ಪ್ರಶಾಂತ್ ನೀಲ್-ಜೂ ಎನ್​ಟಿಆರ್ ಸಿನಿಮಾಕ್ಕೆ ಯುವ ನಾಯಕ ನಟ ಎಂಟ್ರಿ

|

Updated on: Jun 01, 2024 | 10:35 PM

ಜೂ ಎನ್​ಟಿಆರ್ ಮುಂದಿನ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಭಾರಿ ಬಜೆಟ್​ನ ಸಿನಿಮಾ ಇದಾಗಿದ್ದು, ಸಿನಿಮಾಕ್ಕಾಗಿ ನಟರ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಶಾಂತ್ ನೀಲ್ ತೊಡಗಿದ್ದಾರೆ. ಸಿನಿಮಾದ ಪವರ್​ಫುಲ್ ಪಾತ್ರವೊಂದಕ್ಕೆ ತೆಲುಗಿನ ಬೇಡಿಕೆಯ ಯುವ ನಟನನ್ನು ಆಯ್ಕೆ ಮಾಡಿದ್ದಾರೆ.

ಪ್ರಶಾಂತ್ ನೀಲ್-ಜೂ ಎನ್​ಟಿಆರ್ ಸಿನಿಮಾಕ್ಕೆ ಯುವ ನಾಯಕ ನಟ ಎಂಟ್ರಿ
Follow us on

ಕೆಜಿಎಫ್ 2’ (KGF 2) ಬಳಿಕ ತೆಲುಗು ಚಿತ್ರರಂಗಕ್ಕೆ ಹಾರಿರುವ ಪ್ರಶಾಂತ್ ನೀಲ್ (Prashanth Neel) ‘ಸಲಾರ್’ ಮೂಲಕ ಈಗಾಗಲೇ ಭಾರಿ ದೊಡ್ಡ ಹಿಟ್ ನೀಡಿದ್ದಾರೆ. ‘ಸಲಾರ್ 2’ ಸಿನಿಮಾದ ಚಿತ್ರೀಕರಣವನ್ನು ಇನ್ನೇನು ಪ್ರಾರಂಭಿಸಬೇಕಾಗಿದೆ. ಆದರೆ ಪ್ರಶಾಂತ್ ನೀಲ್ ಮೊದಲು ಜೂ ಎನ್​ಟಿಆರ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆ ಸಿನಿಮಾ ಮುಗಿದ ಬಳಿಕವಷ್ಟೆ ‘ಸಲಾರ್ 2’ಗೆ ಕೈ ಹಾಕಲಿದ್ದಾರಂತೆ. ಅಂದಹಾಗೆ ಪ್ರಶಾಂತ್ ನೀಲ್ ಹಾಗೂ ಜೂ ಎನ್​ಟಿಆರ್ ಸಿನಿಮಾಕ್ಕೆ ನಟರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ತೆಲುಗು ಚಿತ್ರರಂಗದಲ್ಲಿ ಹೊಸ ಹವಾ ಎಬ್ಬಿಸಿರುವ ಯುವ ನಾಯಕ ನಟ ಈ ಸಿನಿಮಾದ ಭಾಗವಾಗಲಿದ್ದಾರೆ.

ಕೆಲವು ಉತ್ತಮ ಸಿನಿಮಾಗಳನ್ನು ನೀಡಿ ಬೇಡಿಕೆಯ ಯುವ ನಾಯಕ ಎನಿಸಿಕೊಂಡಿರುವ ವಿಶ್ವಕ್ ಸೇನ್, ಜೂ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸಿನಿಮಾದಲ್ಲಿ ನಾಯಕ ನಟನಷ್ಟೆ ಗಟ್ಟಿಯಾದ ಇನ್ನೊಂದು ಪಾತ್ರವಿದ್ದು, ಆ ಪಾತ್ರವನ್ನು ವಿಶ್ವಕ್ ನಿರ್ವಹಿಸಲದ್ದಾರೆ. ವಿಶ್ವಕ್ ಹೆಸರನ್ನು ಸ್ವತಃ ಜೂ ಎನ್​ಟಿಆರ್ ಸೂಚಿಸಿದ್ದು, ವಿಶ್ವಕ್ ಸೇನ್ ಸಹ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಿಶ್ವಕ್ ಸೇನ್, ‘ಈ ನಗರಾನಿಕಿ ಏಮಯ್ಯಿಂದಿ’, ‘ಹಿಟ್’ ಸಿನಿಮಾ ಮೂಲಕ ದೊಡ್ಡ ಹಿಟ್ ಹೊಡೆದವರು. ಇತ್ತೀಚೆಗಷ್ಟೆ ವಿಶ್ವಕ್ ನಟಸಿರುವ ‘ಗ್ಯಾಂಗ್ಸ್ ಆಫ್ ಗೋಧಾವರಿ’ ಸಿನಿಮಾ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ವಿಶ್ವಕ್ ಸೇನ್​ಗೆ ಜೂ ಎನ್​ಟಿಆರ್ ಎಂದರೆ ಬಹಳ ಅಚ್ಚು ಮೆಚ್ಚು, ವಿಶ್ವಕ್​ರ ಮೆಚ್ಚಿನ ನಟ ಜೂ ಎನ್​ಟಿಆರ್. ಇದೀಗ ಅವರ ಜೊತೆಗೇ ಒಂದೇ ಸಿನಿಮಾದಲ್ಲಿ ನಟಿಸುವ ಅವಕಾಶ ವಿಶ್ವಕ್​ಗೆ ಒದಗಿ ಬಂದಿದೆ. ವಿಶ್ವಕ್​ಗೆ ಈ ಮುಂಚೆ ನಂದಮೂರಿ ಬಾಲಕೃಷ್ಣ ಜೊತೆ ನಟಿಸುವ ಅವಕಾಶ ಒದಗಿಬಂದಿತ್ತು, ಆದರೆ ಅದನ್ನು ಅವರು ನಿರಾಕರಿಸಿದ್ದರು, ಈಗ ಜೂ ಎನ್​ಟಿಆರ್ ಜೊತೆ ನಟಿಸಲು ಓಕೆ ಎಂದಿದ್ದಾರೆ.

ಇದನ್ನೂ ಓದಿ:ಜೂ ಎನ್​ಟಿಆರ್ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ನಂದಮೂರಿ ಕುಟುಂಬದ ನಟ

ಜೂ ಎನ್​ಟಿಆರ್ ಪ್ರಸ್ತುತ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಕೆಲವು ದಿನಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆ ಆಗಲಿದೆ. ‘ದೇವರ’ ಸಿನಿಮಾ ಬಿಡುಗಡೆಗೆ ಮುನ್ನವೇ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಸಹ ಸಿನಿಮಾಕ್ಕೆ ತಯಾರಿ ಆರಂಭಿಸಿದ್ದು, ನಟರ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿದ್ದು, ಸಿನಿಮಾವನ್ನು ಮೈತ್ರಿ ಮೂವಿ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.

ಇನ್ನು ಪ್ರಶಾಂತ್ ನೀಲ್ ಪ್ರಸ್ತುತ ‘ಸಲಾರ್ 2’ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಆದರೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ನಡುವೆ ಬಂದಿರುವ ಭಿನ್ನಾಭಿಪ್ರಾಯಗಳಿಂದಾಗಿ ‘ಸಲಾರ್ 2’ ಸಿನಿಮಾ ಪ್ರಾರಂಭವಾಗಿಲ್ಲ ಎನ್ನಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ‘ಸಲಾರ್ 2’ ಸಿನಿಮಾ ಪ್ರಾರಂಭವೇ ಆಗುವುದಿಲ್ಲ ಎಂದೂ ಸಹ ಹೇಳಲಾಗುತ್ತಿದೆ. ಇದ್ಯಾವುದರ ಬಗ್ಗೆಯೂ ನೀಲ್ ಆಗಲಿ ಹೊಂಬಾಳೆಯಾಗಲಿ, ಪ್ರಭಾಸ್ ಆಗಲಿ ಪ್ರತಿಕ್ರಿಯಿಸಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ