AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರಿಸು’ ಚಿತ್ರದಲ್ಲಿ ದಳಪತಿ ವಿಜಯ್ ಮಾಡುತ್ತಿರುವ ಪಾತ್ರ ಯಾವುದು? ಲೀಕ್ ಆಯ್ತು ವಿಚಾರ

‘ವಾರಿಸು’ ಚಿತ್ರದಲ್ಲಿ ದಳಪತಿ ವಿಜಯ್ ಅವರು ವಿಜಯ್ ರಾಜೇಂದ್ರನ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಮಾಡುತ್ತಿರುವ ಪಾತ್ರದ ಹೆಸರಿಗೂ ಅವರ ಹೆಸರಿಗೂ ಹೋಲಿಕೆ ಇದೆ.

‘ವಾರಿಸು’ ಚಿತ್ರದಲ್ಲಿ ದಳಪತಿ ವಿಜಯ್ ಮಾಡುತ್ತಿರುವ ಪಾತ್ರ ಯಾವುದು? ಲೀಕ್ ಆಯ್ತು ವಿಚಾರ
ವಿಜಯ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 22, 2022 | 7:00 AM

Share

ಸಿನಿಮಾ ವಿಚಾರದಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರು ಸಾಕಷ್ಟು ಕಾಳಜಿ ತೋರುತ್ತಾರೆ. ಪ್ರತಿ ಅಪ್​ಡೇಟ್​ಅನ್ನು ದೊಡ್ಡ ಮಟ್ಟದಲ್ಲೇ ನೀಡಲಾಗುತ್ತದೆ. ಪ್ರತಿಬಾರಿ ಕೊಡುವ ಅಪ್​ಡೇಟ್ ಲೀಕ್ ಆಗದೆ ಇರುವಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತದೆ. ಆದಾಗ್ಯೂ ಕೆಲವೊಮ್ಮೆ ಈ ವಿಚಾರಗಳು ಸೋರಿಕೆ ಆಗಿ ಬಿಡುತ್ತವೆ. ಈಗ ದಳಪತಿ ವಿಜಯ್ (Thalapathy Vijay) ನಟನೆಯ ‘ವಾರಿಸು’ ಚಿತ್ರದ (Varisu Movie) ಒಂದಷ್ಟು ವಿಚಾರಗಳು ಲೀಕ್ ಆಗಿವೆ. ಈ ವಿಚಾರ ಕೇಳಿ ಒಂದು ವರ್ಗದವರು ಖುಷಿಪಟ್ಟರೆ, ಮತ್ತೊಂದು ವರ್ಗ ಬೇಸರಗೊಂಡಿದೆ.

ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಈ ಚಿತ್ರದಲ್ಲಿ ವಿಜಯ್ ಅವರು ಸ್ಪೈ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ವಂಶಿ ಪೈಡಿಪಲ್ಲಿ ಜತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ವಿಜಯ್ ಬರ್ತ್​ಡೇ ಅಂಗವಾಗಿ ಈ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಆಗಿತ್ತು. ಇದರಲ್ಲಿ ವಿಜಯ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಈಗ ಈ ಚಿತ್ರದ ಬಗ್ಗೆ ಹೊಸ ಅಪ್​​ಡೇಟ್ ಸಿಕ್ಕಿದೆ.

‘ವಾರಿಸು’ ಚಿತ್ರದಲ್ಲಿ ದಳಪತಿ ವಿಜಯ್ ಅವರು ವಿಜಯ್ ರಾಜೇಂದ್ರನ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ವಿಜಯ್ ಮಾಡುತ್ತಿರುವ ಪಾತ್ರದ ಹೆಸರಿಗೂ ಅವರ ಹೆಸರಿಗೂ ಹೋಲಿಕೆ ಇದೆ. ಈ ಚಿತ್ರದಲ್ಲಿ ವಿಜಯ್ ಅವರು ಆ್ಯಪ್​ ಡೆವಲಪರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ
Image
‘ಕೆಜಿಎಫ್​ 2’ ಎದುರು ‘ಬೀಸ್ಟ್​’ ಸೋತರೂ ಪಾರ್ಟಿ ಮಾಡಿದ ದಳಪತಿ ವಿಜಯ್; ನಿರ್ದೇಶಕ ಹೇಳಿದ್ದೇನು?
Image
Beast Twitter Review: ‘ಬೀಸ್ಟ್’​ ನೋಡಿ ಡಿಸಾಸ್ಟರ್​ ಎಂದ ಪ್ರೇಕ್ಷಕರು; ದಳಪತಿ ವಿಜಯ್​ ಸಿನಿಮಾ ಹೇಗಿದೆ?
Image
ವಿಜಯ್​ಗೆ ಜೋಡಿ ಆಗಿದ್ದಕ್ಕೆ ರಶ್ಮಿಕಾಗೆ ಎಷ್ಟು ಖುಷಿ ಅಂತ ಮಾತಲ್ಲಿ ಹೇಳೋಕಾಗಲ್ಲ; ಫೋಟೋ ನೋಡಿ ತಿಳಿಯಬೇಕಷ್ಟೇ
Image
ದಳಪತಿ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ; ಬರ್ತ್​ಡೇ ದಿನವೇ ಅಧಿಕೃತವಾಯ್ತು ಸುದ್ದಿ

ಸದ್ಯ, ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಅದೇ ರೀತಿ ಸೈಬರ್ ಕಳ್ಳರೂ ಜಾಸ್ತಿ ಆಗಿದ್ದಾರೆ. ಈ ಕಾರಣಕ್ಕೆ ಈ ವಿಚಾರದ ಕುರಿತು ಸಾಕಷ್ಟು ಸಿನಿಮಾಗಳು ಸಿದ್ಧಗೊಳ್ಳುತ್ತಿವೆ. ‘ವಾರಿಸು’ ಕೂಡ ಅದೇ ಮಾದರಿಯ ಚಿತ್ರ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಪ್​ಡೇಟ್ ಸಿಗಬೇಕಿದೆ.

ಇದನ್ನೂ ಓದಿ: ಶಾರುಖ್ ಖಾನ್ ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ಗೆ ಅತಿಥಿ ಪಾತ್ರ; ಸಂಭಾವನೆ ಎಷ್ಟು?

‘ವಾರಿಸು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬ ಕುತೂಹಲವೂ ಫ್ಯಾನ್ಸ್​ ಬಳಿ ಇದೆ. ವಿಜಯ್ ಜತೆ ನಟಿಸಬೇಕು ಎಂಬುದು ರಶ್ಮಿಕಾ ಅವರ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ಈ ಬಗ್ಗೆ ಅವರಿಗೆ ಸಾಕಷ್ಟು ಖುಷಿ ಇದೆ. ಈ ಚಿತ್ರದ ಮುಹೂರ್ತ ಸಂದರ್ಭದಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ಪೋಸ್​ ನೀಡಿದ್ದರು.

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ
ಸುಮ್ಮನೆ ನಿಂತಿದ್ದ ಅಂಪೈರ್​ ತಲೆಗೆ ಗಾಯ ಮಾಡಿದ ಪಾಕ್ ಆಟಗಾರ; ವಿಡಿಯೋ