Healing Naturally: ಗಾಯ, ತುರಿಕೆಗಳಿಂದ ವೇಗವಾಗಿ ಚೇತರಿಸಿಕೊಳ್ಳಲು ಇಲ್ಲಿವೆ ಆಯುರ್ವೇದದ ಸಲಹೆ

ಗಾಯ ಮತ್ತು ಕಡಿತ (ತುರಿಕೆ) ಗಳಿಂದ ತ್ವರಿತ ಅಥವಾ ವೇಗವಾಗಿ ಚೇತರಿಕೆ ಪಡೆಯಲು ಆಯುರ್ವೇದ ಪರಿಹಾರಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ವೇಗವಾಗಿ ಚೇತರಿಕೆ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Healing Naturally: ಗಾಯ, ತುರಿಕೆಗಳಿಂದ ವೇಗವಾಗಿ ಚೇತರಿಸಿಕೊಳ್ಳಲು ಇಲ್ಲಿವೆ ಆಯುರ್ವೇದದ ಸಲಹೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 25, 2023 | 5:51 PM

ಪ್ರಥಮ ಚಿಕಿತ್ಸೆಯು (First aid) ಯಾವುದೇ ತುರ್ತು ಸಂದರ್ಭದಲ್ಲಿ ಒದಗಿಸಬಹುದಾದ ತ್ವರಿತ ಅಥವಾ ವೇಗವಾಗಿ ನೀಡುವ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇಲ್ಲವಾದಲ್ಲಿ ಸಣ್ಣ ಗಾಯವೂ ಸೋಂಕುಗಳಿಂದಾಗಿ (infections) ದೊಡ್ಡದಾಗಬಹುದು. ಹಾಗಾಗಿ ಪ್ರಥಮ ಚಿಕಿತ್ಸೆಯು ಯಾವಾಗಲೂ ಜೀವವನ್ನು ರಕ್ಷಿಸಲು, ದೊಡ್ಡ ಹಾನಿಯನ್ನು ತಪ್ಪಿಸಲು ಮತ್ತು ತ್ವರಿತ ಚೇತರಿಕೆ ಪಡೆಯಲು ಸಹಾಯ ಮಾಡುತ್ತದೆ ” ಎಂದು ಆಯುರ್ವೇದ (Ayurveda) ಮತ್ತು ಕರುಳಿನ ಆರೋಗ್ಯ (gut health) ತರಬೇತುದಾರರಾದ ಡಾ. ಡಿಂಪಲ್ ಜಂಗ್ಡಾ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ಕಡಿತ ಅಥವಾ ತುರಿಕೆ, ಗಾಯಗಳು ದೈನಂದಿನ ಜೀವನದ ಒಂದು ಭಾಗವಾಗಿದೆ. ನೀವು ಎಷ್ಟೇ ಜಾಗರೂಕರಾಗಿದ್ದರೂ, ಕೆಲವೊಮ್ಮೆ ಹೇಗಾದರೂ ಗಾಯಗೊಳ್ಳುತ್ತೀರಿ. ಈ ಸಣ್ಣ ಗಾಯಗಳಿಗೆ ಮನೆಯಲ್ಲಿಯೇ ಕೆಲವು ಅತ್ಯುತ್ತಮ ಚಿಕಿತ್ಸೆಗಳು ಇದ್ದರೂ ನಾವು ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತೇವೆ ಆದರೆ ಗಂಭೀರ ಅಥವಾ ಗಮನಾರ್ಹ ಗಾಯದ ಸಂದರ್ಭದಲ್ಲಿ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅನಿವಾರ್ಯ ವಾಗಿದೆ ಎಂದು ಡಾ. ಡಿಂಪಲ್ ತಿಳಿಸಿದ್ದಾರೆ. ಇಲ್ಲಿ ಅವರು ಕೆಲವು ಪರಿಣಾಮಕಾರಿ ಆಯುರ್ವೇದ ಪರಿಹಾರಗಳನ್ನು ಸೂಚಿಸಿದ್ದು ಆ ಬಗ್ಗೆ ಇಲ್ಲಿದೆ ಮಾಹಿತಿ.

-ಅರಿಶಿನವು ನೋವನ್ನು ಶಮನಗೊಳಿಸುತ್ತದೆ, ಗಾಯವನ್ನು ಗುಣಪಡಿಸುತ್ತದೆ, ಸೋಂಕನ್ನು ತಡೆಯುತ್ತದೆ ಮತ್ತು ಗಾಯದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಅರಿಶಿನದಲ್ಲಿರುವ ಗುಣಗಳು ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ನೋವನ್ನು ತಕ್ಷಣವೇ ನಿವಾರಿಸುತ್ತದೆ. ಗಾಯವನ್ನು ವಾಸಿಗೊಳಿಸುತ್ತದೆ.

-ತೆಂಗಿನ ಎಣ್ಣೆ ರಕ್ತಸ್ರಾವವನ್ನು ನಿಲ್ಲಿಸುತ್ತದೆ, ಗಾಯವನ್ನು ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ನಿಮ್ಮ ಚರ್ಮವನ್ನು ಕೊಳೆ ಹಾಗೂ ಧೂಳಿನಿಂದ ರಕ್ಷಿಸುತ್ತದೆ. ತೆಂಗಿನ ಎಣ್ಣೆಯಲ್ಲಿ ಸೂಕ್ಷ್ಮಜೀವಿ ವಿರೋಧಿ ಮತ್ತು ಫಂಗಲ್ ವಿರೋಧಿ ಗುಣಗಳಿವೆ, ಹಾಗಾಗಿ ಇದು ಗಾಯಗಳನ್ನು ಸೋಂಕಿನಿಂದ ರಕ್ಷಿಸುವಲ್ಲಿ ತ್ವರಿತವಾಗಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ದೇಹಕ್ಕೆ ಯಾವ ರೀತಿಯ ಓಟ್ಸ್ ಉತ್ತಮ? ಅದರ ವಿಧಗಳಾವುವು? ಇಲ್ಲಿದೆ ಮಾಹಿತಿ

-ಬೇವು ನಂಜು ನಿರೋಧಕ ಮತ್ತು ಗಾಯಗಳನ್ನು ಗುಣಪಡಿಸುವ ಗುಣಗಳನ್ನು ಹೊಂದಿದೆ. ಇದು ಸಣ್ಣ ಸಣ್ಣ ಗಾಯಗಳನ್ನು ವೇಗವಾಗಿ ಕಡಿಮೆ ಮಾಡುತ್ತದೆ, ಜೊತೆಗೆ ಸೋಂಕುಗಳಿಂದ ರಕ್ಷಿಸುತ್ತದೆ ಹಾಗೂ ನೋವನ್ನು ಕಡಿಮೆ ಮಾಡುತ್ತದೆ.

-ಟೀ ಟ್ರೀ ಆಯಿಲ್ ನಲ್ಲಿಯೂ ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಸಣ್ಣ ಗಾಯವಾಗಿದ್ದಲ್ಲಿ ಅದು ತಕ್ಷಣ ಗುಣವಾಗಲು ಸಹಕಾರಿಯಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ