Samantha: ಸಮಂತಾಗೆ ಮತ್ತೆ ಅನಾರೋಗ್ಯವೇ?

Samantha: ನಟಿ ಸಮಂತಾ ಆಮ್ಲಜನಕ ನಳಿಕೆ ಹಾಕಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಮಂತಾಗೆ ಮತ್ತೆ ಅನಾರೋಗ್ಯ ಕಾಡುತ್ತಿದೆಯೇ ಎಂದು ಅಭಿಮಾನಿಗಳು ಆತಂಕಿತರಾಗಿದ್ದಾರೆ.

Samantha: ಸಮಂತಾಗೆ ಮತ್ತೆ ಅನಾರೋಗ್ಯವೇ?
ಸಮಂತಾ
Follow us
ಮಂಜುನಾಥ ಸಿ.
|

Updated on: Apr 27, 2023 | 6:02 PM

ಸಮಂತಾಗೆ (Samantha) ಆರೋಗ್ಯ ಸರಿಯಿಲ್ಲ ಎಂಬ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಿರುವೆ. ಅನಾರೋಗ್ಯದ ನಡುವೆಯೇ ಯಶೋಧ ಸಿನಿಮಾದ ಚಿತ್ರೀಕರಣ (Shooting) ಮುಗಿಸಿದ್ದ ನಟಿ ಸಮಂತಾ ಆ ಬಳಿಕ ಆಸ್ಪತ್ರೆಗೆ (Health) ದಾಖಲಾಗಿ ಚಿಕಿತ್ಸೆ, ವಿಶ್ರಾಂತಿಗಳ ಬಳಿಕ ಚೇತರಿಸಿಕೊಂಡಿದ್ದರು. ಅದಾದ ಬಳಿಕ ಇತ್ತೀಚೆಗೆ ಶಾಕುಂತಲಂ ಸಿನಿಮಾದ ಪ್ರಚಾರ ಸಂದರ್ಭದಲ್ಲಿಯೂ ಸಮಂತಾಗೆ ಮತ್ತೆ ಅನಾರೋಗ್ಯ ಕಾಡಿತ್ತು. ಇದೀಗ ಸಮಂತಾ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಚಿತ್ರದಲ್ಲಿ ಸಮಂತಾ ಮುಖಕ್ಕೆ ಆಮ್ಲಜನಕದ ಮಾಸ್ಕ್ ಹಾಕಿಕೊಂಡಿದ್ದಾರೆ. ಸಮಂತಾಗೆ ಮತ್ತೆ ಅನಾರೋಗ್ಯ ಕಾಡುತ್ತಿದೆಯೇ ಎಂದು ಅಭಿಮಾನಿಗಳು ಆತಂಕಿತರಾಗಿದ್ದಾರೆ. ಆದರೆ ಅಂಥಹದ್ದೇನೂ ಆಗಿಲ್ಲ.

ಸಮಂತಾ ಆಮ್ಲಜನಕದ ಮಾಸ್ಕ್ ಹಾಕಿಕೊಂಡಿರುವುದು ಅನಾರೋಗ್ಯದ ಕಾರಣಕ್ಕಲ್ಲ ಬದಲಿಗೆ ಆರೋಗ್ಯ ಸುಧಾರಣೆಯ ಕಾರಣಕ್ಕೆ. ಪದೇ ಅನಾರೋಗ್ಯಕ್ಕೆ ಈಡಾಗುವ ಸಮಂತಾ, ದೇಹದ ರೋಗನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ಹಾಗೂ ದೇಹದಲ್ಲಿರುಬಹುದಾದ ಇನ್​ಫೆಕ್ಷನ್ ಅನ್ನು ದೂರ ಮಾಡಿಕೊಳ್ಳಲು ಚಿಕತ್ಸೆಯೊಂದನ್ನು ಪಡೆದುಕೊಳ್ಳುತ್ತಿದ್ದಾರೆ. ಅದರ ಭಾಗವಾಗಿಯೇ ಆಕ್ಸಿಜನ್ ಮಾಸ್ಕ್ ಹಾಕಿಕೊಂಡಿದ್ದಾರೆ.

ಸಮಂತಾ ಪ್ರಸ್ತುತ ಎಚ್​ಬೋಟ್ ಥೆರಪಿ ಅಥವಾ ಹೈಪರ್ ಬ್ಯಾರಿಕ್ ಥೆರಪಿಗೆ ಒಳಗಾಗಿದ್ದಾರೆ. ಈ ಚಿಕಿತ್ಸಾ ವಿಧಾನದಲ್ಲಿ ಆಮ್ಲಜನಕವನ್ನು ನಿರ್ದಿಷ್ಟ ಒತ್ತಡದಲ್ಲಿ ಮೂಗು, ಬಾಯಿಯ ಮೂಲಕ ದೇಹದ ಒಳಕ್ಕೆ ಹರಿಸಲಾಗುತ್ತದೆ. ಇದು ದೇಹದಲ್ಲಿನ ಜೀವಕೋಶಗಳಿಗೆ ಶಕ್ತಿ ತುಂಬಿ ರೋಗನಿರೋಧಕ ಶಕ್ತಿಯನ್ನು ಉಲ್ಬಣಗೊಳಿಸುತ್ತದೆ. ಹಾಗೂ ದೇಹದ ಒಳಗೆ ಇರಬಹುದಾದ ಸೋಂಕನ್ನು ಗುಣಪಡಿಸುತ್ತದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ಸಮಂತಾ ಈಡಾಗಿದ್ದರು. ಅವರಿಗೆ ಮಯೋಸಿಟ್ಸ್ ಹೆಸರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಇದು ತೀವ್ರ ಬಲಹೀನತೆಯನ್ನು ರೋಗಿಗೆ ತರುತ್ತದೆ. ಸಣ್ಣ ಕೆಲಸವನ್ನೂ ತನ್ನಂತಾನೆ ಮಾಡಿಕೊಳ್ಳಲಾಗುವುದಿಲ್ಲ. ಚೇರು ಎಳೆಯುವುದು, ಲೋಟ ಎತ್ತುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗುತ್ತದೆ. ನಟಿ ಸಮಂತಾ ಈ ರೀತಿಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಆದರೆ ಸತತ ಚಿಕಿತ್ಸೆ, ವಿಶ್ರಾಂತಿಯ ಬಳಿಕ ಸಮಸ್ಯೆಯಿಂದ ಹೊರಬಂದರು.

ಇದನ್ನೂ ಓದಿ:ಸೌಂದರ್ಯ ಉದಾಹರಣೆ ನೀಡಿ ಸಮಂತಾಗೆ ಟಾಂಗ್ ಕೊಟ್ಟ ಚಿಟ್ಟಿಬಾಬು, ಕರ್ಣ ಕೇಶದ ಬಗ್ಗೆಯೂ ಮಾತು

ಶಾಕುಂತಲಂ ಸಿನಿಮಾದ ಪ್ರಚಾರದ ಸಮಯದಲ್ಲಿ ತಾವು ಮಯೋಸಿಟ್ಸ್ ನಿಂದ ಬಹುತೇಕ ಗುಣವಾಗಿರುವುದಾಗಿ ಹೇಳಿಕೊಂಡಿದ್ದರು. ಆದರೆ ಅದೇ ಸಮಯದಲ್ಲಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತು, ಇದರಿಂದ ಕೊನೆಯ ಹಂತದಲ್ಲಿ ಪ್ರಚಾರದಿಂದ ಸಮಂತಾ ದೂರ ಉಳಿಯಬೇಕಾಯಿತು. ಆದರೆ ಶೀಘ್ರವಾಗಿ ಚೇತರಿಸಿಕೊಂಡ ಸಮಂತಾ ಲಂಡನ್​ಗೆ ತೆರಳಿ ಸಿಟಾಡೆಲ್ ವೆಬ್ ಸರಣಿಯ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದರು.

ಸಮಂತಾ ಹಲವು ಸಿನಿಮಾಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಯಶೋಧ ಹಾಗೂ ಶಾಕುಂತಲಂ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಿ ಫ್ಲಾಪ್ ಆಗಿವೆ. ಇದೀಗ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿಟಾಡೆಲ್​ ವೆಬ್ ಸರಣಿಯ ಹಿಂದಿ ಆವೃತ್ತಿಯಲ್ಲಿಯೂ ನಟಿಸುತ್ತಿದ್ದಾರೆ. ಇವುಗಳ ಬಳಿಕ ಒಂದು ಹಿಂದಿ ಸಿನಿಮಾ ಹಾಗೂ ಒಂದು ಇಂಗ್ಲೀಷ್ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ