ಬಾಲಿವುಡ್ ನಂತರ ನಟಿ ಕಂಗನಾ ರಣಾವತ್ ರಾಜಕೀಯದತ್ತ ಹೆಜ್ಜೆ ಹಾಕಿದ್ದಾರೆ. ಅವರು ಹಿಮಾಚಲ ಪ್ರದೇಶದ ಮಂಡಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಜಕೀಯದ ಜೊತೆಗೆ ಕಂಗನಾ ರಣಾವತ್ ಕೂಡ ತಮ್ಮ ಮುಂಬರುವ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಂಗನಾ ರನೌತ್ ಅಪಾರ ಸಂಪತ್ತನ್ನು ಹೊಂದಿದ್ದಾರೆ. ಕಂಗನಾ ರಣಾವತ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಕಂಗನಾ ರಣಾವತ್ ಸಂಸದೆಯಾದ ನಂತರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಬೆಳ್ಳಿ ಲೋಟದಲ್ಲಿ ನಿರು ಕುಡಿದಿದ್ದಾರೆ.
ಬೆಳ್ಳಿ ಲೋಟದಲ್ಲಿ ಕಂಗನಾ ನೀರು ಕುಡಿಯುವುದನ್ನು ನೋಡಿದ ಜನರು ಕಂಗನಾ ರಣಾವತ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಕಂಗನಾ ರಣಾವತ್ ಸಿಲ್ವರ್ ಗ್ಲಾಸ್‌ನಿಂದ ನೀರು ಕುಡಿಯುತ್ತಿರುವುದನ್ನು ಕಾಣಬಹುದು. ಕಂಗನಾ ರಣಾವತ್ ಅವರ ಈ ವರ್ತನೆಯನ್ನು ಜನ ಮೆಚ್ಚಲೇ ಇಲ್ಲ.
‘ಕಂಗನಾ ರಣಾವತ್ ಬಡವರ ಜೊತೆ ಇರೋದಾಗಿ ಹೇಳುತ್ತಾರೆ, ಆದರೆ ಆದರೆ, ಬೆಳ್ಳಿ ಲೋಟದಲ್ಲಿ ನೀರು ಕುಡಿಯುತ್ತಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದರು. ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಕಂಗನಾ ರಣಾವತ್ ಈ ಮೊದಲು ಮಾತನಾಡಿದ್ದರು.. ಕಂಗನಾ ರಣಾವತ್ ಕೂಡ ಇಂತಹ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದನ್ನು ಕಾಣಬಹುದು.
Yes my table maushi ji and that’s my silver glass, my mom says if you feel like kicking someone’s a** take deep breaths, drink water from this silver glass, cause silver represents moon it will calm you down… doing that right now 🙂 pic.twitter.com/ncs4t7lhFX
— Kangana Ranaut (@KanganaTeam) March 4, 2021
‘ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದರಿಂದ ರೋಗಗಳು ದೂರವಾಗುತ್ತವೆ. ದೇಹ ಸೇರಿದ ವಿಷಕಾರಿ ವಸ್ತುಗಳಿಂದ ನಾವು ಸುರಕ್ಷಿತವಾಗಿರುತ್ತೇವೆ’ ಅದರಲ್ಲೂ ಬೆಳ್ಳಿ ಲೋಟದಲ್ಲಿ ನೀರು ಕುಡಿಯುವುದು ತುಂಬಾ ಮಂಗಳಕರ’ ಎಂದು ಕಂಗನಾ ರಣಾವತ್ ಹೇಳಿದ್ದರು. ಆ ಬಳಿಕ ಟೀಕಾಕಾರರು ಸುಮ್ಮನಾಗಿದ್ದರು.
ಇದನ್ನೂ ಓದಿ: ಜೀವನಪರ್ಯಂತ ವಿರೋಧ ಪಕ್ಷದಲ್ಲಿ ಕೂರಲು ರೆಡಿಯಾಗಿ; ರಾಹುಲ್ ಗಾಂಧಿ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ
ಕಂಗನಾ ರಣಾವತ್ ಬಾಲಿವುಡ್‌ನಲ್ಲಿ ಬಹಳ ಕಾಲ ಇದ್ದರು. ಆದಾಗ್ಯೂ, ಕಂಗನಾ ರಣಾವತ್ ಯಾವಾಗಲೂ ಕೆಲವು ಬಾಲಿವುಡ್ ಜನರನ್ನು ಟೀಕಿಸುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ನಟ ರಣಬೀರ್ ಕಪೂರ್ ಅವರನ್ನು ಕಂಗನಾ ರಣಾವತ್ ಟೀಕಿಸಿದ್ದರು. ಕಂಗನಾ ರಣಾವತ್ ಮಾತು ಕೇಳಿ ಜನ ಕೂಡ ಶಾಕ್ ಆಗಿದ್ದಾರೆ. ಈಗ ಅವರು ನಟಿಸಿ, ನಿರ್ದೇಶಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.