ಧುರಂಧರ್ 2 Vs ಟಾಕ್ಸಿಕ್; ಯಶ್-ರಣವೀರ್ ಸಿಂಗ್ ಪೈಕಿ ಯಾರ ಸಿನಿಮಾ ಬಜೆಟ್ ಹೆಚ್ಚು?

ಮಾರ್ಚ್ 19ರಂದು ರಣವೀರ್ ಸಿಂಗ್ ಅವರ 'ಧುರಂಧರ್ 2' ಮತ್ತು ಯಶ್ ಅವರ 'ಟಾಕ್ಸಿಕ್' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಹಣಾಹಣಿಗೆ ಸಜ್ಜಾಗಿವೆ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಗಳಲ್ಲಿ ಯಶ್ ಅವರ 'ಟಾಕ್ಸಿಕ್' ಸುಮಾರು 500 ಕೋಟಿ ರೂ. ಬಜೆಟ್ ಹೊಂದಿದೆ. ರಣವೀರ್ ಅವರ ಚಿತ್ರದ ಬಜೆಟ್ ಕಡಿಮೆ. ಯಾವ ಚಿತ್ರ ಹೆಚ್ಚು ಗಳಿಸುತ್ತದೆ, ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಿದೆ.

ಧುರಂಧರ್ 2 Vs ಟಾಕ್ಸಿಕ್; ಯಶ್-ರಣವೀರ್ ಸಿಂಗ್ ಪೈಕಿ ಯಾರ ಸಿನಿಮಾ ಬಜೆಟ್ ಹೆಚ್ಚು?
ರಣವೀರ್-ಯಶ್
Edited By:

Updated on: Feb 28, 2026 | 7:51 AM

ಧುರಂಧರ್ 2 Vs ಟಾಕ್ಸಿಕ್ (Toxic) ಟಾಕ್ ಜೋರಾಗಿದೆ. ರಣವೀರ್ ಸಿಂಗ್ ಅವರ ‘ಧುರಂಧರ್ 2’ ಚಿತ್ರ ಮತ್ತು ಯಶ್ ಅವರ ‘ಟಾಕ್ಸಿಕ್’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪರಸ್ಪರ ಕ್ಲ್ಯಾಶ್ ಆಗುತ್ತಿವೆ. ಈ ಎರಡು ಚಿತ್ರಗಳಲ್ಲಿ ಯಾವುದು ಹೆಚ್ಚು ಹಣ ಗಳಿಸುತ್ತದೆ ಎಂಬ ಕುತುಹೂಲ ಮೂಡಿದ್ದು, ಬಿಡುಗಡೆಯಾದ ಬಳಿಕ ಆ ಬಗ್ಗೆ ತಿಳಿಯಲಿದೆ. ಹಾಗಾದರೆ ಯಾವ ಚಿತ್ರದ ಬಜೆಟ್ ಹೆಚ್ಚಿದೆ? ಆ ಬಗ್ಗೆ ಇಲ್ಲಿ ನೋಡೋಣ.

ಮಾರ್ಚ್ ತಿಂಗಳು ಸಿನಿಮಾ ಪ್ರಿಯರಿಗೆ ಸುಗ್ಗಿಯೇ ಸರಿ. ಏಕೆಂದರೆ ಮಾರ್ಚ್ 19ರಂದು ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗಲಿವೆ. ಧುರಂಧರ್ 2 ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಇನ್ನೊಂದು ಟಾಕ್ಸಿಕ್. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ ಎರಡೂ ಚಿತ್ರಗಳು ಮಾರ್ಚ್ 19ರಂದು ಒಂದೇ ದಿನ ಬಿಡುಗಡೆಯಾಗಲಿವೆ. ಈ ಎರಡೂ ಚಿತ್ರಗಳ ಮಧ್ಯೆ ಕ್ಲ್ಯಾಶ್ ಏರ್ಪಡಲಿದೆ. ಈ ಎರಡೂ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎರಡೂ ಚಿತ್ರಗಳು ದೊಡ್ಡ ಬಜೆಟ್​​ನ್ಲಿ ನಿರ್ಮಾಣವಾಗಿವೆ.

ಯಶ್ ಮತ್ತು ರಣವೀರ್ ನಡುವೆ ಬಾಕ್ಸ್ ಆಫೀಸ್ ಅಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಸದ್ಯದ ಚರ್ಚೆ. ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದ ದೊಡ್ಡ ನಟಿಯರು ನಟಿಸಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರದ ಬಜೆಟ್ ಸುಮಾರು 500 ಕೋಟಿ ರೂ.

‘ಧುರಂಧರ್ 2’ ಚಿತ್ರದ ಬಜೆಟ್ ‘ಟಾಕ್ಸಿಕ್’ ಚಿತ್ರಕ್ಕೆ ಹೋಲಿಸಿದರೆ ಕಡಿಮೆ. ‘ಧುರಂಧರ್ 2’ ಚಿತ್ರದ ಬಜೆಟ್ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಏಕೆಂದರೆ ಇದನ್ನು ಮೊದಲ ಭಾಗದ ಜೊತೆಗೆ ಚಿತ್ರೀಕರಿಸಲಾಗಿದೆ. ವರದಿಗಳ ಪ್ರಕಾರ, ಎರಡೂ ಭಾಗಗಳಿಗೆ 300-350 ಕೋಟಿ ರೂ. ಖರ್ಚು ಮಾಡಲಾಗಿದೆ.

ಇದನ್ನೂ ಓದಿ: ಟಾಕ್ಸಿಕ್ ಅಲರ್ಟ್​: ಮೊದಲ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾನಿ ರೊಮ್ಯಾನ್ಸ್

ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವೇ ಗೆಲ್ಲಬಹುದು ಎಂಬುದು ಅಭಿಮಾನಿಗಳ ಊಹೆ. ನಿಜವಾದ ಸಿನಿಪ್ರಿಯರು ಎರಡೂ ಸಿನಿಮಾ ಗೆಲ್ಲಲಿ ಎಂದು ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us