ತಾಯಿಗೆ ಮನೆಯಲ್ಲಿಯೇ ಹೆರಿಗೆ ಮಾಡಿಸಿದ 13 ವರ್ಷದ ಬಾಲಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 31, 2025 | 2:37 PM

ಹೆರಿಗೆ ನೋವು ಆರಂಭವಾದರೆ ಮನೆಯಲ್ಲಿರುವವರು ಎಲ್ಲರೂ ಸಾಮಾನ್ಯವಾಗಿ ಹೆದರುತ್ತಾರೆ. ಹಾಗಾಗಿ ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಹದಿಹರೆಯದ ಬಾಲಕ ತನ್ನ ತಾಯಿಯ ಹೆರಿಗೆಯನ್ನು ಧೈರ್ಯ ಮಾಡಿ ತಾನೇ ಮಾಡಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ಹೌದು. ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಾಯಿ ಮಗುವಿಗೆ ಜನ್ಮ ನೀಡಲು ನೆರವಾಗಿದ್ದಾನೆ.

ತಾಯಿಗೆ ಮನೆಯಲ್ಲಿಯೇ ಹೆರಿಗೆ ಮಾಡಿಸಿದ 13 ವರ್ಷದ ಬಾಲಕ
ಸಾಂದರ್ಭಿಕ ಚಿತ್ರ
Follow us on

ಚೀನಾ, ಮಾ. 29: ಹೆರಿಗೆ ನೋವು (Labor pain) ಆರಂಭವಾದರೆ ಮನೆಯಲ್ಲಿರುವವರು ಎಲ್ಲರೂ ಸಾಮಾನ್ಯವಾಗಿ ಹೆದರುತ್ತಾರೆ. ಹಾಗಾಗಿ ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಹದಿಹರೆಯದ ಬಾಲಕ ತನ್ನ ತಾಯಿಯ ಹೆರಿಗೆಯನ್ನು ಧೈರ್ಯ ಮಾಡಿ ತಾನೇ ಮಾಡಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ಹೌದು. ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಾಯಿ ಮಗುವಿಗೆ ಜನ್ಮ ನೀಡಲು ನೆರವಾಗಿದ್ದಾನೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಈ ಘಟನೆ ಬಗ್ಗೆ ವರದಿ ಮಾಡಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಚೀನಾದ ಫುಜಿಯಾನ್ ಪ್ರಾಂತ್ಯದ 13 ವರ್ಷದ ಬಾಲಕನೊಬ್ಬ ತನ್ನ ತಾಯಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಆರಂಭವಾದಾಗ ಹೆದರದೆಯೇ ಮನೆಯಲ್ಲಿ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ್ದಾನೆ. ಬಾಲಕ ತುರ್ತು ಕೇಂದ್ರಕ್ಕೆ ಕರೆ ಮಾಡಿ, 37 ವಾರಗಳ ಗರ್ಭಿಣಿಯಾಗಿರುವ ತಾಯಿಗೆ ನೀರು ಸೋರಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದು, ಮಗುವಿನ ತಲೆ ಹೊರಗೆ ಬಂದಿದೆ ಎಂದು ಫೋನ್ ಮೂಲಕ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದಾನೆ. ಇದನ್ನು ಕೇಳಿಸಿಕೊಂಡು ತಾಯಿಯ ಯೋಗಕ್ಷೇಮದ ಬಗ್ಗೆ ಭಯಭೀತರಾದ ವೈದ್ಯರು ಕೆಲವು ಮಾರ್ಗದರ್ಶನ ನೀಡುವ ಮೂಲಕ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.

ಆಂಬ್ಯುಲೆನ್ಸ್ ಮನೆಗೆ ಬರುವ ವರೆಗೂ ಫೋನ್ ಮೂಲಕವೇ ವೈದ್ಯರು ಹುಡುಗನಿಗೆ ಸೂಚನೆ ನೀಡಿದ್ದು, ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ಆ ಸಮಯದಲ್ಲಿ ಅವರನ್ನು ಶಾಂತಗೊಳಿಸುವುದು ಹೇಗೆ ಮತ್ತು ಮಗು ಜನನಕ್ಕೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ವೈದ್ಯರ ಸೂಚನೆಗಳನ್ನು ಅನುಸರಿಸಿ, ಹದಿಹರೆಯದ ಹುಡುಗ ಆರೋಗ್ಯವಾಗಿರುವ ಗಂಡು ಮಗುವಿಗೆ ಜನ್ಮ ನೀಡಲು ತನ್ನ ತಾಯಿಗೆ ಸಹಾಯ ಮಾಡಿದ್ದಾನೆ. ಇನ್ನು ಹೊಕ್ಕುಳಬಳ್ಳಿಯನ್ನು ಬಿಗಿಗೊಳಿಸುವ ಸಮಯ ಬಂದಾಗ, ಹುಡುಗನಿಗೆ ಸ್ವಚ್ಛವಾದ ದಾರ ಸಿಗದಿದ್ದಾಗ. ವೈದ್ಯರು ಮಾಸ್ಕ್ ಸ್ಟ್ರಾಪ್ ಬಳಸಲು ಸಲಹೆ ನೀಡಿದ್ದು ಸೋಂಕು ಮತ್ತು ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡಿದ್ದಾರೆ. ಸ್ವಲ್ಪ ಸಮಯದ ನಂತರ, ವೈದ್ಯಕೀಯ ಸಿಬಂದಿ ಮನೆಗೆ ಬಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದು ಇಬ್ಬರ ಆರೋಗ್ಯವೂ ಚೆನ್ನಾಗಿದೆ ಎಂದು ವರದಿ ನೀಡಿದ್ದಾರೆ.

ಇದನ್ನೂ ಓದಿ
ಟ್ರಯಲ್​​ ನೋಡಿದ ಬಟ್ಟೆಗಳನ್ನು ನಾವು ಹಾಕಿಕೊಂಡರೆ ಯಾವ ರೋಗ ಬರುತ್ತೆ ನೋಡಿ
ನೀರು ಕಡಿಮೆ ಕುಡಿಯುತ್ತೀರಾ? ಕಿಡ್ನಿ ಹಾಳಾಗಬಹುದು ಎಚ್ಚರ
ದೇಹದಲ್ಲಿ ಸಂಗ್ರಹವಾದ ಕೆಟ್ಟ ತ್ಯಾಜ್ಯ ಹೊರಹಾಕಲು ಈ ರೀತಿ ಮಾಡಿ

ಇದನ್ನೂ ಓದಿ: ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

ಈ ಅಚ್ಚರಿಯ ಘಟನೆ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಬಹುಬೇಗ ವೈರಲ್ ಆಗಿದ್ದು, 92 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅನೇಕರು ಆ ಹುಡುಗನ ಸಂಯಮವನ್ನು ಶ್ಲಾಘಿಸಿದ್ದಾರೆ. ಅವನ ಪುಟ್ಟ ಸಹೋದರ ಜಗತ್ತನ್ನು ನೋಡಲು ಆ ಸಹೋದರ ಸಹಾಯ ಮಾಡಿದ್ದು ಆತನ ಧೈರ್ಯವನ್ನು ಎಲ್ಲರೂ ಕೊಂಡಾಡಿದ್ದಾರೆ. ಆದರೆ ಕೆಲವರು ಮನೆಯಲ್ಲಿ ಮಕ್ಕಳ ಜನನದಿಂದ ಉಂಟಾಗುವ ಅಪಾಯಗಳ ಬಗ್ಗೆ ವಿವರಿಸಿದ್ದು ಇಂತಹ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮಹಿಳೆಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:14 pm, Sat, 29 March 25