ಪ್ರದೀಪ್​ ರಂಗನಾಥನ್​ ಜೊತೆ ಸಿನಿಮಾ ಮಾಡ್ತಾರಾ ದಳಪತಿ ವಿಜಯ್​? ಹೀಗೆ ಹೇಳಿದ್ದಾರೆ ಲವ್​ ಟುಡೇ ನಿರ್ದೇಶಕರು

ಪ್ರದೀಪ್​ ರಂಗನಾಥನ್​ ಅವರು ಈಗಾಗಲೇ ದಳಪತಿ ವಿಜಯ್​ ಅವರಿಗೆ ಸ್ಕ್ರಿಪ್ಟ್​ನ್ನು ವಿವರಿಸಿದ್ದೇನೆ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಪ್ರದೀಪ್​ ರಂಗನಾಥನ್​ ಜೊತೆ ಸಿನಿಮಾ ಮಾಡ್ತಾರಾ ದಳಪತಿ ವಿಜಯ್​? ಹೀಗೆ ಹೇಳಿದ್ದಾರೆ ಲವ್​ ಟುಡೇ ನಿರ್ದೇಶಕರು
ದಳಪತಿ ವಿಜಯ್​
Updated By: ಕಿರಣ್ ಹನುಮಂತ್​ ಮಾದಾರ್

Updated on: Nov 09, 2022 | 4:01 PM

‘ಲವ್​ ಟುಡೇಸಿನಿಮಾವು ರಿಲೀಸ್​ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿದೆ. ಈ ಚಿತ್ರದ ಮೂಲಕ ‘ಪ್ರದೀಪ್ ರಂಗನಾಥನ್’​ ನಿರ್ದೇಶನದಲ್ಲಿ ಸೈ ಎನಿಸಿಕೊಂಡಿದ್ದಾರೆ. ಅವರ ಮುಂಬರುವ ಚಿತ್ರಗಳ ಬಗ್ಗೆ ಸಾಕಷ್ಟು ಕುತೂಹಲವಿದೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ದಳಪತಿ ವಿಜಯ್​ (vijay)ಗೆ ಒಂದು ಕಥೆಯನ್ನು ಹೇಳಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಆದರೆ ಯಾವ ಸಿನಿಮಾ, ಇದಾಗಲೇ ಶೂಟಿಂಗ್​ ಶುರುಮಾಡಿದ್ದಾರೆಯೇ ಎನ್ನುವ ಬಗ್ಗೆ ಉತ್ತರಿಸಿಲ್ಲ.

ಇತ್ತೀಚೆಗಷ್ಟೇ ಚೆನ್ನೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರದೀಪ್​, ಮಾಸ್​ ಹೀರೋಗೆ ಕಥೆ ಹೇಳಿದ್ದಾಗಿ ಹೇಳಿದ್ದಾರೆ. ‘ಹೌದು ನಾನು ಒಂದು ಕಥೆಯನ್ನ ಹೇಳಿದ್ದೇನೆ. ಆದರೆ ನಾನು ಈಗ ಅದರ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಏಕೆಂದರೆ ನಾನು ನನ್ನ ಚಿತ್ರದ ಪ್ರಚಾರಕ್ಕಾಗಿ ಮಾತನಾಡುತ್ತಿದ್ದೇನೆ ಎಂದು ಕಾಣುತ್ತದೆ, ಸಿನಿಮಾ ಮುಗಿದ ಬಳಿಕ ಇದರ ಬಗ್ಗೆ ಮಾತನಾಡುತ್ತೇನೆಎಂದರು.

ಇದನ್ನೂ ಓದಿ:‘ವಾರಿಸು’ಗಾಗಿ ಸಖತ್ ಆಗಿ ಸೊಂಟ ಬಳುಕಿಸಿದ ನಟಿ ರಶ್ಮಿಕಾ ಮಂದಣ್ಣ

ದಳಪತಿ ವಿಜಯ್​ ‘ವಾರಿಸು ಚಿತ್ರದ ಬಿಡುಗಡೆ ತಯಾರಿಯಲ್ಲಿದ್ದಾರೆ, ಈ ಚಿತ್ರವನ್ನ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡಿದ್ದು ದಿಲ್​ ರಾಜು ನಿರ್ಮಾಣ ಮಾಡಿದ್ದಾರೆ. ಇನ್ನು ವಿಜಯ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸದ್ಯ ‘ರಂಜಿತಮೆಹಾಡು ನವೆಂಬರ್​ 5 ರಂದು ರಿಲೀಸ್​ ಆಗಿದ್ದು ಬಾರಿ ಸದ್ದು ಮಾಡುತ್ತಿದೆ, ಮುಂದಿನ ವರ್ಷ ಜನವರಿಯಲ್ಲಿ ಈ ಸಿನಿಮಾ ತೆರೆಯ ಮೇಲೆ ಬರಲಿದ್ದು ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯಿದೆ.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ