Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ ಎನ್​ಟಿಆರ್ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ನಂದಮೂರಿ ಕುಟುಂಬದ ನಟ

ತೆಲುಗು ರಾಜ್ಯಗಳ ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಭಾರಿ ಪ್ರಭಾವ ಹೊಂದಿರುವ ನಂದಮೂರಿ ಕುಟುಂಬ ಒಡೆದು ಎರಡು ಭಾಗವಾಗಿದೆ. ಇದೀಗ ನಂದಮೂರಿ ಚೈತನ್ಯ ಕೃಷ್ಣ, ಜೂ ಎನ್​ಟಿಆರ್ ಅವರ ಅಭಿಮಾನಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಜೂ ಎನ್​ಟಿಆರ್ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ನಂದಮೂರಿ ಕುಟುಂಬದ ನಟ
Follow us
ಮಂಜುನಾಥ ಸಿ.
|

Updated on: May 22, 2024 | 5:03 PM

ತೆಲುಗು ರಾಜ್ಯಗಳ ರಾಜಕೀಯ, ಸಿನಿಮಾ ರಂಗದಲ್ಲಿ ಭಾರಿ ದೊಡ್ಡ ಪ್ರಭಾವ ಹೊಂದಿರುವ ನಂದಮೂರಿ ಕುಟುಂಬ (Nandamuri Family) ಈಗ ಮೊದಲಿನಂತಿಲ್ಲ. ಚಂದ್ರಬಾಬು ನಾಯ್ಡು, ಬಾಲಕೃಷ್ಣ ಅವರದ್ದೇ ಒಂದು ಬಣವಾಗಿದ್ದರೆ, ಜೂ ಎನ್​ಟಿಆರ್ ಹಾಗೂ ಅವರ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರದ್ದೇ ಒಂದು ಪ್ರತ್ಯೇಕ ಗುಂಪಾಗಿದೆ. ನಂದಮೂರಿ ಕುಟುಂಬದವರು, ಜೂ ಎನ್​ಟಿಆರ್ ಹಾಗೂ ಅವರ ಸಹೋದರನನ್ನು ಕುಟುಂಬವೆಂದು ಪರಿಗಣಿಸುವುದನ್ನೇ ಬಿಟ್ಟಿದ್ದಾರೆ. ಮಾತ್ರವಲ್ಲ, ಈಗ ಬದ್ಧ ವೈರಿಯಂತೆ ನೋಡುತ್ತಿದ್ದಾರೆ. ಇದೀಗ ಬಾಲಕೃಷ್ಣ ಅವರ ಬಣದಲ್ಲಿ ಗುರುತಿಸಿಕೊಂಡಿರುವ ನಟ ನಂದಮೂರಿ ಚೈತನ್ಯ ಕೃಷ್ಣ, ಜೂ ಎನ್​ಟಿಆರ್ ಅಭಿಮಾನಿಗಳಿಗೆ, ಪರೋಕ್ಷವಾಗಿ ಜೂ ಎನ್​ಟಿಆರ್​ಗೆ ಎಚ್ಚರಿಕೆ ನೀಡಿದ್ದಾರೆ.

ನಂದಮೂರಿ ಕುಟುಂಬಕ್ಕೆ ಸೇರಿದ ಚೈತನಯ ಕೃಷ್ಣ, ಫೇಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ನೇರವಾಗಿ ಜೂ ಎನ್​ಟಿಆರ್ ಅಭಿಮಾನಿಗಳನ್ನು ಗುರಿಯಾಗಿಸಿ ಎಚ್ಚರಿಕೆ ನೀಡಿದ್ದಾರೆ. ‘ಜೂ ಎನ್​ಟಾರ್ ಅಭಿಮಾನಿಗಳಿಗೆ ಇದು ಎಚ್ಚರಿಕೆ, ಯಾರ್ಯಾರು ವೈಸಿಪಿ (ಜಗನ್ ಪಕ್ಷ) ಅದರಲ್ಲಿಯೂ ಕೊಡಲಿ ನಾನಿ ಹಾಗೂ ವಲ್ಲಭನೇನಿ ವಂಶಿಗೆ ಬೆಂಬಲ ನೀಡಿದ್ದೀರೋ ನೀವೆಲ್ಲ ನಮ್ಮನ್ನು ಏನೂ ಮಾಡಲಾಗದು, ನಮ್ಮ ಕೂದಲು ಸಹ ಕೀಳಲಾರಿರಿ. ನಾನು ಇರಬೇಕಾದರೆ ಚಂದ್ರಬಾಬು ನಾಯ್ಡು ಹಾಗೂ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಅವರನ್ನು ಮುಟ್ಟಲು ಸಹ ಸಾಧ್ಯವಿಲ್ಲ. ನನ್ನ ಸಿನಿಮಾ ಬಿಡುಗಡೆ ಆದಾಗ ನೀವೆಲ್ಲ ಸೇರಿ ನನ್ನನ್ನು ಎಷ್ಟು ಟ್ರೋಲ್ ಮಾಡಿದಿರಿ, ಇನ್ನು ಮುಂದೆ ಎಚ್ಚರಿಕೆಯಿಂದಿರಿ’ ಎಂದಿದ್ದಾರೆ.

ಇದನ್ನೂ ಓದಿ:ಎನ್​ಡಿಎ ಅಧಿಕಾರಕ್ಕೆ ಬಂದರೆ ಹಜ್​ ಯಾತ್ರೆಗೆ 1 ಲಕ್ಷ ರೂ. ನೆರವು: ಚಂದ್ರಬಾಬು ನಾಯ್ಡು

ವೈಸಿಪಿ ಪಕ್ಷದಲ್ಲಿರುವ ಕೊಡಲಿ ನಾನಿ ಹಾಗೂ ವಲ್ಲಭನೇನಿ ವಂಶಿ ಜೂ ಎನ್​ಟಿಆರ್​ಗೆ ಅತ್ಯಾಪ್ತರು. ಅಸಲಿಗೆ ಈ ಇಬ್ಬರು ಮೊದಲಿಗೆ ನಂದಮೂರಿ ಕುಟುಂಬದ ಟಿಡಿಪಿ ಪಕ್ಷದಲ್ಲಿಯೇ ಇದ್ದರು. ಈಗ ನಂದಮೂರಿ ಕುಟುಂಬ ಜೂ ಎನ್​ಟಿಆರ್ ಅನ್ನು ಕುಟುಂಬದಿಂದ ಹೊರಗಿಟ್ಟಿರುವ ಕಾರಣ ಜೂ ಎನ್​ಟಿಆರ್ ಅಭಿಮಾನಿಗಳು ಟಿಡಿಪಿ ಪಕ್ಷದ ಬದಲಿಗೆ ವೈಸಿಪಿ ಪಕ್ಷವನ್ನು ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ. ಜೂ ಎನ್​ಟಿಆರ್ ಸಹ ಚುನಾವಣೆ ಸಂದರ್ಭದಲ್ಲಿ ಟಿಡಿಪಿ ಪರವಾಗಿ ಪ್ರಚಾರಕ್ಕೆ ಹೋಗಿರಲಿಲ್ಲ. ಅಲ್ಲದೆ ಅವರ ಪರವಾಗಿ ಟ್ವೀಟ್ ಸಹ ಮಾಡಿರಲಿಲ್ಲ.

ಈಗ ಜೂ ಎನ್​ಟಿಆರ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿರುವ ಚೈತನ್ಯ ಕೃಷ್ಣ, ಸೀನಿಯರ್ ಎಂಟಿಆರ್ ಪುತ್ರ ನಂದಮೂರಿ ಜಯಕೃಷ್ಣ ಅವರ ಪುತ್ರ ಆಗಿದ್ದಾರೆ. ಚೈತನ್ಯ ಕೃಷ್ಣ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಕೆಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ, ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ಸಹ ನೇರವಾಗಿಯೇ ಜೂ ಎನ್​ಟಿಆರ್ ಅನ್ನು ಟೀಕಿಸಿದ್ದರು. ಆದರೆ ನಂದಮೂರಿ ಕುಟುಂಬವು ಯಾವ ಕಾರಣಕ್ಕೆ ಜೂ ಎನ್​ಟಿಆರ್ ಹಾಗೂ ಅವರ ಸಹೋದರನನ್ನು ದೂರ ಇಟ್ಟಿಗೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​ ಅನ್ನು ಟಿಡಿಪಿಯ ಮುಂದಿನ ನಾಯಕನ್ನಾಗಿ ಮಾಡುವ ಕಾರಣಕ್ಕೆ ಭಾರಿ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಜೂ ಎನ್​ಟಿಆರ್ ಅನ್ನು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್