‘ಕೆಜಿಎಫ್’ ಸ್ಟಂಟ್ ಮಾಸ್ಟರ್ಸ್ ಈಗ ಡೈರೆಕ್ಟರ್; ಕಮಲ್ ಹಾಸನ್ ಜೊತೆ ಕೈ ಜೋಡಿಸಿದ ಸಹೋದರರು
ಕಮಲ್ ಹಾಸನ್ ಅವರು ಸ್ಟಂಟ್ ಡೈರೆಕ್ಟರ್ಗಳಿಗೆ ನಿರ್ದೇಶನ ಮಾಡುವ ಅವಕಾಶ ನೀಡಿದ್ದಾರೆ. ಸಹೋದರರಾದ ಅಂಬುಮಣಿ ಹಾಗೂ ಅರಿವುಮಣಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಟೀಸರ್ ಅನಾವರಣಗೊಂಡಿದೆ.
ಕಮಲ್ ಹಾಸನ್ (Kamal Haasan) ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ‘ವಿಕ್ರಮ್’ ಸಿನಿಮಾ (Vikram Movie) ಹಿಟ್ ಆದ ಬಳಿಕ ಅವರಿಗೆ ಹೊಸ ಹುರುಪು ಸಿಕ್ಕಿದೆ. ಅವರು ಹಲವು ಚಿತ್ರಗಳನ್ನು ಘೋಷಣೆ ಮಾಡುತ್ತಿದ್ದಾರೆ. ಈಗ ಕಮಲ್ ಹಾಸನ್ ಅವರ 237ನೇ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಇದನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹೊಸ ಅವತಾರದಲ್ಲಿ ಕಮಲ್ ಹಾಸನ್ ಅವರು ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘KH 237’ ಎಂದು ಟೈಟಲ್ ಇಡಲಾಗಿದೆ.
ಕಮಲ್ ಹಾಸನ್ ಅವರು ಹೊಸ ಹೊಸ ಪ್ರಯೋಗ ಮಾಡುತ್ತಾರೆ. ಈ ಬಾರಿ ಅವರು ಸ್ಟಂಟ್ ಡೈರೆಕ್ಟರ್ಗಳಿಗೆ ನಿರ್ದೇಶನ ಮಾಡುವ ಅವಕಾಶ ನೀಡಿದ್ದಾರೆ. ಸಹೋದರರಾದ ಅಂಬುಮಣಿ ಹಾಗೂ ಅರಿವುಮಣಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಇವರು ಸಹೋದರರಾಗಿದ್ದು, ‘ಕೆಜಿಎಫ್’, ‘ಕೆಜಿಎಫ್ 2’, ‘ಸಲಾರ್’ ಸೇರಿ ಹಲವು ಸಿನಿಮಾಗಳಿಗೆ ಜಂಟಿಯಾಗಿ ಸ್ಟಂಟ್ ಕೊರಿಯೋಗ್ರಫಿ ಮಾಡಿದ್ದಾರೆ. ‘ಕೆಜಿಎಫ್’ ಚಿತ್ರದ ಸಾಹಸ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ. ಅವರು ಈಗ ನಿರ್ದೇಶರಾಗುತ್ತಿದ್ದಾರೆ.
ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರಕ್ಕೆ ಅಂಬುಮಣಿ ಹಾಗೂ ಅರಿವುಮಣಿ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಸೆಟ್ನಲ್ಲಿ ಅವರು ಕಮಲ್ ಹಾಸನ್ಗೆ ಕಥೆ ಹೇಳಿದ್ದಾರೆ ಎನ್ನಲಾಗಿದೆ. ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಮೂಲಕ ಕಮಲ್ ಹಾಸನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
Proud to add two proven talents in their new avatar as directors for #KH237. Slay it, Masters Anbariv. Welcome to Raaj Kamal Films International again.#ActioninAction@RKFI #Mahendran @anbariv @turmericmediaTM @magizhmandram pic.twitter.com/uH07IsMVjd
— Kamal Haasan (@ikamalhaasan) January 12, 2024
ಇದನ್ನೂ ಓದಿ: ಮೀ ಟೂ ಆರೋಪಿ ಜೊತೆ ವೇದಿಕೆ ಹಂಚಿಕೊಂಡ ಕಮಲ್ ಹಾಸನ್; ಗಾಯಕಿಯ ಅಸಮಾಧಾನ
ಕಮಲ್ ಹಾಸನ್ ಅವರು ಹೊಸ ಟೀಸರ್ನ ಶೇರ್ ಮಾಡಿಕೊಂಡಿದ್ದಾರೆ. ಕಮಲ್ ಹಾಸನ್ ಅವರ ಟ್ರಾನ್ಸ್ಫಾರ್ಮೇಷನ್ ಜನರಿಗೆ ಇಷ್ಟ ಆಗಿದೆ. ಈ ಟೀಸರ್ ನೋಡಿದ ಬಳಿಕ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಅಂಬುಮಣಿ ಹಾಗೂ ಅರಿವುಮಣಿ ಸಾಹಸ ನಿರ್ದೇಶಕರಾಗಿರುವುದರಿಂದ ಸಹಜವಾಗಿಯೇ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಸಿನಿಮಾ 2025ರಲ್ಲಿ ಥಿಯೇಟರ್ನಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದ ಟೈಟಲ್ ಇನ್ನಷ್ಟೇ ಘೋಷಣೆ ಆಗಬೇಕಿದೆ. ಇನ್ನು, ಎಸ್ ಶಂಕರ್ ನಿರ್ದೇಶನದ ‘ಇಂಡಿಯನ್ 2’ ಏಪ್ರಿಲ್ನಲ್ಲಿ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ಮೇ 9ರಂದು ರಿಲೀಸ್ ಆಗಲಿದೆ. ಈ ಎರಡೂ ಚಿತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ