Updated on: Nov 05, 2022 | 7:54 PM
‘ವಾರಿಸು’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ವಿಜಯ್ಗೆ ಜತೆಯಾಗಿ ನಟಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜನವರಿಯಲ್ಲಿ ತೆರೆಗೆ ಬರುತ್ತಿದೆ.
‘ವಾರಿಸು’ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ‘ವಾರಿಸು’ ಚಿತ್ರದ ‘ರಂಜಿತಮೆ..’ ಹಾಡು ಇಂದು (ನವೆಂಬರ್ 5) ರಿಲೀಸ್ ಆಗಿದೆ.
ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅವರು ಸೊಂಟ ಬಳುಕಿಸಿದ ಪರಿಗೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ದಳಪತಿ ವಿಜಯ್ ಜತೆ ನಟಿಸಬೇಕು ಎಂಬುದು ರಶ್ಮಿಕಾ ಅವರ ಕನಸಾಗಿತ್ತು. ಆ ಕನಸು ಈಗ ನನಸಾಗುತ್ತಿದೆ. ಇತ್ತೀಚೆಗೆ ಅವರ ನಟನೆಯ ‘ಗುಡ್ಬೈ’ ಸಿನಿಮಾ ಸೋತಿದೆ.
ರಶ್ಮಿಕಾ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿವೆ. ವಿಜಯ್ ದೇವರಕೊಂಡ ಜತೆ ಅವರು ಮತ್ತೆ ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಇದೆ.