ರಣಬೀರ್ ಕಪೂರ್ ಅವರು ಸದ್ಯ ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಅನೇಕರು ‘ರಾಮಾಯಣ’ ಚಿತ್ರದ ಕಥೆ ಹೇಳಿದ್ದರೂ ಅದನ್ನು ಮತ್ತೊಮ್ಮೆ ತೆರೆಮೇಲೆ ತರುವ ಪ್ರಯತ್ನವನ್ನು ನಿರ್ದೇಶಕ ನಿತೇಶ್ ತಿವಾರರಿ ಮಾಡುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ನಮಿತ್ ಮಲ್ಹೋತ್ರಾ, ಯಶ್ ಮೊದಲಾದವರು ಬಂಡವಾಳ ಹೂಡುತ್ತಿದ್ದಾರೆ. ಈಗ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಒಂದು ಸಿಕ್ಕಿದೆ.
ಅಯೋಧ್ಯೆ ಹಾಗೂ ಮಿಥಿಲಾನ ರೀ ಕ್ರಿಯೇಟ್ ಮಾಡಲು 12 ದೊಡ್ಡ ದೊಡ್ಡ ಸೆಟ್ಗಳ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಬೈನಲ್ಲಿ ಈ ಸೆಟ್ಗಳ ನಿರ್ಮಾಣ ಆಗುತ್ತಿದೆ. ಆ ಬಳಿಕ ಸಿನಿಮಾದ ಶೂಟ್ ಆರಂಭ ಆಗಲಿದೆ. ಈಗಾಗಲೇ ತಂಡ ಒಂದು ಹಂತದ ಶೂಟ್ನ ಪೂರ್ಣಗೊಳಿಸಿದೆ. ಮತ್ತೊಂದು ಹಂತದ ಶೂಟ್ ಯಾವಾಗ ಆರಂಭ ಆಗಲಿದೆ ಎನ್ನುವ ಕುತೂಹಲ ಮೂಡಿದೆ.
‘ರಾಮಾಯಣ’ ಸಿನಿಮಾದ ಬಜೆಟ್ ಬರೋಬ್ಬರಿ 835 ಕೋಟಿ ರೂಪಾಯಿ. ಇದರಲ್ಲಿ ದೊಡ್ಡ ಮೊತ್ತದ ಹಣ ಸಿನಿಮಾದ ಸೆಟ್ ನಿರ್ಮಾಣಕ್ಕೆ ಖರ್ಚಾಗಲಿದೆ. ಭರ್ಜರಿ ವಿಶ್ಯುವಲ್ ಟ್ರೀಟ್ ನೀಡಲು ರಾಮಾಯಣ ತಂಡ ಮುಂದಾಗಿದೆ. ಈ ಕಾರಣದಿಂದಲೇ ರಾಮಾಯಣ ಶೂಟ್ ಮುಗಿದ ಬಳಿಕ 600 ದಿನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಮೀಸಲು ಇಡಲು ತಂಡ ಮುಂದಾಗಿದೆ. ಭಾರತದ ಸಿನಿಮಾಗಳನ್ನು ಗ್ಲೋಬಲ್ ಮಟ್ಟಕ್ಕೆ ಕೊಂಡೊಯ್ಯಲು ತಂಡ ಆಲೋಚಿಸಿದೆ. ಹೀಗಾಗಿ ಸಿನಿಮಾ ರಿಲೀಸ್ ಆಗೋದು 2027 ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 17ನೇ ವಯಸ್ಸಿಗೆ ಧೂಮಪಾನದ ಚಟ; ಆ ವ್ಯಕ್ತಿಗಾಗಿ ಸಿಗರೇಟ್ ಬಿಟ್ಟ ರಣಬೀರ್ ಕಪೂರ್
ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಿದ್ದಾರೆ. ಯಶ್ ಅವರು ರಾವಣನ ಪಾತ್ರ ಮಾಡಲಿದ್ದಾರೆ. ಈ ಸಿನಿಮಾಗೆ ಅವರು ನಿರ್ಮಾಪಕರೂ ಹೌದು. ಅರುಣ್ ಗೋವಿಲ್ ಅವರು ದಶರಥನ ಪಾತ್ರ ಮಾಡಲಿದ್ದಾರೆ. ಈ ಮೊದಲಿನ ರಾಮಾಯಣದಲ್ಲಿ ಅವರು ರಾಮನಾಗಿ ಕಾಣಿಸಿಕೊಂಡಿದ್ದರು. ಲಾರಾ ದತ್ತ ಅವರು ಕೈಕೇಯಿಯ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:43 pm, Wed, 31 July 24