Autophagy: ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ ಏನಾಗುತ್ತೆ ಗೊತ್ತಾ!?

ಉಪವಾಸ ಮುರಿಯುವಾಗ ಕರಿದ ತಿಂಡಿ, ಜಂಕ್ ಫುಡ್, ಎಣ್ಣೆಯುಕ್ತ ಆಹಾರ, ಸಿಹಿತಿಂಡಿಗಳು, ಹೆಚ್ಚಿನ ಕ್ಯಾಲೋರಿ ಆಹಾರವನ್ನು ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಉಪವಾಸ ಮಾಡಿದಂತೆ ಆಗುವುದಿಲ್ಲ.

Autophagy:  ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ ಏನಾಗುತ್ತೆ ಗೊತ್ತಾ!?
ವಾರಕ್ಕೆ ಒಂದು ದಿನ ಉಪವಾಸ ಮಾಡಿದರೆ ಅದರಿಂದಾಗುವ ಲಾಭಗಳು ಏನು ಗೊತ್ತಾ!?
Follow us
ಸಾಧು ಶ್ರೀನಾಥ್​
|

Updated on: Jul 25, 2023 | 6:56 PM

ಸಾಮಾನ್ಯವಾಗಿ ನಮ್ಮಲ್ಲಿ ಉಪವಾಸವನ್ನು ಒಂದು ವ್ರತವಾಗಿ ಆಚರಿಸುವವರು ಹೆಚ್ಚಾಗಿದ್ದಾರೆ. ನಮ್ಮ ಮನೆಗಳಲ್ಲಿ ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಹೆಂಡತಿ, ಅಕ್ಕ ಹೀಗೆ ಎಲ್ಲರೂ ವಾರದ ಯಾವುದೋ ಒಂದು ದಿನ ದೇವರ ನಾಮ ಹೇಳಿಕೊಂಡು ಉಪವಾಸ ಮಾಡುತ್ತಿರುತ್ತಾರೆ. ಕೆಲವರು ಒಂದು ಹೊತ್ತಿಗೆ ಉಪವಾಸ ಮಾಡುತ್ತಾರೆ. ಹೀಗೆಲ್ಲಾ ಉಪವಾಸ ಮಾಡುವುದರಿಂದ ತಪ್ಪೇನೂ ಇಲ್ಲ. ಇನ್ನು ಉಪವಾಸ ಮಾಡುವವರಲ್ಲಿ ಮಹಿಳೆಯರೇ ಹೆಚ್ಚು. ಉಪವಾಸ ಮಾಡಿದರೆ ಸುಸ್ತಾಗುವುದು ಗೊತ್ತಿರುವ ವಿಚಾರ. ಅದಕ್ಕಾಗಿಯೇ ಅವರು ಸಂಪೂರ್ಣವಾಗಿ ಉಪವಾಸ ಮಾಡುವ ಬದಲು ಹಾಲು ಮತ್ತು ಹಣ್ಣುಗಳನ್ನು ಆಗಾಗ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ನಿಟ್ಟುಪವಾಸ ಅಂದರೆ ಏನೂ ಕುಡಿಯದೆ, ತಿನ್ನದೆ ಉಪವಾಸ ಇದ್ದುಬಿಡುತ್ತಾರೆ. ಹಾಗಾದರೆ ಉಪವಾಸ ಆರೋಗ್ಯಕ್ಕೆ ಒಳ್ಳೆಯದೇ? ಹೌದು. ಖಂಡಿತಾ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಅದರಲ್ಲೂ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ. ತಿಳಿಯೋಣ ಬನ್ನೀ.

– ಕೆಲವು ಅಧ್ಯಯನಗಳ ಪ್ರಕಾರ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯದ ಸಮಸ್ಯೆಗಳನ್ನು ತಡೆಯಬಹುದು.

– ನಾವು ಸೇವಿಸುವ ಆಹಾರವು ಗ್ಲೂಕೋಸ್ ಆಗಿ ಪರಿವರ್ತನೆಯಾಗಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸುಮಾರು 4 ಗಂಟೆ ಕಾಲ ತೆಗೆದುಕೊಳ್ಳುತ್ತದೆ. ಉಪವಾಸ ಮಾಡುವಾಗ ದೇಹದ ಕೊಬ್ಬು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.

– ಉಪವಾಸ ಮಾಡುವಾಗ ದಿನಕ್ಕೆ 2-3 ಲೀಟರ್ ನೀರು ಕುಡಿಯುವುದರಿಂದ ಎದೆಯ ಉರಿಯೂತ ಕಡಿಮೆಯಾಗುತ್ತದೆ. ಮಲಬದ್ಧತೆ ಮತ್ತು ತಲೆನೋವಿನಂತಹ ಸಮಸ್ಯೆಗಳು ದೂರವಾಗುತ್ತವೆ.

– ಜಠರ ಹುಣ್ಣು ಮತ್ತು ಮಧುಮೇಹ ಇರುವವರು ಉಪವಾಸ ಮಾಡುತ್ತಿದ್ದರೆ ಮಧ್ಯೆ ಮಧ್ಯೆ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬಹುದು.

– ವಾರಕ್ಕೊಮ್ಮೆ ಉಪವಾಸ ಮಾಡಿದರೆ.. ದೇಹವೂ ಹಗುರವಾಗುತ್ತದೆ. ವಾರವಿಡೀ ಸಕ್ರಿಯವಾಗಿರುತ್ತದೆ.

– ಉಪವಾಸ ಮುರಿಯುವಾಗ ಕರಿದ ತಿಂಡಿ, ಜಂಕ್ ಫುಡ್, ಎಣ್ಣೆಯುಕ್ತ ಆಹಾರ, ಸಿಹಿತಿಂಡಿಗಳು, ಹೆಚ್ಚಿನ ಕ್ಯಾಲೋರಿ ಆಹಾರವನ್ನು ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಉಪವಾಸ ಮಾಡಿದಂತೆ ಆಗುವುದಿಲ್ಲ.

– ಉಪವಾಸದ ನಂತರ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ.. ಅಂದರೆ ಬೇಯಿಸಿದ ತರಕಾರಿಗಳು, ಹಾಲು, ಮೊಸರು ಅಥವಾ ಬೇಯಿಸಿದ ಬೀಜಗಳು, ಮೊಳಕೆಯೊಡೆದ ಬೀಜಗಳು ಇತ್ಯಾದಿ.

– ಬಿಪಿ, ತೆಳ್ಳಗಿನವರು, ಮಧುಮೇಹಿಗಳು, ಗರ್ಭಿಣಿಯರು ಮತ್ತು ಬಾಣಂತಿಯರು ಉಪವಾಸ ಮಾಡದಿರುವುದು ಉತ್ತಮ.

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್