ನಿರ್ದೇಶಕ ಶಂಕರ್ (Shankar) ಅವರ ಕಸುಬುದಾರಿಕೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ನಿರ್ದೇಶನದ ಸಿನಿಮಾಗಳು ಭಿನ್ನವಾಗಿರುತ್ತವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರ ವಿಷನ್ ಅನೇಕರಿಗೆ ಇಷ್ಟ ಆಗುತ್ತದೆ. ರಜನಿಕಾಂತ್, ಕಮಲ್ ಹಾಸನ್ ಅವರು ಶಂಕರ್ಗಾಗಿ ಬೇರೆ ಸಿನಿಮಾ ಕೈಬಿಟ್ಟ ಉದಾಹರಣೆ ಇದೆ. ಇಂಥ ನಿರ್ದೇಶಕರು ತಮ್ಮ ನೆಚ್ಚಿನ ನಟನ ಜೊತೆ ಕೈ ಜೋಡಿಸಿದ್ದರಿಂದ ರಾಮ್ ಚರಣ್ ಫ್ಯಾನ್ಸ್ ಸಹಜವಾಗಿಯೇ ಖುಷಿ ಆಗಿದ್ದರು. ಆದರೆ, ಈಗ ಶಂಕರ್ ಅವರನ್ನು ಸ್ವತಃ ರಾಮ್ ಚರಣ್ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ರಾಮ್ ಚರಣ್ ಸಿನಿಮಾ ‘ಗೇಮ್ ಚೇಂಜರ್’ ಬಗ್ಗೆ ಅಪ್ಡೇಟ್ ನೀಡದ ಅವರನ್ನು ಟೀಕಿಸಲಾಗುತ್ತಿದೆ.
ಶಂಕರ್ ಅವರು ತಮಿಳು ಸಿನಿಮಾಗಳನ್ನು ಮಾಡಿ ಫೇಮಸ್ ಆದವರು. ‘ಗೇಮ್ ಚೇಂಜರ್’ ಮೂಲಕ ಟಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಿದ್ದು 2021ರಲ್ಲಿ. ಅಂದರೆ ಈ ಚಿತ್ರ ಆರಂಭ ಆಗಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಹೊರತುಪಡಿಸಿ ಮತ್ತಾವುದೇ ಅಪ್ಡೇಟ್ ಸಿಕ್ಕಿಲ್ಲ. ಇದರಿಂದ ಫ್ಯಾನ್ಸ್ ಅಸಮಾಧಾನಗೊಂಡಿದ್ದಾರೆ.
ಫೆಬ್ರವರಿಯಲ್ಲಿ ‘ಗೇಮ್ ಚೇಂಜರ್’ ಚಿತ್ರದ ಕೊನೆಯ ಹಂತದ ಶೂಟಿಂಗ್ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಒಂದು ಚಿತ್ರಕ್ಕಾಗಿ ಇಷ್ಟೊಂದು ವರ್ಷ ಮುಡಿಪಿಟ್ಟರೆ ಹೇಗೆ ಎಂಬುದು ರಾಮ್ ಚರಣ್ ಅಭಿಮಾನಿಗಳ ಪ್ರಶ್ನೆ. ಸಿನಿಮಾ ಕೆಲಸ ವಿಳಂಬ ಮಾಡಿದ ಶಂಕರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ಈ ವಿಚಾರದಲ್ಲಿ ಶಂಕರ್ ಅವರು ತಪ್ಪೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಸಿನಿಮಾದಿಂದ ಒಂದು ಪೋಸ್ಟರ್ ರಿಲೀಸ್ ಆಗಿದ್ದು ಬಿಟ್ಟರೆ ಮತ್ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ದೀಪಾವಳಿ ಸಂದರ್ಭದಲ್ಲಿ ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ, ಅದನ್ನು ತಂಡ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸಾಂಗ್ ರಿಲೀಸ್ ಆಗಬಹುದು ಎಂದು ಫ್ಯಾನ್ಸ್ ಭಾವಿಸಿದ್ದರೂ ಅದೂ ಆಗಲಿಲ್ಲ. ಇದು ರಾಮ್ ಚರಣ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.
Let’s Start !!! 💥💪#WakeUpShankarLucha pic.twitter.com/DoyfnQumkA
— Hemanth RC ™ (@Hemanth_RcCult) January 30, 2024
ಇದನ್ನೂ ಓದಿ: ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ
ಸದ್ಯ ಟ್ವಿಟರ್ನಲ್ಲಿ ‘WakeUpShankar’ ಹ್ಯಾಶ್ಟ್ಯಾಗ್ ವೈರಲ್ ಮಾಡಲಾಗುತ್ತಿದೆ. ಶಂಕರ್ ಅವರ ಕುರಿತು ಟೀಕೆ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ರಾಮ್ ಚರಣ್ ನಟನೆಯ ಈ ಸಿನಿಮಾಗೆ ಕಿಯಾರಾ ಅಡ್ವಾಣಿ ನಾಯಕಿ ಪಾತ್ರ ಮಾಡುತ್ತಿದ್ದಾರೆ. ‘ಗೇಮ್ ಚೇಂಜರ್’ ಜೊತೆ ಜೊತೆಗೆ ತಮಿಳಿನಲ್ಲಿ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲೂ ಅವರು ಬ್ಯುಸಿ ಇದ್ದಾರೆ. ಈ ಚಿತ್ರ ಕೂಡ ಸೆಟ್ಟೇರಿ ನಾಲ್ಕು ವರ್ಷಗಳ ಮೇಲಾಗಿದೆ. ಹೀಗಾಗಿ ಕಮಲ್ ಹಾಸನ್ ಅಭಿಮಾನಿಗಳು ಕೂಡ ಶಂಕರ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Wed, 31 January 24