Health Tips: ಪ್ರತಿದಿನ ಬೆಳಿಗ್ಗೆ 3 ಬಾದಾಮಿ ತಿಂದರೆ ಏನಾಗುತ್ತೆ ತಿಳಿಯಿರಿ

ಉತ್ತಮ ಜೀರ್ಣ ಶಕ್ತಿಯನ್ನು ಪಡೆಯಲು ಬಾದಾಮಿ ತುಂಬಾ ಉಪಯುಕ್ತವಾಗಿದೆ. ಜೊತೆಗೆ ಬಾದಾಮಿ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಇದರ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Health Tips: ಪ್ರತಿದಿನ ಬೆಳಿಗ್ಗೆ 3 ಬಾದಾಮಿ ತಿಂದರೆ ಏನಾಗುತ್ತೆ ತಿಳಿಯಿರಿ
Almond
Follow us
| Updated By: ಅಕ್ಷತಾ ವರ್ಕಾಡಿ

Updated on: Jun 22, 2024 | 6:07 PM

ಪ್ರತಿದಿನ ಬೆಳಿಗ್ಗೆ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಪೌಷ್ಟಿಕತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಅದರಲ್ಲಿಯೂ ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಬಾದಾಮಿ ತುಂಬಾ ಉಪಯುಕ್ತವಾಗಿದೆ. ಜೊತೆಗೆ ಬಾದಾಮಿ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ನೀರಿನಲ್ಲಿ ನೆನೆಸಿದ ಬಾದಾಮಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಚರ್ಮದ ಕಾಂತಿಗೂ ತುಂಬಾ ಉಪಯುಕ್ತವಾಗಿದೆ. ಪ್ರತಿದಿನ ನೀರಿನಲ್ಲಿ ನೆನಸಿಟ್ಟ ಬಾದಾಮಿ ಸೇವನೆ ಮಾಡುವುದರಿಂದ ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ಗಳು ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ. ಬಾದಾಮಿ ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಇದರಲ್ಲಿ ಬಲವಾದ ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಂ ಮತ್ತು ರಂಜಕ ಹೇರಳವಾಗಿದೆ.

ಇದನ್ನೂ ಓದಿ: ಈ ಧಾನ್ಯ ಸೌಂದರ್ಯದೊಂದಿಗೆ ಆರೋಗ್ಯವನ್ನು ಹೆಚ್ಚಿಸುತ್ತೆ!

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಪ್ರತಿದಿನ ಬಾದಾಮಿ ಸೇವನೆ ಮಾಡಬೇಕು. ಬಾದಾಮಿ ತಿನ್ನುವುದರಿಂದ ಕೊಬ್ಬು ಹೆಚ್ಚಾಗುವುದಿಲ್ಲ. ಪ್ರತಿದಿನ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಈ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಜೊತೆಗೆ ದೇಹದ ತೂಕವನ್ನು ನಿಯಮಿತವಾಗಿ ಕಡಿಮೆ ಮಾಡಿಕೊಳ್ಳಲು ಪ್ರತಿದಿನ ಬೆಳಿಗ್ಗೆ 3 ಬಾದಾಮಿಯನ್ನು ತಪ್ಪದೇ ಸೇವನೆ ಮಾಡಿ. ಒಂದು ದಿನವೂ ತಪ್ಪಿಸಬೇಡಿ. ಈ ರೀತಿ ಮಾಡಿದರೆ ನಿಮಗೆ ಇದರ ಫಲಿತಾಂಶ ದೊರೆಯುತ್ತದೆ. ಆದರೆ ತುಂಬಾ ತೆಳ್ಳಗಿರುವವರು ಈ ಅಭ್ಯಾಸ ಆರಂಭಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ