ಪೆಟಿಕೋಟ್, ಧೋತಿ ಜಾರಬಹುದು ಎಂದು ಬಿಗಿಯಾಗಿ ಗಂಟು ಹಾಕುತ್ತಿದ್ದರೆ ಇಂದೇ ಈ ಅಭ್ಯಾಸ ಬಿಟ್ಟುಬಿಡಿ
Health Awareness: ಇತ್ತೀಚೆಗೆ ನಡೆದಿರೋ ಕೆಲ ಅಧ್ಯಯನಗಳ ಪ್ರಕಾರ ಅತಿ ಬಿಗಿಯಾದ ಪೆಟಿಕೋಟ್‌ಗಳ ಧರಿಸುವಿಕೆ ಅಥವಾ ಸೀರೆಗಳನ್ನು ಉಡುವ ಶೈಲಿಯು ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಚರ್ಮದ ಉಸಿರಾಟಕ್ಕೆ ಇದರಿಂದ ತೊಂದರೆ ಆಗುವ ಕಾರಣ ಕ್ಯಾನ್ಸರ್ ಕೂಡ ಬರಬಹುದು ಎಂದು ವರದಿಗಳು ಎಚ್ಚರಿಸಿವೆ. ಇದನ್ನ ಪೆಟಿಕೋಟ್ ಕ್ಯಾನ್ಸರ್ ಅಥವಾ ಸೀರೆ ಕ್ಯಾನ್ಸರ್ ಎಂದು ಕರೆಯಲಾಗಿದೆ. ಇದಕ್ಕೆ ಕಾರಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ.
ಬಿಗಿಯಾದ ಬಟ್ಟೆಯನ್ನು ಧರಿಸುವ ಅಭ್ಯಾಸ ನಿಮಗೆ ಇದ್ಯಾ? ಹಾಗಿದ್ರೆ ಅದನ್ನ ಈಗಿನಿಂದಲೇ ಬಿಟ್ಟುಬಿಡಿ. ಹೊಸ ಸಂಶೋಧನೆಗಳ ಪ್ರಕಾರ ಬಿಗಿಯಾದ ಉಡುಪುಗಳನ್ನ ಧರಿಸೋದು ಕ್ಯಾನ್ಸರ್‌ಗೆ ಕಾರಣವಾಗಬಹುದಂತೆ! ಅಚ್ಚರಿ ಎನಿಸಿದರೂ ಇದು ಸತ್ಯ. ಇತ್ತೀಚೆಗೆ ನಡೆದಿರೋ ಕೆಲ ಅಧ್ಯಯನಗಳ ಪ್ರಕಾರ ಅತಿ ಬಿಗಿಯಾದ ಪೆಟಿಕೋಟ್‌ಗಳ ಧರಿಸುವಿಕೆ ಅಥವಾ ಸೀರೆಗಳನ್ನು ಉಡುವ ಶೈಲಿಯು ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಚರ್ಮದ ಉಸಿರಾಟಕ್ಕೆ ಇದರಿಂದ ತೊಂದರೆ ಆಗುವ ಕಾರಣ ಕ್ಯಾನ್ಸರ್ ಕೂಡ ಬರಬಹುದು ಎಂದು ವರದಿಗಳು ಎಚ್ಚರಿಸಿವೆ. ಇದನ್ನ ಪೆಟಿಕೋಟ್ ಕ್ಯಾನ್ಸರ್ ಅಥವಾ ಸೀರೆ ಕ್ಯಾನ್ಸರ್ ಎಂದು ಕರೆಯಲಾಗಿದೆ.
ಹಲವರಿಗೆ ಬಿಗಿಯಾಗಿ ಬಟ್ಟೆಗಳನ್ನ ಧರಿಸುವು ಅಭ್ಯಾಸವಾಗಿರುತ್ತೆ. ಇನ್ನು ಕೆಲವರು ಸದಾ ಸೀರೆ ಉಡುವ ಹವ್ಯಾಸ ಹೊಂದಿರುತ್ತಾರೆ. ದೀರ್ಘ ಕಾಲದ ವರೆಗೆ ಒಂದೇ ಜಾಗದಲ್ಲಿ ಬಿಗಿಯಾದ ಗಂಟು ಕಟ್ಟುವುದರಿಂದ ಸೊಂಟದ ಭಾಗದ ಚರ್ಮಕ್ಕೆ ಹಾನಿಯಾಗಬಹುದು. ಇದರಿಂದಾಗಿ ಚರ್ಮದ ತುರಿಕೆ, ಹುಣ್ಣುಗಳು ಆಗುವುದಲ್ಲದೆ ಮಾರಣಾಂತಿಕ ಕ್ಯಾನ್ಸರ್ ಕೂಡ ವಕ್ಕರಿಸಬಹುದು ಎಂದು ವೈದ್ಯಕೀಯ ವರದಿಗಳು ತಿಳಿಸಿವೆ. ಕೇವಲ ಸೀರೆ, ಪೆಟಿಕೋಟ್ ಧರಿಸುವ ಮಹಿಳೆಯರಿಗೆ ಮಾತ್ರವಲ್ಲದೆ ಧೋತಿಗಳನ್ನು ಹೆಚ್ಚಾಗಿ ಧರಿಸುವ ಪುರುಷರಿಗೂ ಈ ಕ್ಯಾನ್ಸರ್ ಬರಬಹುದಂತೆ!
ಇದನ್ನೂ ಓದಿ: ಕ್ಯಾನ್ಸರ್ ಗೆ ಆಯುರ್ವೇದದಿಂದ ಮುಕ್ತಿ ಸಿಗುತ್ತದೆಯೇ? ತಜ್ಞರು ಹೇಳುವುದೇನು?
ಪೆಟಿಕೋಟ್ ಕ್ಯಾನ್ಸರ್ ಲಕ್ಷಣಗಳು:
* ಸೊಂಟದ ಭಾಗದಲ್ಲಿ ಚರ್ಮ ಕಪ್ಪಾಗುವಿಕೆ
* ಸೊಂಟದ ಸುತ್ತ ಚರ್ಮ ದಪ್ಪವಾಗುವುದು
* ಚರ್ಮ ಒರಟಾಗುವಿಕೆ, ಬಿರುಕು ಬಿಡುವುದು
ಇನ್ನು ಈ ಪೆಟಿಕೋಟ್ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳು ಹಲವಿವೆ. ಅವು ಯಾವುದೆಂದರೆ,
ಸೀರೆ ಕ್ಯಾನ್ಸರ್‌ಗೆ ಕಾರಣ:
* ಬಿಗಿಯಾದ ಪೆಟಿಕೋಟ್, ಸೀರೆ ಅಥವಾ ಧೋತಿಗಳ ಧರಿಸುವಿಕೆ
* ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವ ಬಟ್ಟೆಗಳನ್ನು ಬಹಳ ಸಮಯದವರೆಗೆ ಧರಿಸುವುದು
* ಸೊಂಟದ ಭಾಗಕ್ಕೆ ಬಹು ಕಾಲದ ವರೆಗೆ ಸೂರ್ಯನ ಬೆಳಕು ತಾಗದೆ ಇರುವುದು
* ಸೊಂಟದ ಭಾಗದಲ್ಲಿ ಅತಿಯಾದ ಬೆವರು ಅಥವಾ ತೇವಾಂಶ
ಪೆಟಿಕೋಟ್ ಅಥವಾ ಸೀರೆ ಕ್ಯಾನ್ಸರ್ ಅನ್ನು ಮುನ್ನೆಚ್ಚರಿಕಾ ಕ್ರಮಗಳಿಂದ ತಡೆಗಟ್ಟಬಹುದಾಗಿದೆ. ತುಂಬಾ ಬಿಗಿಯಾದ ಪೆಟಿಕೋಟ್‌ಗಳು ಅಥವಾ ಸೊಂಟದ ಪಟ್ಟಿಗಳನ್ನ ಧರಿಸದೇ ಇರುವುದು ಒಳ್ಳೆಯದು. ಸೀರೆ ಉಡುವ ಹವ್ಯಾಸ ಇರುವವರು, ಪೆಟಿಕೋಟ್ ಗಂಟನ್ನು ಒಂದೇ ಜಾಗದಲ್ಲಿ ಹಾಕುವುದನ್ನ ತಪ್ಪಿಸಿದರೆ ಒಳ್ಳೆಯದು. ಹಾಗೆಯೇ ಸೊಂಟದ ಭಾಗದಲ್ಲಿ ನೈರ್ಮಲ್ಯವನ್ನ ಕಾಪಾಡಿಕೊಳ್ಳುವ ಜೊತೆಗೆ ಆ ಭಾಗದಲ್ಲಿ ಚರ್ಮದ ಸಮಸ್ಯೆಗಳು ಕಂಡುಬಂದಾಗ ಕೂಡಲೇ ವೈದ್ಯರನ್ನ ಸಂಪರ್ಕಿಸಿದರೆ ಒಳಿತು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ