ನಟಿ ಸಾಯಿ ಧನ್ಶಿಕಾ ಜೊತೆ ಮದುವೆಗೆ ಸಜ್ಜಾದ ಕಾಲಿವುಡ್ ನಟ ವಿಶಾಲ್

47ನೇ ವಯಸ್ಸಿನಲ್ಲಿ ನಟ ವಿಶಾಲ್ ಅವರು ಮದುವೆ ಬಗ್ಗೆ ನಿರ್ಧಾರ ಮಾಡಿದಂತಿದೆ. ಖ್ಯಾತ ನಟಿ ಸಾಯಿ ಧನ್ಶಿಕಾ ಜೊತೆ ವಿಶಾಲ್​ ಮದುವೆ ನೆರವೇರಲಿದೆ ಎಂದು ಸುದ್ದಿ ಆಗುತ್ತಿದೆ. ಸದ್ಯದಲ್ಲೇ ಅವರಿಬ್ಬರು ಎಂಗೇಜ್​ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಧಿಕೃತ ಹೇಳಿಕೆ ಹೊರಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ನಟಿ ಸಾಯಿ ಧನ್ಶಿಕಾ ಜೊತೆ ಮದುವೆಗೆ ಸಜ್ಜಾದ ಕಾಲಿವುಡ್ ನಟ ವಿಶಾಲ್
Sai Dhanshika, Vishal

Updated on: May 19, 2025 | 7:09 PM

ಕಾಲಿವುಡ್​ನ ಖ್ಯಾತ ನಟ ವಿಶಾಲ್ (Vishal Krishna) ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸುದ್ದಿ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಆಗಿತ್ತು. ಕಾರ್ಯಕ್ರಮವೊಂದರಲ್ಲಿ ಅವರು ಕುಸಿದು ಬಿದ್ದಿದ್ದರು. ಈಗ ಅವರ ಮದುವೆ (Vishal Marriage) ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಹೌದು, ವಿಶಾಲ್ ಕೃಷ್ಣ ಅವರು ಮದುವೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಹಾಗಾದರೆ ಹುಡುಗಿ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ತಮಿಳು ಚಿತ್ರರಂಗದ ಖ್ಯಾತ ನಟಿ ಸಾಯಿ ಧನ್ಶಿಕಾ (Sai Dhanshika) ಜೊತೆ ವಿಶಾಲ್ ಹಸೆಮಣೆ ಏರುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಇದು ಲವ್ ಮ್ಯಾರೇಜ್ ಎಂದು ಕೂಡ ಹೇಳಲಾಗುತ್ತಿದೆ.

ವಿಶಾಲ್ ಅವರಿಗೆ ಈಗ 47 ವರ್ಷ ವಯಸ್ಸು. ಅವರು ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಮೊದಲಿನಿಂದಲೂ ಕೇಳಿಬರುತ್ತಿತ್ತು. ಈ ಹಿಂದೆ ಕೆಲವು ನಟಿಯರ ಜೊತೆಗೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿದ್ದುಂಟು. ಈಗ ಸಾಯಿ ಧನ್ಶಿಕಾ ಜೊತೆ ಅವರು ಮದುವೆ ಆಗುತ್ತಾರೆ ಎಂಬ ಗಾಸಿಪ್ ಹಬ್ಬಿದೆ. ಅವರಿಂದಲೇ ಅಧಿಕೃತ ಹೇಳಿಕೆ ಹೊರಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಕಲಾವಿದರ ಸಂಘದ ಕಟ್ಟಡ ನಿರ್ಮಾಣದ ಉಸ್ತುವಾರಿಯನ್ನು ವಿಶಾಲ್ ಅವರು ವಹಿಸಿಕೊಂಡಿದ್ದರು. ಆ ಕೆಲಸ ಮುಗಿದ ಬಳಿಕ ತಾವು ಮದುವೆ ಆಗುವುದಾಗಿ ಅವರು ಹೇಳಿದ್ದರು. ಈಗ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಹಾಗಾಗಿ ಅವರು ಮದುವೆ ಬಗ್ಗೆ ನಿರ್ಧಾರ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ‘ಹೌದು, ನನಗೆ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ನಮ್ಮದು ಲವ್ ಮ್ಯಾರೇಜ್ ಆಗಿರಲಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುತ್ತೇನೆ’ ಎಂದು ವಿಶಾಲ್ ಅವರು ಹೇಳಿದ್ದರು.

ಇದನ್ನೂ ಓದಿ
ವಿಶೇಷ ಸೀರೆ ಧರಿಸಿ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಕನ್ನಡದ ನಟಿ ದಿಶಾ ಮದನ್
ಊರ್ವಶಿ ರೌಟೆಲಾಗೆ ಕಾನ್ ಫೆಸ್ಟಿವಲ್​ನಲ್ಲಿ ಅವಮಾನ, ನಡೆದಿದ್ದೇನು?
ಊರ್ವಶಿ ರೌಟೇಲಾ ಧರಿಸಿದ ಈ ಗೌನ್ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿ!
17ನೇ ವಯಸ್ಸಿಗೆ ಮಹತ್ವದ ಸಾಧನೆ; ಕಾನ್ ಚಿತ್ರೋತ್ಸವದಲ್ಲಿ ನಿತಾಂಶಿ ಗೋಯಲ್

ಸಾಯಿ ಧನ್ಶಿಕಾ ಅವರು ನಟಿಸಿರುವ ಹೊಸ ಸಿನಿಮಾದ ಟ್ರೇಲರ್​ ಲಾಂಚ್ ಕಾರ್ಯಕ್ರಮಕ್ಕೆ ವಿಶಾಲ್ ಅವರೇ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಅದನ್ನು ಸ್ವತಃ ಸಾಯಿ ಧನ್ಶಿಕಾ ಅವರೇ ಸ್ಪಷ್ಟಪಡಿಸಿದ್ದಾರೆ. ಈ ವೇದಿಕೆಯಲ್ಲಿ ವಿಶಾಲ್ ಅವರು ತಮ್ಮ ಪ್ರೀತಿ ಮತ್ತು ಮದುವೆ ಬಗ್ಗೆ ಮಾಹಿತಿ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ಕುಸಿದು ಬಿದ್ದ ವಿಶಾಲ್; ಅವರ ಸ್ಥಿತಿ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ

ಸದ್ಯಕ್ಕಂತೂ ಸಾಯಿ ಧನ್ಶಿಕಾ ಮತ್ತು ವಿಶಾಲ್ ಅವರು ಈ ವಿಚಾರವನ್ನು ಬಹಿರಂಗಪಡಿಸಿಲ್ಲ. ಆದರೆ ಶೀಘ್ರದಲ್ಲೇ ನಿಶ್ಚಿತಾರ್ಥ ನಡೆಯಲಿದೆ ಎಂದು ಗಾಸಿಪ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಸಾಯಿ ಧನ್ಶಿಕಾ ಹಾಗೂ ವಿಶಾಲ್ ನಡುವೆ 12 ವರ್ಷಗಳ ಅಂತರ ಇದೆ. ಸಾಯಿ ಧನ್ಶಿಕಾ ಅವರಿಗೆ ಈಗ 35 ವರ್ಷ ವಯಸ್ಸು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.