ಶ್ರಮ ಪಟ್ಟರೆ ಸಾಮಾನ್ಯ ವ್ಯಕ್ತಿಯೂ ಸೆಲೆಬ್ರಿಟಿ ಆಗಬಹುದು ಎಂಬುದಕ್ಕೆ ರಾಘವ್ ಲಾರೆನ್ಸ್ (Raghav Lawrence) ಒಳ್ಳೆಯ ಉದಾಹರಣೆ. ಕಾರು ತೊಳೆಯುವವನಾಗಿ ಕೆಲಸಕ್ಕೆ ಸೇರಿ ಅಲ್ಲಿಂದ ಒಂದೊಂದೇ ಮೆಟ್ಟಿಲು ಹತ್ತುತ್ತಾ ಬಂದು ಈಗ ಸ್ಟಾರ್ ನಾಯಕ ನಟ ಆಗಿದ್ದಾರೆ. ರಾಘವ್ ಲಾರೆನ್ಸ್ಗೆ ತೆಲುಗು, ತಮಿಳು, ಕರ್ನಾಟಕದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹಾರರ್, ಕಾಮಿಡಿ, ಆಕ್ಷನ್ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ರಾಘವ್ ಲಾರೆನ್ಸ್ಗೆ ಭಾರಿ ಬಜೆಟ್ನ, ಹಲವು ಅತ್ಯುತ್ತಮ ಕಲಾವಿದರನ್ನು ಒಳಗೊಂಡ ಸಿನಿಮಾದ ಆಫರ್ ನೀಡಲಾಗಿತ್ತು. ಆದರೆ ಒಳ್ಳೆಯ ಕಾರಣಕ್ಕೆ ಆ ಸಿನಿಮಾದ ಅವಕಾಶವನ್ನು ನಿರಾಕರಿಸಿದ್ದರು. ಆ ಬಗ್ಗೆ ಇದೀಗ ಮಾತನಾಡಿದ್ದಾರೆ.
ಕಮಲ್ ಹಾಸನ್, ಫಹಾದ್ ಫಾಸಿಲ್, ವಿಜಯ್ ಸೇತುಪತಿ, ಸ್ಟಾರ್ ನಟ ಸೂರ್ಯ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ವಿಕ್ರಂ’ನಲ್ಲಿ ನಟಿಸುವ ಅವಕಾಶ ರಾಘವ್ ಲಾರೆನ್ಸ್ಗೆ ಸಿಕ್ಕಿತ್ತಂತೆ. ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ರಾಘವ್ ಲಾರೆನ್ಸ್ ನಟಿಸಬೇಕಿತ್ತಂತೆ. ನಿರ್ದೇಶಕ ಲೋಕೇಶ್ ಕನಗರಾಜ್, ಮೊದಲಿಗೆ ರಾಘವ್ಗೆ ಕತೆ ಹೇಳಿದ್ದು ಮಾತ್ರವೇ ಅಲ್ಲದೆ, ನೀವೇ ನಟಿಸಬೇಕು ಎಂದು ಒತ್ತಾಯ ಸಹ ಮಾಡಿದರಂತೆ. ಆದರೆ ರಾಘವ್ ನಟಿಸಲಿಲ್ಲ.
ರಾಘವ್ ನಟಿಸದೇ ಇರಲು ಪ್ರಮುಖ ಕಾರಣವೆಂದರೆ. ಅದು ಪಕ್ಕಾ ವಿಲನ್ ಪಾತ್ರ. ಡ್ರಗ್ಸ್ ವ್ಯವಹಾರ ಮಾಡುವ ವ್ಯಕ್ತಿಯ ಪಾತ್ರ. ಹಾಗಾಗಿ ಆ ಪಾತ್ರದಲ್ಲಿ ನಟಿಸುವುದಿಲ್ಲ ಎಂದರಂತೆ ರಾಘವ್. ‘ನನ್ನ ಸಿನಿಮಾಗಳನ್ನು ಮಕ್ಕಳು, ಕುಟುಂಬ ಸಮೇತರಾಗಿ ನೋಡುತ್ತಾರೆ. ನಾನು ಅಂಥಹಾ ಪಾತ್ರಗಳಲ್ಲಿ ನಟಿಸಲಾರೆ. ಅಂಥಹಾ ಪಾತ್ರಗಳಲ್ಲಿ ನಟಿಸುವುದು ಕುಟುಂಬವನ್ನು ಒಡೆಯುವುದಕ್ಕೆ ಸಮ ಎಂದು ನಾನು ಭಾವಿಸಿದ್ದೇನೆ. ಆ ಪಾತ್ರ ಮಾಡಿದ ನಟನನ್ನು ನಾನು ಟೀಕಿಸುತ್ತಿಲ್ಲ. ಆದರೆ ಆ ರೀತಿಯ ಪಾತ್ರ ನಾನು ಮಾಡಲಾರೆ’ ಎಂದಿದ್ದಾರೆ ರಾಘವ್ ಲಾರೆನ್ಸ್.
ಇದನ್ನೂ ಓದಿ:ಸಿನಿಮಾ ಇಲ್ಲದೆ ಕಷ್ಟದಲ್ಲಿರೋ ತ್ರಿವಿಕ್ರಂಗೆ ದೊಡ್ಡ ಸಲಹೆ ಕೊಟ್ಟ ಪವನ್ ಕಲ್ಯಾಣ್
‘ವಿಕ್ರಂ’ ಸಿನಿಮಾನಲ್ಲಿ ವಿಜಯ್ ಸೇತುಪತಿ, ಸಂತಾನಂ ಹೆಸರಿನ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದರು. ಡ್ರಗ್ಸ್ ಲೋಕಲ್ ಡೀಲರ್ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಸಿನಿಮಾನಲ್ಲಿ ವಿಜಯ್ ಸೇತುಪತಿ ಅವರ ಪಾತ್ರ ಸಖತ್ ಹೈಲೆಟ್ ಆಗಿತ್ತು. ಅವರ ಪಾತ್ರದ ಎಂಟ್ರಿ, ಡೈಲಾಗ್ಗಳು, ಆಕ್ಷನ್ ಎಲ್ಲವನ್ನೂ ಜನ ಮೆಚ್ಚಿಕೊಂಡಿದ್ದರು. ವಿಜಯ್ ಸೇತುಪತಿ ಅವರ ವೃತ್ತಿ ಜೀವನಕ್ಕೆ ಇದು ಹೆಚ್ಚಿನ ಬೂಸ್ಟ್ ನೀಡಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ