AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಘು’ ಜತೆ ‘ರಾಘವೇಂದ್ರ ಸ್ಟೋರ್ಸ್​’ ರಿಲೀಸ್​; ‘ಪೊನ್ನಿಯಿನ್​ ಸೆಲ್ವನ್​ 2’ ಎದುರು ‘ಏಜೆಂಟ್​’ ಸ್ಪರ್ಧೆ

ರಾಜ್ಯದಲ್ಲಿ ಎಲೆಕ್ಷನ್​ ಕಾವು ಜೋರಾಗಿದೆ. ಅದರ ನಡುವೆಯೂ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿವೆ. ಈ ವಾರ ತೆರೆಕಂಡಿರುವ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ..

‘ರಾಘು’ ಜತೆ ‘ರಾಘವೇಂದ್ರ ಸ್ಟೋರ್ಸ್​’ ರಿಲೀಸ್​; ‘ಪೊನ್ನಿಯಿನ್​ ಸೆಲ್ವನ್​ 2’ ಎದುರು ‘ಏಜೆಂಟ್​’ ಸ್ಪರ್ಧೆ
ವಿಜಯ್​ ರಾಘವೇಂದ್ರ, ಜಗ್ಗೇಶ್​, ಅಖಿಲ್​, ಜಯಂ ರವಿ
ಮದನ್​ ಕುಮಾರ್​
|

Updated on:Apr 28, 2023 | 11:02 AM

Share

ಈ ಶುಕ್ರವಾರ (ಏಪ್ರಿಲ್​ 28) ಎಂದಿನಂತೆ ಒಂದಷ್ಟು ಹೊಸ ಸಿನಿಮಾಗಳು (New Movies) ಬಿಡುಗಡೆ ಆಗಿವೆ. ಪ್ರತಿ ಸಿನಿಮಾ ಕೂಡ ಒಂದೊಂದು ಕಾರಣಕ್ಕೆ ಪ್ರಮುಖ ಎನಿಸಿಕೊಂಡಿವೆ. ಕನ್ನಡದಲ್ಲಿ ಜಗ್ಗೇಶ್​ ನಟನೆಯ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾ (Raghavendra Stores Movie) ತೆರೆಕಂಡಿದೆ. ಇದು ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಾಣವಾದ ಚಿತ್ರವಾದ್ದರಿಂದ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಇನ್ನು, ಈ ಸಿನಿಮಾದ ಜೊತೆಯಲ್ಲಿ ವಿಜಯ್​ ರಾಘವೇಂದ್ರ ನಟನೆಯ ‘ರಾಘು’ ಚಿತ್ರ ಕೂಡ ಪೈಪೋಟಿ ನೀಡುತ್ತಿದೆ. ಅತ್ತ, ಪರಭಾಷೆಯಲ್ಲೂ ಸ್ಟಾರ್​ ಸಿನಿಮಾಗಳು ರಿಲೀಸ್​ ಆಗಿವೆ. ಬಹುತಾರಾಗಣದ ‘ಪೊನ್ನಿಯಿನ್​ ಸೆಲ್ವನ್​ 2’ (Ponniyin Selvan 2) ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಅಖಿಲ್​ ಅಕ್ಕಿನೇನಿ ಅಭಿನಯದ ‘ಏಜೆಂಟ್​’ ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬಂದಿದೆ. ಅಂತಿಮವಾಗಿ ಯಾರಿಗೆ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ವಾರ ಬಿಡುಗಡೆ ಆಗಿರುವ ಈ ಎಲ್ಲ ಪ್ರಮುಖ ಸಿನಿಮಾಗಳ ಬಗ್ಗೆ ವಿವರ ಇಲ್ಲಿದೆ.

ರಾಘವೇಂದ್ರ ಸ್ಟೋರ್ಸ್​:

ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರು ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ನಟ ಜಗ್ಗೇಶ್​ ಅವರು ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಶ್ವೇತಾ ಶ್ರೀವಾತ್ಸವ್​ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಅಚ್ಯುತ್​ ಕುಮಾರ್​, ರವಿಶಂಕರ್​ ಗೌಡ, ಮಿತ್ರ ಮುಂತಾದವರು ಸಹ ನಟಿಸಿದ್ದಾರೆ. ಅಜನೀಶ್​ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Jaggesh: ತಮ್ಮದೇ ರಾಘವೇಂದ್ರ ಸ್ಟೋರ್ಸ್ ಸಿನಿಮಾ ವೀಕ್ಷಿಸಿ ವಿಮರ್ಶೆ ನೀಡಿದ ಜಗ್ಗೇಶ್

ರಾಘು:

ನಟ ವಿಜಯ್​ ರಾಘವೇಂದ್ರ ಅವರು ಪ್ರತಿ ಬಾರಿಯೂ ವಿಶೇಷವಾದ ಕಥಾಹಂದರ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಾರ ರಿಲೀಸ್​ ಆಗುತ್ತಿರುವ ‘ರಾಘು’ ಸಿನಿಮಾ ಕೂಡ ಆ ಪಟ್ಟಿಗೆ ಸೇರ್ಪಡೆ. ಎಂ. ಆನಂದ್​ ರಾಜ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದೊಂದು ಪ್ರಯೋಗಾತ್ಮಕ ಸಿನಿಮಾ. ಇಡೀ ಚಿತ್ರದಲ್ಲಿ ಇರುವುದು ಒಂದೇ ಪಾತ್ರ. ಅಂಥ ಚಾಲೆಂಜಿಂಗ್​ ಪಾತ್ರಕ್ಕೆ ವಿಜಯ್​ ರಾಘವೇಂದ್ರ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Vijay Raghavendra: ಚಿನ್ನಾರಿ ಮುತ್ತ ಸಿನಿಮಾ ಅವಕಾಶ ದೊರೆತಿದ್ದು ಹೇಗೆ? ಬಾಲ್ಯದ ನೆನಪಿನ ಬುತ್ತಿ ತೆಗೆದಿಟ್ಟ ವಿಜಯ್ ರಾಘವೇಂದ್ರ

‘ಪೊನ್ನಿಯಿನ್​ ಸೆಲ್ವನ್​ 2’:

ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ಪೊನ್ನಿಯಿನ್​ ಸೆಲ್ವನ್​ 1’ ಸಿನಿಮಾ ಕಳೆದ ವರ್ಷ ಹಿಟ್​ ಆಗಿತ್ತು. ಈಗ ‘ಪೊನ್ನಿಯಿನ್​ ಸೆಲ್ವನ್​ 2’ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ವಿಕ್ರಮ್​, ಜಯಂ ರವಿ, ಕಾರ್ತಿ, ತ್ರಿಷಾ ಕೃಷ್ಣನ್​ ಮುಂತಾದವರು ಅಭಿನಯಿಸಿದ್ದಾರೆ. ಕನ್ನಡಕ್ಕೂ ಡಬ್​ ಆಗಿ ಈ ಸಿನಿಮಾ ಬಿಡುಗಡೆ ಆಗಿದೆ.

ಇದನ್ನೂ ಓದಿ: Ponniyin Selvan: ಚನ್ನಪಟ್ಟಣದ ಬೊಂಬೆ ನೋಡಿ ಖುಷಿ ಪಟ್ಟ ನಟಿ ತ್ರಿಷಾ

ಏಜೆಂಟ್​:

ನಟ ಅಖಿಲ್​ ಅಕ್ಕಿನೇನಿ ಪಾಲಿಗೆ ‘ಏಜೆಂಟ್​’ ಸಿನಿಮಾ ಬಹಳ ಮುಖ್ಯ ಎನಿಸಿಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಅವರು ಮಾಸ್​ ಅವತಾರ ತಾಳಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ‘ಏಜೆಂಟ್​’ ಸಿದ್ಧವಾಗಿದೆ. ಅಖಿಲ್​ ಅವರು ಭರ್ಜರಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಬಾಲಿವುಡ್​ ನಟ ದಿನೋ ಮೋರಿಯಾ ಅವರು ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಅವರು ಟಾಲಿವುಡ್​ಗೆ ಕಾಲಿಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:25 pm, Thu, 27 April 23