ಪ್ರಭಾಸ್ ‘ಫೌಜಿ’ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಜಿತಿನ್

ಅಭಿಮಾನಿಗಳಿಗಾಗಿ ಒಳ್ಳೆಯ ಸಿನಿಮಾ ನೀಡಬೇಕೆಂಬ ಕಾರಣಕ್ಕೆ ತಮ್ಮ ಮೇಲೆ ತಾವೇ ಒತ್ತಡ ಹೇರಿಕೊಂಡು ‘ಫೌಜಿ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಇದೇ ವರ್ಷ ರಿಲೀಸ್ ಆಗುವ ನಿರೀಕ್ಷೆ ಇತ್ತು. ಆದರೆ ಅಚಾನಕ್ಕಾಗಿ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ಆದರೆ ಸಿನಿಮಾ ಮುಂದೂಡಲ್ಪಟ್ಟಿದ್ದಕ್ಕೆ ಕಾರಣ ನೀಡಲಾಗಿರಲಿಲ್ಲ. ಇದೀಗ ಅದೇ ಸಿನಿಮಾನಲ್ಲಿ ನಟಿಸಿರುವ ಬಾಲಿವುಡ್​ ನಟರೊಬ್ಬರು ಆ ಬಗ್ಗೆ ಕಾರಣ ನೀಡಿದ್ದಾರೆ.

ಪ್ರಭಾಸ್ ‘ಫೌಜಿ’ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಜಿತಿನ್
Fauzi Movie

Updated on: Oct 02, 2026 | 7:56 PM

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಇದೇ ವರ್ಷದ ಆರಂಭದಲ್ಲಿ ಬಿಡುಗಡೆ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. ಖುದ್ದು ಪ್ರಭಾಸ್ ಸಹ ಆ ಸೋಲಿನಿಂದ ಬೇಸರಗೊಂಡಿದ್ದರು. ಇದೇ ಕಾರಣಕ್ಕೆ ಇದೇ ವರ್ಷ ಅಭಿಮಾನಿಗಳಿಗಾಗಿ ಒಳ್ಳೆಯ ಸಿನಿಮಾ ನೀಡಬೇಕೆಂಬ ಕಾರಣಕ್ಕೆ ತಮ್ಮ ಮೇಲೆ ತಾವೇ ಒತ್ತಡ ಹೇರಿಕೊಂಡು ‘ಫೌಜಿ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಇದೇ ವರ್ಷ ರಿಲೀಸ್ ಆಗುವ ನಿರೀಕ್ಷೆ ಇತ್ತು. ಆದರೆ ಅಚಾನಕ್ಕಾಗಿ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ಆದರೆ ಸಿನಿಮಾ ಮುಂದೂಡಲ್ಪಟ್ಟಿದ್ದಕ್ಕೆ ಕಾರಣ ನೀಡಲಾಗಿರಲಿಲ್ಲ. ಇದೀಗ ಅದೇ ಸಿನಿಮಾನಲ್ಲಿ ನಟಿಸಿರುವ ಬಾಲಿವುಡ್​ ನಟರೊಬ್ಬರು ಆ ಬಗ್ಗೆ ಕಾರಣ ನೀಡಿದ್ದಾರೆ.

ಫೌಜಿ ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ಹಲವು ಪ್ರತಿಭಾವಂತ ನಟ-ನಟಿಯರು ನಟಿಸಿದ್ದು ಅವರಲ್ಲಿ ಬಾಲಿವುಡ್ ನಟ ಜಿತಿನ್ ಗುಲಾಟಿ ಸಹ ಒಬ್ಬರು. ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಫೌಜಿ’ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಿರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ‘ಈ ಸಿನಿಮಾ (ಫೌಜಿ) ಜೀವಮಾನವಿಡೀ ಉಳಿಯುವಂತಹ ಕಲಾಕೃತಿಯಾಗಿರುವುದರಿಂದ, ಅರ್ಧಬೆಂದ ಪ್ರಾಜೆಕ್ಟ್ ಅನ್ನು ಮಾರುಕಟ್ಟೆಗೆ ತರಲು ನಿರ್ದೇಶಕರು ಅಥವಾ ನಿರ್ಮಾಪಕರು ಬಯಸುತ್ತಿಲ್ಲ. ಸಿನಿಮಾವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಪರಿಪೂರ್ಣವಾಗಿ ಪೂರ್ಣಗೊಳಿಸಲು ಕೆಲವೇ ತಿಂಗಳುಗಳು ಹೆಚ್ಚು ಬೇಕಾದರೂ ಪರವಾಗಿಲ್ಲ ಎಂಬ ನಿಲುವಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ ಹಾಗಾಗಿ ರಿಲೀಸ್ ಮುಂದೂಡಲಾಗಿದೆ’ ಎಂದು ತಿಳಿಸಿದ್ದಾರೆ.

ನಿರ್ದೇಶಕ ಹನು ರಘುಪುಡಿ ಅವರ ಕೆಲಸದ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಜಿತಿನ್, ‘ಅವರು ಒಬ್ಬ ಪರ್ಫೆಕ್ಷನಿಸ್ಟ್ ಹಾಗೂ ಅತ್ಯಂತ ಪರಿಶ್ರಮಿ ನಿರ್ದೇಶಕ. ಸಿನಿಮಾದಲ್ಲಿ ಬೃಹತ್ ತಾಂತ್ರಿಕ ಅದ್ದೂರಿತನ ಮತ್ತು ವಿಸ್ತಾರವಾದ ಸ್ಕೇಲ್ ಇದ್ದರೂ ಸಹ, ಅದು ಭಾವನೆಗಳು ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಭಾವನಾತ್ಮಕ ಅಂಶಗಳು ಕೆಲವೊಮ್ಮೆ ಮರೆಯಾಗುತ್ತವೆ, ಆದರೆ ‘ಫೌಜಿ’ ಚಿತ್ರದಲ್ಲಿ ಪ್ರತಿಯೊಂದು ಅಂಶಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಸಿನಿಮಾ ಸೆಟ್​​ನಲ್ಲಿ ನಿಜಕ್ಕೂ ನಡೆದಿದ್ದೇನು? ಸತ್ಯ ಹೇಳಿದ ಬಾಲಿವುಡ್ ನಟ

ಮೈತ್ರಿ ಮೂವಿ ಮೇಕರ್ಸ್​​ನ ನಿರ್ಮಾಪಕ ರವಿಶಂಕರ್ ಕೂಡ ಇತ್ತೀಚೆಗೆ ಮಾತನಾಡಿ, ‘ಬಾಹುಬಲಿ’ ಚಿತ್ರದ ನಂತರ ಪ್ರಭಾಸ್ ಅವರನ್ನು ಎಷ್ಟು ಭವ್ಯವಾದ ಮತ್ತು ಗ್ರ್ಯಾಂಡ್ ಲುಕ್‌ನಲ್ಲಿ ಅಭಿಮಾನಿಗಳು ನೋಡಲು ಬಯಸುತ್ತಾರೋ, ಅದಕ್ಕಿಂತ ಮಿಗಿಲಾದ ಅನುಭವವನ್ನು ಈ ಸಿನಿಮಾ ನೀಡಲಿದೆ ಎಂದು ತಿಳಿಸಿದ್ದರು. ‘ಬಾಹುಬಲಿ’ಯಂತೆ ಇದು ಕೂಡ ಬೃಹತ್ ಮಟ್ಟದ ಚಾರಿತ್ರಿಕ ಹಿನ್ನೆಲೆಯ ಐತಿಹಾಸಿಕ ಕತೆಯುಳ್ಳ ಸಿನಿಮಾ ಆಗಿದ್ದು, ಅಭಿಮಾನಿಗಳಿಗೆ ಇದು ಜೀವನ ಪರ್ಯಂತ ನೆನಪಿನಲ್ಲಿ ಉಳಿಯುವ ಸಿನೆಮಾವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಇಮಾನ್ವಿ ಇಸ್ಮಾಯಿಲ್ ನಾಯಕಿಯಾಗಿ ನಟಿಸಿದ್ದಾರೆ, ಸಿನಿಮಾನಲ್ಲಿ ಕನ್ನಡದ ನಟಿ ಚೈತ್ರಾ ಆಚಾರ್ ಸಹ ಇದ್ದಾರೆ. ಜೊತೆಗೆ ಸಜ್ಜದ್ ದೆಲಾಫ್ರೂಜ್, ಮಿಥುನ್ ಚಕ್ರವರ್ತಿ ಮತ್ತು ಅನುಪಮ್ ಖೇರ್ ಮುಂತಾದ ದಿಗ್ಗಜ ನಟರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಹಂತವು ಇನ್ನೂ ಮುಂದುವರಿದಿದ್ದು, ಚಿತ್ರತಂಡವು ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಗುಣಮಟ್ಟದ ಔಟ್‌ಪುಟ್ ನೀಡಲು ಶ್ರಮಿಸುತ್ತಿದೆ. ಮುಂದಿನ ಬಿಡುಗಡೆಯ ಅಧಿಕೃತ ದಿನಾಂಕವನ್ನು ಚಿತ್ರತಂಡವು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿ ರಿಲೀಸ್ ಆಗಲಿದೆ. ಇದೀಗ ಪ್ರಭಾಸ್ ಒಟ್ಟಿಗೆ ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ’ ಭಾಗ ಎರಡರಲ್ಲಿ ನಟನೆ ಮಾಡುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಸಹ ಕ್ರಮವಾಗಿ ರಿಲೀಸ್ ಆಗಲಿದೆ. ಇವುಗಳ ಬಳಿಕ ಅವರು ‘ಸಲಾರ್ 2’ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us