‘ಟಾಕ್ಸಿಕ್’ ಟ್ರೈಲರ್ ರಿಲೀಸ್, ಹೇಳಿದ್ದನ್ನು ಮಾಡಿ ತೋರಿಸಿದ ಯಶ್

Toxic movie release: ಅಂದುಕೊಂಡಿದ್ದನ್ನು ಮಾಡಿತೋರಿಸುವ ಹಠವಾದಿ. ಎತ್ತರಕ್ಕೇರಿದರೂ ತಮ್ಮತನವನ್ನು ಮರೆಯದ ವ್ಯಕ್ತಿತ್ವ ಅವರದ್ದು. ಇದೀಗ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 08) ಬಿಡುಗಡೆ ಆಗುತ್ತಿದೆ. ಹಲವಾರು ಬಾಲಿವುಡ್ ತಾರೆಯರು, ಮಾಧ್ಯಮದವರು ಬೆಂಗಳೂರಿಗೆ ಬಂದಿದ್ದಾರೆ. ಈ ಸಮಯದಲ್ಲಿ ನಟ ಯಶ್ ಅವರು ಹಿಂದೊಮ್ಮೆ ಆಡಿದ್ದ ಮಾತನ್ನು ಕೆಲ ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ.

‘ಟಾಕ್ಸಿಕ್’ ಟ್ರೈಲರ್ ರಿಲೀಸ್, ಹೇಳಿದ್ದನ್ನು ಮಾಡಿ ತೋರಿಸಿದ ಯಶ್
Yash Toxic

Updated on: Aug 08, 2026 | 2:36 PM

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾ ಟ್ರೈಲರ್ ಇಂದು ಬಿಡುಗಡೆ ಆಗುತ್ತಿದೆ.
  • ‘ಟಾಕ್ಸಿಕ್’ ಟ್ರೈಲರ್ ಬಿಡುಗಡೆಗೆ ಬಾಲಿವುಡ್ ತಾರೆಯರು ಬಂದಿದ್ದಾರೆ.
  • ಯಶ್ ಹಿಂದೊಮ್ಮೆ ಹೇಳಿದ್ದ ಮಾತನ್ನು ಈಗ ನಿಜ ಮಾಡಿದ್ದಾರೆ.

ಯಶ್ (Yash), ಅದ್ಭುತ ನಟ, ಕನಸುಗಾರ, ರಿಸ್ಕ್ ತೆಗೆದುಕೊಳ್ಳುವ ನಟ ಮತ್ತು ನಿರ್ಮಾಪಕ. ಇದೆಲ್ಲದರ ಜೊತೆಗೆ ಅಪರೂಪದ ಛಲಗಾರ. ಅಂದುಕೊಂಡಿದ್ದನ್ನು ಮಾಡಿತೋರಿಸುವ ಹಠವಾದಿ. ಎತ್ತರಕ್ಕೇರಿದರೂ ತಮ್ಮತನವನ್ನು ಮರೆಯದ ವ್ಯಕ್ತಿತ್ವ ಅವರದ್ದು. ಇದೀಗ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 08) ಬಿಡುಗಡೆ ಆಗುತ್ತಿದೆ. ಹಲವಾರು ಬಾಲಿವುಡ್ ತಾರೆಯರು, ಮಾಧ್ಯಮದವರು ಬೆಂಗಳೂರಿಗೆ ಬಂದಿದ್ದಾರೆ. ಈ ಸಮಯದಲ್ಲಿ ನಟ ಯಶ್ ಅವರು ಹಿಂದೊಮ್ಮೆ ಆಡಿದ್ದ ಮಾತನ್ನು ಕೆಲ ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ.

ಕೋವಿಡ್​​ಗೆ ಮುಂಚೆ, ಐಫಾ, ಫಿಲಂಫೇರ್ ಅವಾರ್ಡ್​​ ಕಾರ್ಯಕ್ರಮದ ವಿಷಯವಾಗಿ ತುಸು ಗೊಂದಲ ಉಂಟಾಗಿದ್ದು, ಈ ಕಾರ್ಯಕ್ರಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆ ನೀಡಲಾಗುವುದಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಆಗ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ಬೆಂಗಳೂರಿನಲ್ಲೇ ನಡೆಯುವಂತಾಗಬೇಕು ಎಂದು ನಟ ಯಶ್ ಸೇರಿದಂತೆ ಇನ್ನಿತರರು ಪ್ರಯತ್ನ ಪಟ್ಟಿದ್ದರು. ಆಗ ಯಶ್, ‘ಬಾಲಿವುಡ್​​ ಅನ್ನು ಇಲ್ಲಿದೆ (ಬೆಂಗಳೂರಿಗೆ) ಕರೆಸಿಕೊಳ್ಳಬೇಕು’ ಎಂದಿದ್ದರು. ಈಗ ‘ಟಾಕ್ಸಿಕ್’ ಟ್ರೈಲರ್​​ಗೆ ನಿಜಕ್ಕೂ ಬಾಲಿವುಡ್​​ ಅನ್ನು ಬೆಂಗಳೂರಿಗೆ ಕರೆಸಿದ್ದಾರೆ.

ಬಾಲಿವುಡ್​ನ ತಾರೆಯರು ಮಾತ್ರವೇ ಅಲ್ಲದೆ, ದೇಶದಾದ್ಯಂತ ಮಾಧ್ಯಮದವರು, ಸಿನಿಮಾ ಪ್ರೇಮಿಗಳು ಇಂದು ಬೆಂಗಳೂರಿಗೆ ಬಂದಿದ್ದಾರೆ. ನಟ ಯಶ್ ‘ಟಾಕ್ಸಿಕ್’ ಮೂಲಕ ಎಲ್ಲರನ್ನೂ ಬೆಂಗಳೂರಿಗೆ ಬರುವಂತೆ ಮಾಡಿದ್ದಾರೆ. ಆ ಮೂಲಕ ಹಿಂದೊಮ್ಮೆ ಹೇಳಿದ್ದ ಮಾತನ್ನು ಯಶ್ ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ಗೂಗ್ಲಿಯಲ್ಲಿ ಯಶ್​​ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ಟಾಕ್ಸಿಕ್ ಹವಾ

‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಬಾಲಿವುಡ್​​ ನಟಿಯರಾದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ. ದಕ್ಷಿಣದ ಸ್ಟಾರ್ ನಟಿ ನಯನತಾರಾ, ಕನ್ನಡದ ನಟಿ ರುಕ್ಮಿಣಿ ವಸಂತ್ ಅವರುಗಳು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಸಂಜೆಯ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ನಟಿಯರು ಮಾತ್ರವೇ ಅಲ್ಲದೆ, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಹಲವಾರು ಖ್ಯಾತನಾಮರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 8) ಸಂಜೆ ಏಳು ಗಂಟೆಗೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಮುಖ ನಟ-ನಟಿಯರು, ತಂತ್ರಜ್ಞರು, ನಿರ್ಮಾಪಕರು ಇನ್ನೂ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Sat, 8 August 26

Loading...
Unable to load recommendations.
Follow Us