AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Healthiest Oats: ದೇಹಕ್ಕೆ ಯಾವ ರೀತಿಯ ಓಟ್ಸ್ ಉತ್ತಮ? ಅದರ ವಿಧಗಳಾವುವು? ಇಲ್ಲಿದೆ ಮಾಹಿತಿ

ಓಟ್ಸ್ ನಲ್ಲಿ ಅನೇಕ ವಿಧಗಳಿವೆ. ಅವೆಲ್ಲವೂ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಯಾವ ರೀತಿಯ ಓಟ್ಸ್ ಆರೋಗ್ಯಕರ ಎಂದು ನೀವು ಗೊಂದಲಕ್ಕೊಳಗಾಗುತ್ತೀರಾ? ಹಾಗಾದರೆ ಇಲ್ಲಿದೆ ಮಾಹಿತಿ.

Healthiest Oats: ದೇಹಕ್ಕೆ ಯಾವ ರೀತಿಯ ಓಟ್ಸ್ ಉತ್ತಮ? ಅದರ ವಿಧಗಳಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 20, 2023 | 10:23 AM

Share

ಚಿಕ್ಕವರಾಗಿರಲಿ ಅಥವಾ ವೃದ್ಧರಾಗಿರಲಿ, ಮಧುಮೇಹವಾಗಿರಲಿ ಅಥವಾ ಇಲ್ಲದಿರುವವರಾಗಲಿ, ಓಟ್ಸ್ ಅನೇಕರಿಗೆ ಉಪಾಹಾರಕ್ಕೆ ಅನುಗುಣವಾದ ಪ್ರಧಾನ ಆಹಾರವಾಗಿದೆ. ಓಟ್ಸ್ ಫೈಬರ್​ನಿಂದ ತುಂಬಿರುವುದರಿಂದ ಮತ್ತು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುವುದರಿಂದ ಈ ಆಹಾರ ಒಳ್ಳೆಯದಾಗಿದೆ. ಓಟ್ಸ್ ಗಂಜಿಯನ್ನು ತಿನ್ನುವ ಸಾಮಾನ್ಯ ವಿಧಾನವಾಗಿದ್ದರೂ, ನೀವು ತರಕಾರಿಗಳೊಂದಿಗೆ ಓಟ್ಸ್ ಉಪ್ಮಾವನ್ನು ಸವಿಯಬಹುದು ಅಥವಾ ಅದಕ್ಕೆ ಆರೋಗ್ಯಕರವಾಗಿರುವ ಸೀಡ್ಸ್ ಮತ್ತು ಹಣ್ಣುಗಳನ್ನು ಸಹ ಸೇರಿಸಿಕೊಳ್ಳಬಹುದು. ಕೆಲವು ಜನರು ಓಟ್ಸ್ ಚಿಲ್ಲಾ ಎಂಬ ದೇಸಿ ಸಿಹಿ ಅಲ್ಲದ ಪ್ಯಾನ್ ಕೇಕ್ ಅನ್ನು ಸಹ ಸೇವಿಸುತ್ತಾರೆ. ಅವುಗಳನ್ನು ತಯಾರಿಸಲು ಮತ್ತು ಆನಂದಿಸಲು ಅನೇಕ ಮಾರ್ಗಗಳಿರುವಂತೆಯೇ, ವಿವಿಧ ರೀತಿಯ ಓಟ್ಸ್ ಸಹ ಇವೆ. ಆದರೆ ವಿವಿಧ ರೀತಿಯ ಓಟ್ಸ್​​ಗಳು ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಪರಿಮಾಣ ಬೀರುತ್ತದೆ, ಯಾವುದು ತುಂಬಾ ಉತ್ತಮ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಆರೋಗ್ಯಕರವಾದ ಓಟ್ಸ್​ನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ಮುಂಬೈ ಮೂಲದ ಪೌಷ್ಟಿಕ ತಜ್ಞೆ ಶಿಕ್ಷಕಿ ಕರಿಷ್ಮಾ ಚಾವ್ಲಾ ಕೆಲವು ಸಲಹೆಗಳನ್ನು ನೀಡುವ ಮೂಲಕ ಸ್ಪಷ್ಟ ಮಾಹಿತಿ ಒದಗಿಸಿದ್ದಾರೆ.

ವಿವಿಧ ರೀತಿಯ ಓಟ್ಸ್

ನೀವು ಓಟ್ಸ್ ನಿಂದ ಮಾಡಬಹುದಾದ ತಿನಿಸುಗಳನ್ನು ಹುಡುಕುವ ಮೊದಲು, ಓಟ್ಸ್ ಅನ್ನು ಫೈಬರ್ ಸಮೃದ್ಧವಾಗಿರುವ ಸಂಕೀರ್ಣ ಕಾರ್ಬೋಹೈಡ್ರೇಟ್ ಎಂದು ವರ್ಗೀಕರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಇತರ ಧಾನ್ಯಗಳಿಗೆ ಹೋಲಿಸಿದರೆ ಓಟ್ಸ್ ನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ ಎಂದು ಚಾವ್ಲಾ ಹೇಳುತ್ತಾರೆ. ರಕ್ತದಲ್ಲಿನ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಟ್ಸ್ ನಲ್ಲಿ ಕರಗುವ ಫೈಬರ್ ಇರುವುದರಿಂದ ಆಹಾರಗಳ ಗ್ಲೈಸೆಮಿಕ್ ಸೂಚ್ಯಂಕವನ್ನು (ಜಿಐ) ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನೀವು ಪ್ರಯತ್ನಿಸಬಹುದಾದ ಓಟ್ಸ್ ಗಳ ಪಟ್ಟಿ ಇಲ್ಲಿವೆ:

ಶುದ್ಧ ಓಟ್ಸ್ ಕೂಡ ಗ್ಲುಟೆನ್ ಮುಕ್ತವಾಗಿದೆ, ಆದ್ದರಿಂದ ಇದನ್ನು ಸೀಲಿಯಾಕ್ ರೋಗ( ಈ ರೋಗ ಇರುವವವರು ಗ್ಲುಟೆನ್ ಅಂಶವಿರುವ ಆಹಾರ ಸೇವಿಸಬಾರದು) ಇರುವವರು ಕೂಡ ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಓಟ್ಸ್ ಮೆಗ್ನೀಸಿಯಮ್ನನ ಉತ್ತಮ ಮೂಲವಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಓಟ್ಸ್ ನ ವಿಧಗಳಾವವು? ಯಾವುದು ಉತ್ತಮ? ಇಲ್ಲಿದೆ ಮಾಹಿತಿ.

1. ಸಂಪೂರ್ಣ ಓಟ್ಸ್ ಗ್ರೋಟ್ಸ್ (ಶುದ್ಧ ರೂಪದ ಧಾನ್ಯ) (Whole oat groats) ಈ ಓಟ್ಸ್ ಅದರ ಶುದ್ಧ ರೂಪದಲ್ಲಿದೆ. ಅಂದರೆ ಯಾವುದೇ ರೀತಿಯ ಪೋಲಿಶ್​ಗಳಿಗೆ ಒಳಗಾಗಿರುವುದಿಲ್ಲ. ಆದ್ದರಿಂದ, ಇದನ್ನು ಬೇಯಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸಂಪೂರ್ಣ ಓಟ್ ಗ್ರೋಟ್ಸ್ ಬಳಸಿ ಯಾವುದಾದರೂ ಆಹಾರ ತಯಾರಿಸಲು ಸರಿ ಸುಮಾರು 30 ರಿಂದ 45 ನಿಮಿಷಗಳು ಬೇಕಾಗುತ್ತದೆ. ನೀವು ಮಾರುಕಟ್ಟೆಯಲ್ಲಿ ಓಟ್ಸ್ ಬ್ರಾನ್ ಅನ್ನು ನೋಡಿರಬಹುದು. ಇದು ವಾಸ್ತವವಾಗಿ ಓಟ್ ಗ್ರೋಟ್ಸ್ ನ ಹೊರ ಪದರವಾಗಿದೆ, ಆದರೆ ಇದನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

2. ರೋಲ್ಡ್ ಓಟ್ಸ್ (Rolled oats) ಇವು ಹಳೆಯ ಶೈಲಿಯ ಓಟ್ಸ್ ಗಳಾಗಿದ್ದು, ಅವು ಹಬೆಯಲ್ಲಿ ಬೇಯುತ್ತದೆ ಜೊತೆಗೆ ಸೌಮ್ಯ ಪರಿಮಳವನ್ನು ಹೊಂದಿವೆ ಮತ್ತು ಅವುಗಳನ್ನು ಭಾಗಶಃ ಬೇಯಿಸಿರುವುದರಿಂದ, ತಯಾರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಕೇವಲ ಎರಡರಿಂದ ಮೂರು ನಿಮಿಷಗಳು ಸಾಕಾಗುತ್ತದೆ.

3. ಸ್ಟೀಲ್ ಕಟ್ ಓಟ್ಸ್ (Steel-cut oats) ಅವು ಸಂಸ್ಕರಿಸದ ಓಟ್ಸ್ ಗೆ ನಿಕಟ ಸಂಬಂಧ ಹೊಂದಿವೆ. ಸ್ಟೀಲ್ ಕಟ್ ಓಟ್ಸ್ ತಯಾರಿಸಲು, ದೊಡ್ಡ ಸ್ಟೀಲ್ ಬ್ಲೇಡ್​​ಗಳನ್ನು ಬಳಸುವುದರಿಂದ ಈ ಹೆಸರು ಬಂದಿದೆ ಎನ್ನುತ್ತಾರೆ ಚಾವ್ಲಾ. ಇವು ರೋಲ್ಡ್ ಓಟ್ಸ್ ಗಿಂತ ಒರಟಾಗಿದ್ದು ತುಂಬಾ ಜಗಿಯು ಬೇಕಾಗುತ್ತದೆ. ಸ್ಟೀಲ್ ಕಟ್ ಓಟ್ಸ್ ನ ಸರಾಸರಿ ಅಡುಗೆ ಸಮಯ ಸುಮಾರು 15 ರಿಂದ 30 ನಿಮಿಷಗಳು.

4. ಇನ್ಸ್ಟಂಟ್ ಓಟ್ಸ್ ( Instant oats) ಇನ್ಸ್ಟಂಟ್ ಓಟ್ಸ್, ರೋಲ್ಡ್ ಓಟ್ಸ್ ನ ಅತ್ಯಂತ ಸಂಸ್ಕರಿಸಿದ ರೂಪವಾಗಿದೆ. ಏಕೆಂದರೆ ಅವುಗಳನ್ನು ಮೊದಲೇ ಬೇಯಿಸಲಾಗುತ್ತದೆ ಮತ್ತು ಒಣಗಿಸಲಾಗುತ್ತದೆ ಹಾಗೂ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ನೀವು ಬೇಕಾದಲ್ಲಿ ಹಬೆಯಲ್ಲಿ ಬೇಯಿಸಿಕೊಳ್ಳಿ ಆಗ ರುಚಿ ಇನ್ನಷ್ಟು ಹೆಚ್ಚುತ್ತದೆ. ಅಥವಾ ತಿನ್ನುವ ಮೊದಲು ಅದನ್ನು ಬಿಸಿ ನೀರಿನಲ್ಲಿ ನೆನೆಸಿ ಬಳಿಕ ಸೇವಿಸಬಹುದು. ನಿಮ್ಮ ರುಚಿಗೆ ತಕ್ಕಂತೆ ಮಾಡಿಕೊಳ್ಳಿ.

5. ತ್ವರಿತವಾಗಿ ಮಾಡಿಕೊಳ್ಳುವ ಓಟ್ಸ್ (Quick oats) ಅವು ರೋಲ್ಡ್ ಓಟ್ಸ್ ಆಗಿದ್ದು, ಅಡುಗೆಯ ಸಮಯವನ್ನು ಕಡಿಮೆ ಮಾಡಲು ಹೆಚ್ಚಿನ ಸಂಸ್ಕರಣೆಯ ಮೂಲಕ ತಯಾರಿಸಲಾಗುತ್ತದೆ. ಅಂದರೆ ಅವುಗಳನ್ನು ಭಾಗಶಃ ಬೇಯಿಸಲಾಗುತ್ತದೆ ಹಾಗಾಗಿ ಅವುಗಳನ್ನು ತಯಾರಿಸಲು ನಿಮಗೆ ಸಾಕಷ್ಟು ಸಮಯ ವ್ಯಯಿಸಬೇಕೆಂದಿಲ್ಲ. ಇದನ್ನು ಹಬೆಯಲ್ಲಿ ಬೇಯಿಸುವುದರಿಂದ ಹಳೆಯ ಶೈಲಿಯ ಓಟ್ಸ್ ಗಿಂತ ತೆಳುವಾಗುತ್ತದೆ. ತಿನ್ನಲು ಖುಷಿ ಕೊಡುತ್ತದೆ.

ಇದನ್ನೂ ಓದಿ: ತೂಕ ನಷ್ಟಕ್ಕೆ ಓಟ್ಸ್ ಪಡ್ಡು: ಮಾಡುವ ವಿಧಾನ ಮತ್ತು ಅರೋಗ್ಯ ಪ್ರಯೋಜನಗಳು

ಆರೋಗ್ಯಕರ ರೀತಿಯ ಓಟ್ಸ್:

ಇವೆಲ್ಲದರಲ್ಲಿ ಚಾವ್ಲಾ ಅವರ ಪ್ರಕಾರ, ಉತ್ತಮವಾದ ಓಟ್ಸ್ ಎಂದರೆ ಸ್ಟೀಲ್ ಕಟ್ ಓಟ್ಸ್. ಇದು ಅತ್ಯುತ್ತಮ ಮತ್ತು ಆರೋಗ್ಯಕರ ರೀತಿಯ ಓಟ್ಸ್ ಆಗಿದೆ. ಏಕೆಂದರೆ ಅವು ಹೆಚ್ಚು ಸಂಸ್ಕರಣೆಗೆ ಒಳಗಾಗುವುದಿಲ್ಲ. ಈ ರೀತಿಯ ಓಟ್ಸ್ ದೇಹಕ್ಕೆ ದೊಡ್ಡ ಪ್ರಮಾಣದ ಫೈಬರ್ ಅನ್ನು ನೀಡುತ್ತದೆ, ಕಡಿಮೆ ಜಿಐ ಅನ್ನು ಹೊಂದಿರುತ್ತದೆ ಆದ್ದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯಾ ಕ್ರಿಯೆ ಹಾಗೂ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಓಟ್ಸ್ ಅನ್ನು ಬೆಳಗಿನ ಉಪಾಹಾರದಲ್ಲಿ ಬಳಸಿಕೊಳ್ಳುವುದು ಉತ್ತಮ ಏಕೆಂದರೆ ಅವು ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಾಗದಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ತೂಕ ನಿರ್ವಣೆಗೆ ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ