Ashada Masa 2024: ಆಷಾಢ ಮಾಸದಲ್ಲಿ ಗರ್ಭ ಧರಿಸಬಾರದು ಯಾಕೆ? ಡಾ. ಅಶೋಕ್ ಕೃಷ್ಣ ಭಟ್ ಹೇಳುವುದೇನು?

ಪೂರ್ವಜರು ಕೆಲವು ಪದ್ದತಿಗಳನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಕೆಲವೊಂದು ನಮಗೆ ಮೂಢನಂಬಿಕೆ ಎನಿಸಿದರೂ ಅದಕ್ಕೆ ಒಂದು ವೈಜ್ಞಾನಿಕ ಕಾರಣವಿರುತ್ತದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಗರ್ಭ ಧರಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ. ಅದಕ್ಕಾಗಿಯೇ ಹೊಸದಾಗಿ ಮದುವೆಯಾದ ಜೋಡಿ ಮನೆಯಲ್ಲಿ ಇದ್ದರೆ ಹೆಣ್ಣನ್ನು ತವರು ಮನೆಗೆ ಕಳುಹಿಸುವ ಪದ್ದತಿಯಿದೆ. ಇದು ನಮಗೆ ಅರ್ಥವಿಲ್ಲದ ಆಚರಣೆ ಎನಿಸಬಹುದು. ಆದರೆ ಇದಕ್ಕೆ ಕಾರಣವಿದೆ. ಹಾಗಾದರೆ ಇದರ ಹಿಂದಿರುವ ಕಾರಣವೇನು? ಈ ಬಗ್ಗೆ ವೈದ್ಯರು ಹೇಳುವುದೇನು? ಇಲ್ಲಿದೆ ಮಾಹಿತಿ.

Ashada Masa 2024: ಆಷಾಢ ಮಾಸದಲ್ಲಿ ಗರ್ಭ ಧರಿಸಬಾರದು ಯಾಕೆ? ಡಾ. ಅಶೋಕ್ ಕೃಷ್ಣ ಭಟ್ ಹೇಳುವುದೇನು?
ಡಾ. ಅಶೋಕ್ ಕೃಷ್ಣ ಭಟ್
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 19, 2024 | 11:03 AM

ನಮ್ಮ ಪೂರ್ವಜರು ಕೆಲವು ಪದ್ದತಿಗಳನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಕೆಲವೊಂದು ನಮಗೆ ಮೂಢನಂಬಿಕೆ ಎನಿಸಿದರೂ ಅದಕ್ಕೆ ಒಂದು ವೈಜ್ಞಾನಿಕ ಕಾರಣವಿರುತ್ತದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಗರ್ಭ ಧರಿಸಬಾರದು ಒಳ್ಳೆಯದಲ್ಲ ಎನ್ನುತ್ತಾರೆ. ಅದಕ್ಕಾಗಿಯೇ ಹೊಸದಾಗಿ ಮದುವೆಯಾದ ಜೋಡಿ ಮನೆಯಲ್ಲಿ ಇದ್ದರೆ ಹೆಣ್ಣನ್ನು ತವರು ಮನೆಗೆ ಕಳುಹಿಸುವ ಪದ್ದತಿಯಿದೆ. ಇದು ನಮಗೆ ಅರ್ಥವಿಲ್ಲದ ಆಚರಣೆ ಎನಿಸಬಹುದು. ಆದರೆ ಇದಕ್ಕೆ ಕಾರಣವಿದೆ. ಹಾಗಾದರೆ ಇದರ ಹಿಂದಿರುವ ಕಾರಣವೇನು? ಈ ಬಗ್ಗೆ ವೈದ್ಯರು ಹೇಳುವುದೇನು? ಇಲ್ಲಿದೆ ಮಾಹಿತಿ.

ಆಷಾಢ ಮಾಸದಲ್ಲಿ ನವವಿವಾಹಿತರು ದೂರವಿರಬೇಕು, ಅಥವಾ ಈ ಮಾಸದಲ್ಲಿ ಗರ್ಭ ಧರಿಸುವುದು ಒಳ್ಳೆಯದಲ್ಲ ಎನ್ನುವ ಕಾರಣ ಹೆಣ್ಣು ಮಕ್ಕಳು ತವರಿಗೆ ಬರುವ ಸಂಪ್ರದಾಯವಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಡಾ। ಅಶೋಕ್ ಕೃಷ್ಣ ಭಟ್, ಹಳಕಾರ ಇವರು ಕೆಲವು ವಿಷಯಗಳನ್ನು ಟಿವಿ9 ಜೊತೆ ಹಂಚಿಕೊಂಡಿದ್ದು “ಈ ಸಮಯದಲ್ಲಿ ಗಂಡ ಹೆಂಡತಿ ಸೇರಿ ಹೆಣ್ಣು ಗರ್ಭವತಿಯಾದರೆ, ಚೈತ್ರ ಮಾಸದಲ್ಲಿ ಅಂದರೆ ಏಪ್ರಿಲ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಬಹುದು. ಈ ಸಮಯದಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆ. ಇದರಿಂದ ತಾಯಿ ಹಾಗೂ ಮಗುವಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡಬಹುದು” ಎಂದಿದ್ದಾರೆ.

ಇದನ್ನೂ ಓದಿ: ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಬಾರಿ ಮಲವಿಸರ್ಜನೆ ಮಾಡಬೇಕು? ಅಧ್ಯಯನ ಹೇಳಿದ್ದೇನು?

“ಈ ಆಚರಣೆ ನಮ್ಮಲ್ಲಿ ಅಷ್ಟಾಗಿ ರೂಢಿಯಲ್ಲಿ ಇಲ್ಲ. ಆದರೆ ಇದನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಆದರೆ ಇದು ಕಡ್ಡಾಯವಲ್ಲ. ಏಪ್ರಿಲ್ ತಿಂಗಳಿನಲ್ಲಿ ಹೆರಿಗೆ ಆದಲ್ಲಿ ಮಗು ಮತ್ತು ತಾಯಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಚಿಕನ್‌ ಪಾಕ್ಸ್‌, ಚರ್ಮದ ಸಮಸ್ಯೆ, ಮಗುವಿನ ಚಟುವಟಿಕೆ ಮಂದವಾಗಿರುವುದು ಅಥವಾ ಮಗುವಿನಲ್ಲಿ ಯಾವುದಾದರೂ ನೂನ್ಯತೆ ಕಂಡು ಬರಬಹುದು. ಆದರೆ ಇದು ಎಲ್ಲರಲ್ಲಿಯೂ ಕಂಡು ಬರಬೇಕು ಎಂಬುದಿಲ್ಲ. ಅವರವರ ದೇಹದ ಪ್ರಕೃತಿ ಬದಲಾವಣೆ ಇರುವುದರಿಂದ ಕೆಲವರಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬರದಿರಬಹುದು. ಇನ್ನು ಬೇರೆ ತಿಂಗಳಿಗೆ ಹೋಲಿಕೆ ಮಾಡಿದರೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿಯೇ ಜನಿಸುವವರು ಹೆಚ್ಚಾಗಿರುತ್ತಾರೆ. ಹಾಗಾಗಿ ಈ ಆಚರಣೆ ಸರಿ ಅಥವಾ ತಪ್ಪು ಎನ್ನಲು ಸಾಧ್ಯವಿಲ್ಲ. ಬದಲಾಗಿ ನಂಬಿಕೆ ಇರುವವರು ಆಚರಣೆ ಮಾಡುತ್ತಾರೆ ಇಲ್ಲದವರು ಈ ರೀತಿಯ ಆಚರಣೆಯನ್ನು ಪಾಲನೆ ಮಾಡುವುದಿಲ್ಲ”.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು