Year Ender 2021: ಈ ವರ್ಷ ಕನ್ನಡಿಗರ ಮನಗೆದ್ದ ಪರಭಾಷೆಯ ಸೂಪರ್​ ಹಿಟ್ ಗೀತೆಗಳು ಯಾವುವು? ಇಲ್ಲಿದೆ ಪಟ್ಟಿ

| Updated By: shivaprasad.hs

Updated on: Dec 29, 2021 | 4:29 PM

ಈ ವರ್ಷ ಕನ್ನಡಿಗರು ಇಷ್ಟಪಟ್ಟ, ಇಲ್ಲೂ ವೈರಲ್ ಆದ ಸೂಪರ್ ಹಿಟ್ ಡಾನ್ಸ್ ವಿಡಿಯೋಗಳು ಬಹಳ. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ನೀಡಲಾಗಿದೆ.

Year Ender 2021: ಈ ವರ್ಷ ಕನ್ನಡಿಗರ ಮನಗೆದ್ದ ಪರಭಾಷೆಯ ಸೂಪರ್​ ಹಿಟ್ ಗೀತೆಗಳು ಯಾವುವು? ಇಲ್ಲಿದೆ ಪಟ್ಟಿ
ಪ್ರಾತಿನಿಧಿಕ ಚಿತ್ರ
Follow us on

ಪ್ರಸ್ತುತ ಹಾಡುಗಳು ಸಾಮಾಜಿಕ ಜಾಲತಾಣಗಳ ಸಹಾಯದಿಂದ ದೇಶ- ಭಾಷೆ ಮೀರಿ ಹಿಟ್ ಆಗುತ್ತವೆ. ಕನ್ನಡದ್ದೇ ಹಲವು ಗೀತೆಗಳು ಪರಭಾಷಿಗರಲ್ಲಿ, ಬೇರೆ ದೇಶಗಳ ಜನರ ಬಾಯಲ್ಲಿ ಗುನುಗುವುದನ್ನು ಕೇಳಿದ್ದೇವೆ. ಅಂತೆಯೇ ಬೇರೆ ಭಾಷೆಯ ಗೀತೆಗಳೂ ಕನ್ನಡಿಗರ ಮನಗೆದ್ದಿವೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳಿಗೆ ದೇಶದಲ್ಲಿ ಬಹುದೊಡ್ಡ ಮಾರುಕಟ್ಟೆ ಇದೆ. ಜತೆಗೆ ಇಲ್ಲಿನ ಗೀತೆಗಳು ದೇಶಾದ್ಯಂತ ಹಿಟ್ ಆಗುವುದು ಈಗಿನ ಟ್ರೆಂಡ್. ಜನರನ್ನು ಕುಣಿಸುವ, ಹೆಜ್ಜೆ ಹಾಕುವಂತೆ ಮಾಡುವ ಮಸ್ತ್ ಗೀತೆಗಳು ಭಾಷೆಗಳನ್ನು ಮೀರಿ ಜನರಿಗೆ ಪ್ರಿಯವಾಗುತ್ತವೆ. ಈ ವರ್ಷ ಕನ್ನಡಿಗರ ಮನಗೆದ್ದ, ಡಾನ್ಸ್ ಬೀಟ್ಸ್​​ಗಳ ಮೂಲಕ ಜನರಿಗೆ ಸಖತ್ ಮನರಂಜನೆ ನೀಡಿದ ಕೆಲವು ಗೀತೆಗಳು ಇಲ್ಲಿವೆ.

1.  ಕುಸು ಕುಸು: ನೋರಾ ಫತೇಹಿ ಕಾಣಿಸಿಕೊಂಡಿರುವ ‘ಸತ್ಯಮೇವ ಜಯತೇ 2’ ಚಿತ್ರದ ‘ಕುಸು ಕುಸು’ ಹಾಡು ಈ ವರ್ಷದ ಬಹುದೊಡ್ಡ ಹಿಟ್ ಸಾಂಗ್​ಗಳಲ್ಲಿ ಒಂದು. ಎಂಥವರನ್ನೂ ಹೆಜ್ಜೆ ಹಾಕಲು ಪ್ರೇರೇಪಿಸುವ ಬೀಟ್ಸ್​​ಗಳೊಂದಿಗೆ ಗಮನ ಸೆಳೆದ ‘ಕುಸು ಕುಸು’ಗೆ ನೋರಾ ಹೆಜ್ಜೆ ಹಾಕಿದ್ದು ಮತ್ತಷ್ಟು ಕಿಚ್ಚು ಹೆಚ್ಚುವಂತೆ ಮಾಡಿತು. ತನ್ನ ನೃತ್ಯ ಶೈಲಿ ಹಾಗೂ ಎಕ್ಸ್​​ಪ್ರೆಶನ್​​ಗಳಿಂದ ಗಮನ ಸೆಳೆದ ನೋರಾ ಗಮನ ಸೆಳೆದರು.

2. ಪರಮ್ ಸುಂದರಿ: ಕೃತಿ ಸನೋನ್ ಹೆಜ್ಜೆ ಹಾಕಿದ ‘ಪರಮ್ ಸುಂದರಿ’ಹಾಡು ಈ ವರ್ಷ ಎಲ್ಲೆಡೆ ಗಮನ ಸೆಳೆದ ಹಾಡುಗಳಲ್ಲೊಂದು. ‘ಮಿಮಿ’ ಚಿತ್ರದ ಈ ಹಾಡು ನೃತ್ಯಕ್ಕೆ ಹೇಳಿ ಮಾಡಿಸಿದಂತಿರುವುದಲ್ಲದೇ, ಕೃತಿ ಸನೋನ್ ಡಾನ್ಸ್​ನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಿತು.

3. ನಾಟು ನಾಟು: ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಹಾಡಿನ ಸಂಗೀತ ಗುನುಗುವಂತಿದ್ದರೆ, ಅದಕ್ಕೆ ಮತ್ತಷ್ಟು ಮೆರಗು ತಂದಿದ್ದು ರಾಮ್​ಚರಣ್ ಹಾಗೂ ಜ್ಯೂ ಎನ್​ಟಿಆರ್​ ಸಖತ್ ಸ್ಟೆಪ್ಸ್​ಗಳು. ಆದ್ದರಿಂದಲೇ ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು.

4. ಊ ಅಂಟಾವಾ: ‘ಪುಷ್ಪ: ದಿ ರೈಸ್’ ಚಿತ್ರದ ಈ ಹಾಡಿನಲ್ಲಿ ಸಮಂತಾ ಹಾಗೂ ಅಲ್ಲು ಅರ್ಜುನ್ ಹೆಜ್ಜೆ ಹಾಕಿದ್ದರು. ಇದು ಚಿತ್ರಕ್ಕೆ ದೊಡ್ಡ ಮೈಲೇಜ್ ನೀಡಿದ್ದಲ್ಲದೇ ಸಖತ್ ಟ್ರೆಂಡಿಂಗ್ ಆಗಿತ್ತು.

5. ನದಿಯೋನ್ ಪಾರ್: ಜಾಹ್ನವಿ ಕಪೂರ್ ಹೆಜ್ಜೆ ಹಾಕಿದ್ದ ‘ರೂಹಿ’ ಚಿತ್ರದ ‘ನದಿಯೋನ್ ಪಾರ್’ ಈ ವರ್ಷ ಟ್ರೆಂಡ್ ಆಗಿದ್ದ ಗೀತೆಗಳಲ್ಲೊಂದು. 2008ರಲ್ಲಿ ತೆರೆಕಂಡಿದ್ದ ‘ಲೆಟ್​​ ದಿ ಮ್ಯೂಸಿಕ್ ಪ್ಲೇ’ಯ ರಿಮೇಕ್ ಇದಾಗಿತ್ತು.

6. ಸಾರಂಗ ದರಿಯಾ: ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದ ‘ಲವ್​ ಸ್ಟೋರಿ’ ಚಿತ್ರದ ‘ಸಾರಂಗ ದರಿಯಾ’ ಈ ವರ್ಷ ಟಾಲಿವುಡ್​ ಹಿಟ್ ಗೀತೆಗಳಲ್ಲಿ ಒಂದು. ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರಕ್ಕೆ ಪವನ್ ಸಂಗೀತ ಸಂಯೋಜಿಸಿದ್ದಾರೆ.

7. ದಾಕೋ ದಾಕೋ: ‘ಪುಷ್ಪ: ದಿ ರೈಸ್’ ಚಿತ್ರದ ‘ದಾಕೋ ದಾಕೋ’ ಹಾಡು ಸೆನ್ಸೇಷನ್ ಹುಟ್ಟುಹಾಕಿತ್ತು. ಮಾಸ್ ಚಿತ್ರಗಳ ಸಂಗೀತಕ್ಕೆ ಹೊಸ ಆಯಾಮವನ್ನು ‘ಪುಷ್ಪ’ದ ಈ ಗೀತೆ ನೀಡಿತ್ತು. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಸಂಗೀತ ನೀಡಿದವರು ದೇವಿ ಶ್ರೀ ಪ್ರಸಾದ್.

8. ಎಂಜಾಯ್ ಎಂಜಾಮಿ: ಈ ವರ್ಷ ಹೊಸ ಟ್ರೆಂಡ್ ಹುಟ್ಟು ಹಾಕಿದ ಗೀತೆಯೆಂದರೆ ಅದು ‘ಎಂಜಾಯ್ ಎಂಜಾಮಿ’. ಆಲ್ಬಂ ಸಾಂಗ್ ಆದ ಇದು ಎಲ್ಲೆಡೆ ಟ್ರೆಂಡ್ ಆಗಿದ್ದಲ್ಲದೇ, ಸಖತ್ ವೈರಲ್ ಆಯಿತು. ಇದರ ಹಲವಾರು ಅವತರಣಿಕೆಗಳೂ ಮೂಡಿಬಂದವು. ಧೀ, ಅರಿವು ಸೃಷ್ಟಿಸಿದ ಈ ಗೀತೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. 9 ತಿಂಗಳ ಹಿಂದೆ ತೆರೆ ಕಂಡಿದ್ದ ಈ ಹಾಡು ಯೂಟ್ಯೂಬ್​ನಲ್ಲಿ 377 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ.

ಇದನ್ನೂ ಓದಿ:

Year Ender 2021: ಈ ವರ್ಷ ಮದುವೆ ಆದ ಸ್ಯಾಂಡಲ್​ವುಡ್​ ಜೋಡಿಗಳ ಬಗ್ಗೆ ಇಲ್ಲಿದೆ ಮಾಹಿತಿ

Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ