AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಟೀಸರ್, ಟ್ರೈಲರ್​​ನಲ್ಲಿ ಹನುಮಂತನ ಪಾತ್ರ ತೋರಿಸಿಲ್ಲ ಏಕೆ?

‘ರಾಮಾಯಣ’ ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ನಟಿಸಿರುವ ರಣ್​​ಬೀರ್ ಕಪೂರ್, ‘ರಾವಣ’ ಯಶ್, ‘ಸೀತೆ’ ಸಾಯಿ ಪಲ್ಲವಿ, ‘ಲಕ್ಷ್ಮಣ’ ಪಾತ್ರದಲ್ಲಿ ನಟಿಸಿರುವ ರವಿ ದುಬೆ, ಶೂರ್ಪನಖಿ ಪಾತ್ರದಲ್ಲಿ ನಟಿಸಿರುವ ರಕುಲ್ ಇನ್ನೂ ಹಲವಾರು ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಆದರೆ ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಅವರನ್ನು ಪ್ರಚಾರದಿಂದ ಹೊರಗಿಡಲಾಗಿದೆ. ಮಾತ್ರವಲ್ಲ, ಸಿನಿಮಾದ ಯಾವುದೇ ಟೀಸರ್, ಟ್ರೈಲರ್​​ನಲ್ಲಿ ಹನುಮಂತನ ಪಾತ್ರವನ್ನು ತೋರಿಸಲಾಗಿಲ್ಲ. ಆದರೆ ಇದಕ್ಕೆ ಕಾರಣ ಇದೆ.

‘ರಾಮಾಯಣ’ ಟೀಸರ್, ಟ್ರೈಲರ್​​ನಲ್ಲಿ ಹನುಮಂತನ ಪಾತ್ರ ತೋರಿಸಿಲ್ಲ ಏಕೆ?
Hanuman Rama
ಮಂಜುನಾಥ ಸಿ.
|

Updated on: Oct 22, 2026 | 12:59 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಟ್ರೈಲರ್​​ನಲ್ಲಿ ಆಂಜನೇಯ ಏಕಿಲ್ಲ?
  • ಆಂಜನೇಯ ಪಾತ್ರವನ್ನು ಚಿತ್ರತಂಡ ತೋರಿಸಿಲ್ಲ ಏಕೆ?
  • ನಟ ಸನ್ನಿ ಡಿಯೋಲ್ ಅನ್ನು ಚಿತ್ರತಂಡ ದೂರ ಇಟ್ಟಿರುವುದೇಕೆ?

‘ರಾಮಾಯಣ’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಅದ್ಧೂರಿಯಾಗಿ ಮಾಡುತ್ತಿದೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ನಟಿಸಿರುವ ರಣ್​​ಬೀರ್ ಕಪೂರ್, ‘ರಾವಣ’ ಯಶ್, ‘ಸೀತೆ’ ಸಾಯಿ ಪಲ್ಲವಿ, ‘ಲಕ್ಷ್ಮಣ’ ಪಾತ್ರದಲ್ಲಿ ನಟಿಸಿರುವ ರವಿ ದುಬೆ, ಶೂರ್ಪನಖಿ ಪಾತ್ರದಲ್ಲಿ ನಟಿಸಿರುವ ರಕುಲ್ ಇನ್ನೂ ಹಲವಾರು ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಆದರೆ ಹನುಮಂತನ ಪಾತ್ರದಲ್ಲಿ ನಟಿಸಿರುವ ಸನ್ನಿ ಡಿಯೋಲ್ ಅವರನ್ನು ಪ್ರಚಾರದಿಂದ ಹೊರಗಿಡಲಾಗಿದೆ. ಮಾತ್ರವಲ್ಲ, ಸಿನಿಮಾದ ಯಾವುದೇ ಟೀಸರ್, ಟ್ರೈಲರ್​​ನಲ್ಲಿ ಹನುಮಂತನ ಪಾತ್ರವನ್ನು ತೋರಿಸಲಾಗಿಲ್ಲ. ಆದರೆ ಇದಕ್ಕೆ ಕಾರಣ ಇದೆ.

‘ರಾಮಾಯಣ’ ಸಿನಿಮಾದ ಕೆಲವು ಟೀಸರ್, ಟ್ರೈಲರ್, ಹಾಡುಗಳು ಈಗಾಗಲೇ ರಿಲೀಸ್ ಆಗಿವೆ. ಆದರೆ ಯಾವುದರಲ್ಲೂ ಸಹ ಆಂಜನೇಯನ ಪಾತ್ರದ ಪರಿಚಯ ಇರಲಿ, ಉಲ್ಲೇಖವೂ ಸಹ ಇಲ್ಲ. ಮಾತ್ರವಲ್ಲ, ಸಿನಿಮಾದ ಪ್ರಚಾರದ ಸಂದರ್ಭದಲ್ಲೂ ಸಹ ಆಂಜನೇಯ ಪಾತ್ರದ ಬಗ್ಗೆ, ಆ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ, ಸಂಸದ ಸನ್ನಿ ಡಿಯೋಲ್ ಬಗ್ಗೆ ಉಲ್ಲೇಖವನ್ನೂ ಮಾಡಲಾಗಿಲ್ಲ. ಇದು ಚಿತ್ರತಂಡದ ಯೋಜಿತ ನಡೆ ಎನ್ನಲಾಗುತ್ತಿದೆ.

ಬಹುತೇಕರಿಗೆ ತಿಳಿದಿರುವಂತೆ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಈ ನವೆಂಬರ್ 5ಕ್ಕೆ ಮೊದಲ ಭಾಗವಷ್ಟೆ ರಿಲೀಸ್ ಆಗಲಿದೆ. ಮೊದಲ ಭಾಗದಲ್ಲಿರಾಮ ಹಾಗೂ ರಾವಣನ ಪಾತ್ರ ಪರಿಚಯ, ರಾಮ ಮತ್ತು ಸೀತೆಯ ವಿವಾಹ, ರಾವಣನ ತಪಸ್ಸು ಮತ್ತು ಪಡೆವ ಶಕ್ತಿ. ರಾಮನ ವನವಾಹ ಮತ್ತು ಸೀತಾ ಮಾತೆಯ ಅಪಹರಣದ ಕತೆಯನ್ನು ಮಾತ್ರವೇ ಒಳಗೊಂಡಿರಲಿದೆ.

ಇದನ್ನೂ ಓದಿ:ದಿಲ್ ರಾಜು ಜಾಣ ನಿರ್ಣಯ: ಆಂಧ್ರ-ತೆಲಂಗಾಣದಲ್ಲಿ ‘ರಾಮಾಯಣ’ ಟಿಕೆಟ್​​ ಬೆಲೆ ಏರಿಕೆ ಇಲ್ಲ

ಮೊದಲ ಭಾಗದ ಕ್ಲೈಮ್ಯಾಕ್ಸ್​​ನಲ್ಲಿ ಭಾರಿ ಅದ್ಧೂರಿಯಾಗಿ ಆಂಜನೇಯ ಪಾತ್ರದ ಎಂಟ್ರಿ ಆಗಲಿದೆ. ಆ ದೃಶ್ಯ, ಕ್ಲೈಮ್ಯಾಕ್ಸ್​​ನ ಹೈಲೆಟ್ ಆಗಿರಲಿದೆ ಹಾಗಾಗಿಯೇ ಆಂಜನೇಯ ಪಾತ್ರದ ಬಗ್ಗೆ ಸಿನಿಮಾದ ಯಾವುದೇ ಟೀಸರ್, ಟ್ರೈಲರ್, ಹಾಡುಗಳಲ್ಲಿ ಉಲ್ಲೇಖ ನೀಡಲಾಗಿಲ್ಲ. ಆಂಜನೇಯ ಪಾತ್ರದ ಎಂಟ್ರಿ ದೃಶ್ಯವನ್ನು ಭಾರಿ ಅದ್ಧೂರಿಯಾಗಿ ಮತ್ತು ಸಿನಿಮ್ಯಾಟಿಕ್ ಆಗಿ ಶೂಟ್ ಮಾಡಲಾಗಿದೆಯಂತೆ, ಅದನ್ನು ಜನ ಚಿತ್ರಮಂದಿರದಲ್ಲಿಯೇ ನೋಡಬೇಕು ಎಂಬುದು ಚಿತ್ರತಂಡದ ಉದ್ದೇಶ.

ಇನ್ನೂ ಕೆಲವು ಸುದ್ದಿಗಳ ಪ್ರಕಾರ, ಆಂಜನೇಯ ಪಾತ್ರದ ಎಂಟ್ರಿ ಮೊದಲ ಭಾಗದ ಅಂತ್ಯದಲ್ಲಿ ಆಗಲಿದೆ ಆದರೆ ಕಿಷ್ಕಿಂದಾ ಖಾಂಡದ ಭಾಗವನ್ನೇ ಸಿನಿಮಾದಿಂದ ತೆಗೆಯಲಾಗಿದೆ ಎನ್ನಲಾಗುತ್ತಿದೆ. ಅಂದರೆ ರಾಮ, ಮರೆಯಲ್ಲಿ ನಿಂತು ವಾಲಿಯನ್ನು ಕೊಲ್ಲುವ ಕತೆಯನ್ನೇ ಸಿನಿಮಾದಿಂದ ಕೈಬಿಡಲಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಸಿನಿಮಾ ಬಿಡುಗಡೆಯ ಬಳಿಕ ಎಲ್ಲವೂ ತಿಳಿದು ಬರಲಿದೆ. ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಬೆಂಗಳೂರಿನಲ್ಲಿ ನಿಯಮ ಪಾಲಿಸದ ಪಿಜಿಗಳಿಗೆ ಜಿಬಿಎ ಬಿಗ್ ಶಾಕ್
ಬೆಂಗಳೂರಿನಲ್ಲಿ ನಿಯಮ ಪಾಲಿಸದ ಪಿಜಿಗಳಿಗೆ ಜಿಬಿಎ ಬಿಗ್ ಶಾಕ್
ಬಿಗ್ ಬಾಸ್ ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳತನ
ಬಿಗ್ ಬಾಸ್ ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳತನ
ಆಂಧ್ರದಲ್ಲಿ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ, ಓರ್ವ ಸಾವು
ಆಂಧ್ರದಲ್ಲಿ ಕಟ್ಟಿಗೆ ಬಡಿದಾಟದ ವೇಳೆ ಕಾಲ್ತುಳಿತ, ಓರ್ವ ಸಾವು
ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್
ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್
ವಿಧಾನಸೌಧ ಬಾಂಬ್ ಸ್ಫೋಟದ ನಕಲಿ ರೀಲ್ಸ್​​​ ಹಾಕಿದ್ದ ಯುವಕ ಅರೆಸ್ಟ್
ವಿಧಾನಸೌಧ ಬಾಂಬ್ ಸ್ಫೋಟದ ನಕಲಿ ರೀಲ್ಸ್​​​ ಹಾಕಿದ್ದ ಯುವಕ ಅರೆಸ್ಟ್