Oats for Weight Loss: ಓಟ್ಸ್ ಉತ್ತಪ್ಪಂ ಉಪಾಹಾರಕ್ಕೆ ಸೂಕ್ತ ಆಯ್ಕೆ! ಮಾಡುವುದು ಹೇಗೆ?

ಈ ಉತ್ತಪ್ಪಂನಲ್ಲಿನ ಮುಖ್ಯ ಘಟಕಾಂಶವಾದ ಓಟ್ಸ್ ಹೆಚ್ಚಿನ ಫೈಬರ್ ಅಂಶಕ್ಕೆ ಹೆಸರುವಾಸಿಯಾಗಿದೆ. ಜೊತೆಗೆ ಇದು ನಿಮ್ಮ ಉಪಾಹಾರಕ್ಕೆ ಸೂಕ್ತ ಆಯ್ಕೆಯಾಗಿದ್ದು, ಇದನ್ನು ಮಾಡುವುದು ಹೇಗೆ? ಇದರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Oats for Weight Loss: ಓಟ್ಸ್ ಉತ್ತಪ್ಪಂ ಉಪಾಹಾರಕ್ಕೆ ಸೂಕ್ತ ಆಯ್ಕೆ! ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 08, 2023 | 6:25 PM

ನಮ್ಮಲ್ಲಿ ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಬಯಸಿದಾಗಲೆಲ್ಲಾ ದಕ್ಷಿಣ ಭಾರತದ ಆಹಾರವನ್ನು ಬಯಸುತ್ತಾರೆ. ಆದರೆ ನಮ್ಮಲ್ಲಿರುವ ವ್ಯಾಪಕ ಪಾಕಪದ್ಧತಿಯ ವೈವಿಧ್ಯತೆಗಳಲ್ಲಿ, ಅತ್ಯಂತ ಪ್ರಸಿದ್ಧ ಖಾದ್ಯವೆಂದರೆ ಕ್ಲಾಸಿಕ್ ಉತ್ತಪ್ಪಂ. ಉದ್ದಿನ ಬೆಳೆ ಮತ್ತು ಅಕ್ಕಿಯ ಹಿಟ್ಟಿನಿಂದ ತಯಾರಿಸಲಾದ ಇದು ಹೆಚ್ಚಿನ ಪೌಷ್ಠಿಕಾಂಶಯುಕ್ತ ಆಹಾರವಾಗಿದೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಆರೋಗ್ಯಕರ ಉಪಾಹಾರದ ಆಯ್ಕೆಯಾಗಿದೆ. ಜೊತೆಗೆ ಉತ್ತಪಂ(ಉತ್ತಪ್ಪಾ) ಬಗ್ಗೆ ನೀವು ಇಷ್ಟ ಇಷ್ಟಪಡಬಹುದಾದ ಇನ್ನೊಂದು ಗುಣವಿದೆ. ಈ ದಕ್ಷಿಣ ಭಾರತದ ಖಾದ್ಯ ಯಾವಾಗಲೂ ಅದ್ಭುತ ವಾಗಿರುತ್ತದೆ. ಉದಾಹರಣೆಗೆ, ಓಟ್ಸ್ ಉತ್ತಪ್ಪಂ. ಇದು ದೇಹಕ್ಕೆ ಮುಖ್ಯ ಘಟಕಾಂಶವಾದ ಫೈಬರ್ ನೀಡುವುದಕ್ಕೆ ಹೆಸರುವಾಸಿಯಾಗಿದೆ. ಇದು ನಮ್ಮನ್ನು ದೀರ್ಘಕಾಲದವರೆಗೆ ಹಸಿವಾಗದಿರುವಂತೆ ನೋಡಿಕೊಳ್ಳುತ್ತದೆ. ಇದರ ಪ್ರಯೋಜನಗಳ ಬಗ್ಗೆ ಮ್ಯಾಕ್ರೋಬಯಾಟಿಕ್ ಪೌಷ್ಟಿಕ ತಜ್ಞೆ ಶಿಲ್ಪಾ ಅರೋರಾ, “ಓಟ್ಸ್ ಫೈಬರ್ನಿಂದ ಸಮೃದ್ಧವಾಗಿದೆ, ಇದು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ನೀವು ಬೆಳಗಿನ ಉಪಾಹಾರಕ್ಕೆ ಓಟ್ಸ್ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಇದೊಂದು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ” ಎಂದಿದ್ದಾರೆ.

ತೂಕ ಇಳಿಸಿಕೊಳ್ಳಲು ಓಟ್ಸ್ ಬಳಸುವುದು ಹೇಗೆ?

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರಿಗೆ ಓಟ್ಸ್ ಅನ್ನು ಅತ್ಯುತ್ತಮ ಧಾನ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವುಗಳ ಹೆಚ್ಚಿನ ಫೈಬರ್ ಅಂಶವಿದ್ದು, ಅವು ಬೇಡದ ಸಮಯದಲ್ಲಿ ಅತಿಯಾಗಿ ತಿನ್ನುವುದನ್ನು ತಡೆಯುತ್ತವೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಓಟ್ಸ್ ಉತ್ತಪ್ಪಂ ಉತ್ತಮವಾಗಿದ್ದರೂ, ತೂಕ ಇಳಿಸಿಕೊಳ್ಳಲು ನೀವು ಈ ಧಾನ್ಯವನ್ನು ಇತರ ಹಲವಾರು ರೀತಿಗಳಲ್ಲಿ ಬಳಸಬಹುದಾಗಿದೆ. ದೋಸೆ, ಇಡ್ಲಿ, ಪೊಂಗಲ್ ಅಥವಾ ಉಪ್ಮಾದಂತಹ ಇತರ ದಕ್ಷಿಣ ಭಾರತದ ಭಕ್ಷ್ಯಗಳನ್ನು ಮಾಡುವ ಮೂಲಕ ಇದನ್ನು ಸೇವಿಸಬಹುದು. ಮತ್ತು ನೀವು ಉತ್ತರದಿಂದ ಬಂದವರಾಗಿದ್ದರೆ, ಇದನ್ನು ಖಿಚಡಿ, ಟಿಕ್ಕಿಗಳು ಅಥವಾ ಪರೋಟವನ್ನು ತಯಾರಿಸಲು ಬಳಸಬಹುದು.

ಓಟ್ಸ್ ನ ಇತರ ಕೆಲವು ಆರೋಗ್ಯ ಪ್ರಯೋಜನಗಳು ಯಾವುವು?

ತೂಕ ಇಳಿಸಿಕೊಳ್ಳಲು ಓಟ್ಸ್ ಸೂಪರ್ ಧಾನ್ಯ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಅವು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿವೆ ಎಂದು ನಿಮಗೆ ತಿಳಿದಿದೆಯೇ? ಅವು ಪ್ರೋಟೀನ್ ನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆ ಆಗಲು ಬಯಸಿದರೆ ಓಟ್ಸ್ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಅಜೀರ್ಣ ವ್ಯವಸ್ಥೆಗೆ ಮುಕ್ತಿ ನೀಡಬಹುದು.

ಇದನ್ನೂ ಓದಿ: Weight Loss Tips: ಮಧ್ಯರಾತ್ರಿ ಹಸಿವು ತಡೆಯಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ಓಟ್ಸ್ ಉತ್ತಪ್ಪಂ ಪಾಕವಿಧಾನ ಅಥವಾ ಓಟ್ಸ್ ಉತ್ತಪಮ್ ತಯಾರಿಸುವುದು ಹೇಗೆ?

ಓಟ್ಸ್ ಉತ್ತಪ್ಪಂ ತಯಾರಿಸಲು, ನಿಮಗೆ ಬೇಕಾಗಿರುವುದು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಸರಳ ಪದಾರ್ಥಗಳು. ಮಿಕ್ಸರ್ ಗ್ರೈಂಡರ್ ಗೆ ಓಟ್ಸ್, ಸೂಜಿ ರವೇ ಅಂದರೆ ಸಣ್ಣ ರವಾ ಮತ್ತು ಇಂಗನ್ನು ಸೇರಿಸಿ ಈ ಮಿಶ್ರಣವನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಅವುಗಳನ್ನು ಚೆನ್ನಾಗಿ ರುಬ್ಬಿಕೊಂಡ ನಂತರ ಒಂದು ಬೌಲ್ ಗೆ ಅದನ್ನು ವರ್ಗಾಯಿಸಿ, ಬಳಿಕ ಮೊಸರು, ಕೆಂಪು ಮೆಣಸಿನ ಪುಡಿ, ಜೀರಿಗೆ, ಕತ್ತರಿಸಿದ ಶುಂಠಿ ಮತ್ತು ಅಡಿಗೆ ಸೋಡಾ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ದಪ್ಪ ಹಿಟ್ಟನ್ನು ತಯಾರಿಸಲು ಕ್ರಮೇಣ ಈ ಮಿಶ್ರಣಕ್ಕೆ ಹದವಾಗಿ ನೀರನ್ನು ಸೇರಿಸಿಕೊಳ್ಳಿ. ಇದನ್ನು 10-15 ನಿಮಿಷಗಳ ಕಾಲ ಹಾಗೇ ಇಡಿ. ಈಗ, ಕ್ಯಾಪ್ಸಿಕಂ, ಟೊಮೆಟೋ ಮತ್ತು ಹಸಿ ಮೆಣಸು ಸೇರಿದಂತೆ ಎಲ್ಲಾ ತರಕಾರಿಗಳನ್ನು ಸೇರಿಸಬೇಕು. ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ತವಾ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಅದರ ಮೇಲೆ ಒಂದು ಉತ್ತಪ್ಪಂ ಸಾಕಾಗುವಷ್ಟು ಹಿಟ್ಟನ್ನು ಸುರಿದು ದೋಸೆಯ ಹಾಗೇ ಮಾಡಿ ನಂತರ ಒಮ್ಮೆ ಅದು ಚಿನ್ನದ ಕಂದು ಬಣ್ಣಕ್ಕೆ ತಿರುಗಿದಾಗ, ಇನ್ನೊಂದು ಬದಿಯನ್ನು ತಿರುಗಿಸಿ ಮತ್ತೆ ಬೇಯಿಸಿ. ಬಿಸಿಯಾಗಿ ಬಡಿಸಿ! ಓಟ್ಸ್ ಉತ್ತಪಂ ಸವಿಯಲು ಸಿದ್ಧವಾಗಿದೆ.

ಈ ರುಚಿಕರವಾದ ಉತ್ತಪ್ಪವನ್ನು ಮನೆಯಲ್ಲಿಯೇ ತಯಾರಿಸಿ ಮತ್ತು ಅದನ್ನು ನಿಮ್ಮ ತೂಕ ಇಳಿಸುವ ಆಹಾರದ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಒಮ್ಮೆ ನೀವು ಇದನ್ನು ಮಾಡಿ ಸವಿದಲ್ಲಿ ನಂತರ, ಅದು ನಿಮ್ಮ ಊಟದ ಒಂದು ಆಯ್ಕೆಯಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ