಬದ ನಟ ಸಾಯಿ ಧರಮ್ ತೇಜ್ (Sai Dharam Tej) ಕಳೆದ ವರ್ಷಾಂತ್ಯದಲ್ಲಿ ಅಪಘಾತಕ್ಕೆ ಈಡಾಗಿದ್ದರು. ಬೈಕ್ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದ ಅವರನ್ನು ಸೈಯದ್ ಫರ್ಹಾದ್ ಅದ್ಬುಲ್ (Said Abdul) ಹೆಸರಿನ ವ್ಯಕ್ತಿ ಆಸ್ಪತ್ರೆಗೆ ಸೇರಿಸಿದ್ದರು. ಅದ್ಬುಲ್​ಗೆ ಚಿರಂಜೀವಿ (Chiranjeevi) ಕುಟುಂಬದಲ್ಲಿ ಮನೆ, ಕಾರು, ಹಣ ಇನ್ನೂ ಏನೇನೋ ಸಿಕ್ಕಿದೆ ಎಂದೆಲ್ಲ ಸುದ್ದಿಯಾಗಿತ್ತು. ಇತ್ತೀಚೆಗೆ ತಮ್ಮ ಸಿನಿಮಾ ವಿರೂಪಾಕ್ಷಂ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ್ದ ಸಾಯಿ ಧರಮ್, ನಾನು ಅದ್ಬುಲ್ ಅನ್ನು ಭೇಟಿಯಾಗಿ ಧನ್ಯವಾದ ಹೇಳಿದೆ, ನನ್ನ ಫೋನ್ ನಂಬರ್ ಕೊಟ್ಟು ಸಹಾಯಬೇಕಾದರೆ ಕೇಳು ಎಂದಿದ್ದೇನೆ ಎಂದಿದ್ದರು. ಇದೀಗ ಅಬ್ದುಲ್, ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು ತಮಗೆ ಚಿರಂಜೀವಿ ಕುಟುಂಬದಿಂದ ಯಾವುದೇ ಸಹಾಯ ದೊರೆತಿಲ್ಲ, ಬದಲಿಗೆ ಸಹಾಯ ಮಾಡಿದ್ದಕ್ಕೆ ಹಿಂಸೆ ಅನುಭವಿಸುತ್ತಿದ್ದೇನೆ ಎಂದಿದ್ದಾರೆ.

ಸಾಯಿ ಧರಮ್​ ಗೆ ಅಪಘಾತವಾದಾಗ ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ಅವರ ಜೀವ ಉಳಿಯಲು ಸಹಾಯ ಮಾಡಿದ್ದ ಅಬ್ದುಲ್​ ಆ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತಂತೆ. ಅದ್ಬುಲ್​ಗೆ ಚಿರಂಜೀವಿ ಕುಟುಂಬದಿಂದ ದೊಡ್ಡ-ದೊಡ್ಡ ಉಡುಗೊರೆಗಳು ಸಿಕ್ಕಿವೆ ಎಂದೆಲ್ಲ ಗುಲ್ಲಾದ ಕಾರಣ ಅವನ ಕುಟುಂಬ ಸದಸ್ಯರು, ಬಂಧುಗಳೆಲ್ಲ ಕರೆ ಮಾಡಿ ಈ ಬಗ್ಗೆ ವಿಚಾರಿಸಲು ಆರಂಭಿಸಿದರಂತೆ, ನಿನೇಗೇನು ಹಣ ಸಿಕ್ಕಿದೆ, ಮನೆ ಸಿಕ್ಕಿದೆ ಎಂದೆಲ್ಲ ಮಾತನಾಡಲು ಆರಂಭಿಸಿದರಂತೆ, ಇದು ಬಹಳ ಹಿಂಸೆಯಾಗಿ ಪರಿಣಮಿಸಿತು ಎಂದಿದ್ದಾರೆ ಅಬ್ದುಲ್.

ನಾನು ಕೆಲಸ ಮಾಡುತ್ತಿದ್ದ ಕಡೆಯೂ ನನಗೆ ಟಾರ್ಚರ್ ಕೊಡಲು ಪ್ರಾರಂಭ ಮಾಡಿದರು. ಎಲ್ಲರೂ ಈ ಬಗ್ಗೆಯೇ ಪ್ರಶ್ನೆ ಮಾಡುತ್ತಿದ್ದರು. ನನಗೆ ಚಿರಂಜೀವಿ ಕುಟುಂಬದಿಂದ ಯಾವುದೇ ನೆರವು, ಉಡುಗೊರೆ ಸಿಕ್ಕಿಲ್ಲವೆಂದರೂ ಯಾರೂ ನಂಬುತ್ತಿರಲಿಲ್ಲ, ಇದರಿಂದ ಸಿಟ್ಟು ಬಂದಂತಾಗುತ್ತಿತ್ತು, ಕೊನೆಗೆ ನಾನು ಕೆಲವನ್ನೇ ಬಿಟ್ಟೆ. ಈಗ ಬೇರೆಡೆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ ಅಬ್ದುಲ್.

ಮಾತ್ರವಲ್ಲದೆ, ಸಾಯಿ ಧರಮ್ ತೇಜ್​ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ ತಾನು ಅದ್ಬುಲ್​ ಅನ್ನು ಭೇಟಿಯಾಗಿ ನಂಬರ್ ಕೊಟ್ಟಿದ್ದೇನೆ, ಸಹಾಯ ಬೇಕಿದ್ದರೆ ಕೇಳು ಎಂದು ಹೇಳಿರುವುದು ಸಹ ಸುಳ್ಳು ಎಂದಿರುವ ಅಬ್ದುಲ್, ಆ ಘಟನೆಯ ಬಳಿಕ ನನ್ನನ್ನು ಸಾಯಿ ಧರಮ್ ತೇಜ್ ಆಗಲಿ ಅವರ ತಂಡದವರಾಗಲಿ ಭೇಟಿಯಾಗಿಲ್ಲ, ಅವರು ನನಗೆ ಅವರ ಫೋನ್ ನಂಬರ್ ಕೊಟ್ಟಿಲ್ಲ, ನನ್ನ ನಂಬರ್ ಅನ್ನು ತೆಗೆದುಕೊಂಡಿಲ್ಲ. ಆದರೆ ಅವರನ್ನು ಒಮ್ಮೆ ಭೇಟಿಯಾಗಿ, ಆಲ್​ ದಿ ಬೆಸ್ಟ್ ಹೇಳುವ ಆಸೆಯಿದೆ. ನಾನು ವಿರೂಪಾಕ್ಷಂ ಸಿನಿಮಾ ನೋಡಿಲ್ಲ ಆದರೆ ಎಲ್ಲರೂ ಚೆನ್ನಾಗಿದೆ ಎನ್ನುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾ ನೋಡುತ್ತೇನೆ. ನಾನು ಮೆಗಾ ಫ್ಯಾಮಿಲಿ ಅಭಿಮಾನಿ, ಅವರ ಸಿನಿಮಾಗಳೆಲ್ಲವೂ ಹಿಟ್ ಆಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ ಅಬ್ದುಲ್.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ, ಹೈದರಾಬಾದ್​ನ ಮಾದವಪುರದ ಬ್ರಿಡ್ಜ್​ ಒಂದರ ಮೇಲೆ ಸಾಯಿ ಧರಮ್ ತೇಜ್ ಬೈಕ್​ನಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದರು. ಬೈಕ್​ನಿಂದ ಬಿದ್ದಾಗ ಸಾಯಿ ಧರಮ್ ತೇಜ್​ಗೆ ಸ್ಮೃತಿ ಇರಲಿಲ್ಲ. ಅವರ ಎದೆ ಹಾಗೂ ತಲೆಯ ಭಾಗಕ್ಕೆ ಪೆಟ್ಟಾಗಿತ್ತು, ಅಲ್ಲಿಯೇ ಇದ್ದ ಅಬ್ದುಲ್ ಸಾಯಿ ಧರಮ್ ಅವರನ್ನು ಗುರುತಿಸಿ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಒದಗಿಸಲು ನೆರವಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:17 pm, Thu, 27 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ