ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ

ರಘು ಅವರು ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿಯಾಗಿ ಸದ್ದು ಮಾಡುತ್ತಿದ್ದಾರೆ. ಅವರು ನಟಿಸಿರುವ 'ವೃಷಭ' ಸಿನಿಮಾ ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ತೆರೆಕಂಡಿದೆ. ಮೋಹನ್ ಲಾಲ್ ಚಿತ್ರದಲ್ಲಿ ರಘು ವಿಲನ್ ಆಗಿ ಕಾಣಿಸಿಕೊಂಡಿದ್ದು, ಭಯಾನಕ ಮೇಕ್ಓವರ್‌ನಿಂದಾಗಿ ಅವರನ್ನು ಗುರುತಿಸುವುದು ಕಷ್ಟವಾಗಿದೆ. 'ಕಾಂತಾರ: ಚಾಪ್ಟರ್ 1' ನಲ್ಲೂ ಅವರು ಇದೇ ರೀತಿಯ ಪಾತ್ರ ಮಾಡಿದ್ದರು.

ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ
ರಘು

Updated on: Dec 26, 2025 | 9:58 AM

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಘು ಅವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಈ ಮೊದಲು ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಗೆಲುವು ಕಂಡಿದ್ದರು. ಆ ಬಳಿಕ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ರಘು ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರ ನಟನೆಯ ಸಿನಿಮಾ ಅಬ್ಬರದಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಸಿನಿಮಾ? ಅದುವೇ ‘ವೃಷಭ’.

ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರಕ್ಕೆ ಕನ್ನಡದ ನಂದ ಕಿಶೋರ್ ನಿರ್ದೇಶನ ಇದೆ. ಈ ಸಿನಿಮಾಗೆ ರಾಗಿಣಿ ನಾಯಕಿ. ಖ್ಯಾತ ನಿರ್ದೇಶಕ ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಘು ಕೂಡ ನಟಿಸಿದ್ದಾರೆ. ಸಿನಿಮಾದ ಆರಂಭದಲ್ಲಿ ಕೆಲವು ಹೊತ್ತು ಅವರು ಕಾಣ ಸಿಗುತ್ತಾರೆ. ಅವರದ್ದು ವಿಲನ್ ಪಾತ್ರ.

‘ವೃಷಭ’ ಸಿನಿಮಾ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ಒಂದು ರಾಜರ ಕಾಲ, ಮತ್ತೊಂದು 2025. ರಾಜರ ಕಾಲಘಟ್ಟದಲ್ಲಿ ರಘು ಕಾಣಿಸಿಕೊಳ್ಳುತ್ತಾರೆ. ರಾಜ ವಿಯಯೇಂದ್ರ ವೃಷಭ (ಮೋಹನ್​ಲಲ್) ಆಸ್ಥಾನದಲ್ಲಿ ಸ್ಫಟಿಕ ಲಿಂಗ ಇರುತ್ತದೆ. ಇದನ್ನು ಕದಿಯಲು ಒಂದು ಗ್ಯಾಂಗ್ ಬರುತ್ತದೆ. ಈ ಗ್ಯಾಂಗ್​​ನ ಲೀಡರ್ ಆಗಿ ರಘು ನಟಿಸಿದ್ದಾರೆ.

ರಘು ಅವರು ಈ ಸಿನಿಮಾಗಾಗಿ ಸಂಪೂರ್ಣವಾಗಿ ಗಡ್ಡ ಬೋಳಿಸಿದ್ದು, ಮುಖ ಹಾಗೂ ಕಣ್ಣನ್ನು ಭಯಾನಕವಾಗಿ ಮಾಡಲಾಗಿದೆ. ಈ ಚಿತ್ರ ಡಿಸೆಂಬರ್ 25ರಂದು ರಿಲೀಸ್ ಆಗಿದೆ. ಈ ಚಿತ್ರದ ಮೂಲ ಭಾಷೆ ಮಲಯಾಳಂ ಆಗಿದ್ದು, ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿದೆ.

ಇದನ್ನೂ ಓದಿ: ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್​ನಿಂದಲೇ ಪ್ಲ್ಯಾನ್? ಸೂರಜ್ ಆರೋಪ

ರಘು ಅವರು ಈ ಮೊದಲು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ವಿಲನ್ ಪಾತ್ರ ಮಾಡಿದ್ದರು. ಈ ವೇಳೆ ರಘು ಅವರನ್ನು ಗುರುತಿಸಲು ಸಾಧ್ಯವೇ ಆಗಿರಲಿಲ್ಲ. ಆ ರೀತಿಯಲ್ಲಿ ಮೇಕಪ್ ಇತ್ತು. ಈಗ ‘ವೃಷಭ’ ಚಿತ್ರಕ್ಕೂ ಅವರು ಅದೇ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.