ವಿಜಯ್ ದೇವರಕೊಂಡ ಮತ್ತು ನಟಿಯ ಬಗ್ಗೆ ವಲ್ಗರ್​ ಸುದ್ದಿ; ಯೂಟ್ಯೂಬರ್ ಅರೆಸ್ಟ್

ಯೂಟ್ಯೂಬ್​ ಚಾನೆಲ್​ನ ಅಡ್ಮಿನ್​​ನ ಬಂಧಿಸಲಾಗಿದೆ. ಈತನ ವಿರುದ್ಧ ವಿಜಯ್ ದೇವರಕೊಂಡ ದೂರು ನೀಡಿದ್ದರು. ಹೀಗಾಗಿ, ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡು ಅಡ್ಮಿನ್​ನ​ ಬಂಧಿಸಿದ್ದಾರೆ.

ವಿಜಯ್ ದೇವರಕೊಂಡ ಮತ್ತು ನಟಿಯ ಬಗ್ಗೆ ವಲ್ಗರ್​ ಸುದ್ದಿ; ಯೂಟ್ಯೂಬರ್ ಅರೆಸ್ಟ್
ವಿಜಯ್

Updated on: Dec 14, 2023 | 8:29 AM

ಯೂಟ್ಯೂಬ್ ಕಂಟೆಂಟ್​ಗಳು ಹೆಚ್ಚು ಸೇಲ್ ಆಗುತ್ತಿದೆ. ಹೀಗಾಗಿ ಗಲ್ಲಿ ಗಲ್ಲಿಯಲ್ಲಿ ಯೂಟ್ಯೂಬರ್​ಗಳು ಹುಟ್ಟಿಕೊಂಡಿದ್ದಾರೆ. ತಾವು ಏನೇ ಪೋಸ್ಟ್ ಮಾಡಿದರೂ ಯಾರೂ ಪ್ರಶ್ನೆ ಮಾಡಲ್ಲ ಎನ್ನುವ ನಂಬಿಕೆ ಅವರದ್ದು. ಆದರೆ, ಎಲ್ಲ ಸಮಯದಲ್ಲೂ ಹೀಗೆ ಇರುವುದಿಲ್ಲ. ಸುಳ್ಳು ಸುದ್ದಿ ಬಿತ್ತರಿಸಿದಾಗ ಅಂಥವರಿಗೆ ಪೊಲೀಸರು ಬಿಸಿಮುಟ್ಟಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಸಿಕ್ಕಿದೆ. ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarakonda) ಹಾಗೂ ನಟಿಯೊಬ್ಬರ ಮಧ್ಯೆ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬರ್ ಈಗ ಅರೆಸ್ಟ್ ಆಗಿದ್ದಾನೆ.

CinePolis ಹೆಸರಿನ ಯೂಟ್ಯೂಬ್​ ಚಾನೆಲ್​ನ ಅಡ್ಮಿನ್​​ನ ಬಂಧಿಸಲಾಗಿದೆ. ಈತನ ವಿರುದ್ಧ ವಿಜಯ್ ದೇವರಕೊಂಡ ದೂರು ನೀಡಿದ್ದರು. ಹೀಗಾಗಿ, ಪೊಲೀಸರು ಎಫ್​ಐಆರ್ ದಾಖಲು ಮಾಡಿಕೊಂಡು ಅಡ್ಮಿನ್​ನ​ ಬಂಧಿಸಿದ್ದಾರೆ. ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

‘ಈ ವ್ಯಕ್ತಿ ಕೆಲ ದಿನಗಳ ಹಿಂದೆ ವಿಜಯ್ ಹಾಗೂ ಮತ್ತೋರ್ವ ನಟಿಯ ಮಧ್ಯೆ ಸಂಬಂಧ ಕಲ್ಪಿಸಿ ಅಸಭ್ಯ ಸುದ್ದಿ ಹಬ್ಬಿಸಿದ್ದ. ಈ ಸುದ್ದಿ ಪೊಲೀಸರ ಗಮನಕ್ಕೆ ತಂದೆವು. ಆ ಬಳಿಕ ಪೊಲೀಸರು ತಕ್ಷಣಕ್ಕೆ ಪ್ರತಿಕ್ರಿಯಿಸಿದರು. ಆ ವ್ಯಕ್ತಿ ಇರುವ ಸ್ಥಳ ಗೊತ್ತಾಗಿದ್ದು, ವಿಡಿಯೋನ ಡಿಲೀಟ್ ಮಾಡಿರುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ವಿಜಯ್ ಟೀಂ ಹೇಳಿದೆ.

‘ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕಿದೆ. ವಿಜಯ್ ಬಗ್ಗೆ ಕೆಲವರು ವದಂತಿಗಳನ್ನು ಹರಡುತ್ತಿದ್ದಾರೆ. ಕೆಲವರು ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ. ಅಂಥವರಿಗೆ ಈ ಪ್ರಕರಣ ಉದಾಹರಣೆ ಆಗಲಿ ಅನ್ನೋದು ವಿಜಯ್ ಉದ್ದೇಶ. ಮೂರನೇ ವ್ಯಕ್ತಿಯ ಹೆಸರನ್ನು ಎಳೆದು ತರೋದು ಸರಿ ಅಲ್ಲ’ ಎಂದಿದೆ ವಿಜಯ್ ಟೀಂ.

ಇದನ್ನೂ ಓದಿ: ‘ಡಂಕಿ’ ಎದುರು ‘ಸಲಾರ್’ ಬಿಡುಗಡೆ ಏಕೆ, ಶಾರುಖ್ ಮೇಲೆ ಹೊಂಬಾಳೆಗೆ ಏಕೀ ಸಿಟ್ಟು? ವಿಜಯ್ ಕಿರಗಂದೂರು ಹೇಳಿದ್ದು ಹೀಗೆ

ಇತ್ತೀಚೆಗೆ ‘ಹಾಯ್ ನಾನ್ನ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವೆಕೇಶನ್ ಫೋಟೋ ಶೋ ಮಾಡಲಾಯಿತು. ಈ ವಿಡಿಯೋ ಎಲ್ಲರಿಗೂ ಶಾಕ್ ಆಯಿತು. ಈ ಘಟನೆ ಬಳಿಕ ನಾನ್ನಿ ಅವರು ಕ್ಷಮೆ ಕೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:26 am, Thu, 14 December 23