
‘ಕೌನ್ ಬನೇಗಾ ಕರೋಡ್‌ಪತಿ’ ಟಿವಿ ಕಾರ್ಯಕ್ರಮ ಭಾರತದ ಅತಿ ಯಶಸ್ವಿ ಶೋಗಳಲ್ಲಿ ಒಂದು. ಈ ಕಾರ್ಯಕ್ರಮವನ್ನು ಜ್ಞಾನ ಮತ್ತು ಮನರಂಜನೆಯ ಸಂಗಮವೆಂದು ನೋಡಲಾಗುತ್ತದೆ. ಕೌನ್ ಬನೇಗಾ ಕರೋಡ್‌ಪತಿ ಶೋನ ಪ್ರತಿ ಸೀಸನ್‌ನಲ್ಲಿ ವಿಭಿನ್ನ ಜನರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುವುದಲ್ಲದೆ ಅವರ ಜ್ಞಾನವನ್ನು ಹೆಚ್ಚಿಸುತ್ತದೆ. ಈ ಕಾರ್ಯಕ್ರಮವು ಅತ್ಯಂತ ಜನಪ್ರಿಯವಾಗಿದೆ. ಆದರೆ ಅನೇಕ ಜನರ ಮನಸ್ಸಿನಲ್ಲಿ ಈ ಕಾರ್ಯಕ್ರಮದ ಮಾಲೀಕರು ಯಾರು ಎಂಬ ಪ್ರಶ್ನೆ ಇದೆ? ಮತ್ತು ಈ ಕಾರ್ಯಕ್ರಮದ ವಿಜೇತರಿಗೆ ನಿಖರವಾಗಿ ಯಾರು ಹಣ ನೀಡುತ್ತಾರೆ? ಆ ಬಗ್ಗೆ ಇಲ್ಲಿದೆ ವಿವರ.
ಕೆಬಿಸಿಯ ಎಲ್ಲಾ ಹಕ್ಕುಗಳನ್ನು ಸೋನಿ ಪಿಕ್ಚರ್ಸ್ ಟೆಲಿವಿಷನ್ ಹೊಂದಿದೆ. ಈ ಕಾರ್ಯಕ್ರಮವು ಬ್ರಿಟಿಷ್ ಟಿವಿ ಕಾರ್ಯಕ್ರಮ ‘ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್’ ನ ಭಾರತೀಯ ಫ್ರಾಂಚೈಸಿ ಆಗಿದೆ. ಸೋನಿ ಪಿಕ್ಚರ್ಸ್ ಸಹ ಮೂಲ ಕಾರ್ಯಕ್ರಮದ ಪರವಾನಗಿ ಪಾಲುದಾರ. ಇದರ ಅಡಿಯಲ್ಲಿ, ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮವನ್ನು ಭಾರತದಲ್ಲಿ ನಿರ್ಮಿಸಲಾಗಿದೆ.
ಈ ಕಾರ್ಯಕ್ರಮವನ್ನು ಭಾರತದಲ್ಲಿ ಮೊದಲು 2000 ರಲ್ಲಿ ಪ್ರಸಾರ ಮಾಡಲಾಯಿತು. ಅಮಿತಾಭ್ ಬಚ್ಚನ್ ಈ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಈ ಕಾರ್ಯಕ್ರಮವನ್ನು ಭಾರತದ ಪ್ರತಿಯೊಂದು ಮನೆಗೂ ತಲುಪಿಸಲು ಮತ್ತು ಜನಪ್ರಿಯತೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಅವರು ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಅಮಿತಾಭ್ ಬಚ್ಚನ್ ಪ್ರತಿ ಸಂಚಿಕೆಗೆ ಭಾರಿ ಶುಲ್ಕ ಪಡೆಯುತ್ತಾರೆ.
ಇದನ್ನೂ ಓದಿ: ಕೆಬಿಸಿ16 ಗೆದ್ದು ಕೋಟ್ಯಧಿಪತಿಯಾದ ಚಂದರ್, ಕೊನೆ ಪ್ರಶ್ನೆ ಏನಾಗಿತ್ತು?
ಈ ಕಾರ್ಯಕ್ರಮದ ಪ್ರಮುಖ ಆದಾಯದ ಮೂಲ ಜಾಹೀರಾತು. ಈ ಕಾರ್ಯಕ್ರಮವು ಭಾರತೀಯ ದೂರದರ್ಶನ ಉದ್ಯಮದಲ್ಲಿ ಭಾರಿ ಟಿಆರ್‌ಪಿ ಹೊಂದಿದೆ. ಆದ್ದರಿಂದ ಅನೇಕ ದೊಡ್ಡ ಮತ್ತು ಪ್ರಸಿದ್ಧ ಬ್ರ್ಯಾಂಡ್‌ಗಳು ಈ ಕಾರ್ಯಕ್ರಮದಲ್ಲಿ ಜಾಹೀರಾತು ನೀಡುತ್ತವೆ. ಇದರಿಂದ ಆದಾಯ ಬರುತ್ತದೆ. ಗೆದ್ದ ವ್ಯಕ್ತಿಗೆ ಚಾನೆಲ್‌ನಿಂದ ಹಣ ಸಿಗುತ್ತದೆ. ಎಲ್ಲಾ ರೀತಿಯ ತೆರಿಗೆಗಳನ್ನು ಕಡಿತಗೊಳಿಸಿದ ನಂತರ, ಈ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಮೊದಲು ಅವಾರ್ಡ್ ಮೊತ್ತ 1 ಕೋಟಿ ರೂಪಾಯಿ ಇತ್ತು. ಈಗ ಅದನ್ನು ಏಳು ಕೋಟಿ ಊಪಾಯಿಗೆ ಏರಿಕೆ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.