ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ; ಈ ರೋಗಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ತಕ್ಷಣವೇ ಎಚ್ಚರವಹಿಸಿ

ಸ್ತನ ಕ್ಯಾನ್ಸರ್ ಅನ್ನು ಮೊದಲ ಅಥವಾ ಎರಡನೇ ಹಂತದಲ್ಲಿಯೇ ಪತ್ತೆ ಮಾಡಿದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿದೆ. ಆದರೆ ಇದರ ಬಗ್ಗೆ ತಿಳಿದುಕೊಳ್ಳುವುದು ನಾವು ಹೇಗೆ ಮುನ್ನೆಚ್ಚರಿಕೆ ವಹಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ.

ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ; ಈ ರೋಗಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ತಕ್ಷಣವೇ ಎಚ್ಚರವಹಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 13, 2021 | 9:14 AM

ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಾಗಿ ಅಕ್ಟೋಬರ್ ಅನ್ನು ಆಚರಿಸಲಾಗುತ್ತದೆ. ಆ ಮೂಲಕ ವಿಶ್ವದಾದ್ಯಂತ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈ ಕ್ಯಾನ್ಸರ್ ಹರಡುವಿಕೆಯು ಭಾರತದಲ್ಲೂ ವೇಗವಾಗಿ ಹೆಚ್ಚುತ್ತಿದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕ್ಯಾನ್ಸರ್ ತಡವಾಗಿ ಪತ್ತೆಯಾಗುತ್ತದೆ. ಈ ಕಾರಣದಿಂದಾಗಿ ರೋಗವು ತುಂಬಾ ಮಾರಕವಾಗಿರುತ್ತದೆ. ಹೀಗಾಗಿ ರೋಗಲಕ್ಷಣಗಳ ಬಗ್ಗೆ ಸದಾ ಎಚ್ಚರ ವಹಿಸುವುದು ಸೂಕ್ತ.

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸುಮಾರು 20 ರಿಂದ 30 ಪ್ರತಿಶತದಷ್ಟು ಕ್ಯಾನ್ಸರ್ ಪ್ರಕರಣಗಳು ಮೊದಲ ಹಂತದಲ್ಲಿವೆ ಮತ್ತು ಉಳಿದವು ಎರಡು ಮತ್ತು ಮೂರನೇ ಹಂತದಲ್ಲಿವೆ ಎಂದು ಕಂಡುಬರುತ್ತಿದೆ ಎಂದು ಪುಣೆಯ ದೀನನಾಥ ಮಂಗೇಶ್ಕರ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಸ್ಟ್ ಸಲಹೆಗಾರರಾದ ಡಾ. ಚೇತನ್ ದೇಶಮುಖ್ ಹೇಳಿದ್ದಾರೆ.

ಸ್ತನ ಕ್ಯಾನ್ಸರ್ ಅನ್ನು ಮೊದಲ ಅಥವಾ ಎರಡನೇ ಹಂತದಲ್ಲಿಯೇ ಪತ್ತೆ ಮಾಡಿದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿದೆ. ಆದರೆ ಇದರ ಬಗ್ಗೆ ತಿಳಿದುಕೊಳ್ಳುವುದು ನಾವು ಹೇಗೆ ಮುನ್ನೆಚ್ಚರಿಕೆ ವಹಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಕ್ಯಾನ್ಸರ್ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ತಿಳಿದಿದ್ದರೆ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯಬಹುದು.

ಎಚ್ಚರಿಕೆ ಅಗತ್ಯ ಚೆನ್ನೈನ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಲಹೆಗಾರರಾದ ಡಾ.ಅನಿತಾ ರಮೇಶ್ ಈ ಬಗ್ಗೆ ಮಾತನಾಡಿದ್ದು, ಭಾರತದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್​ಗೆ ಪಾಶ್ಚಿಮಾತ್ಯ ಜೀವನಶೈಲಿ ಒಂದು ಪ್ರಮುಖ ಕಾರಣವಾಗಿದೆ. ಮುಂಬರುವ ವರ್ಷಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ನಾವು ಕ್ಯಾನ್ಸರ್​ಗೆ ಗುರಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ, ಆದ್ದರಿಂದ ಸ್ತನ ಕ್ಯಾನ್ಸರ್ ತಪಾಸಣೆ ಉತ್ತಮವಾಗಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದಾರೆ.

ಸ್ತನ ಕ್ಯಾನ್ಸರ್​ನ ಲಕ್ಷಣಗಳು

1. ಸ್ತನದಲ್ಲಿನ ಗಡ್ಡೆಗಳು ಸ್ತನ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ.

2. ಎದೆಯ ಒಂದು ಭಾಗದಲ್ಲಿ ಅಥವಾ ಇಡೀ ಸ್ತನದಲ್ಲಿ ಊತ.

3. ಸ್ತನದಿಂದ ಯಾವುದೇ ರೀತಿಯ ದ್ರವ ಹೊರಬರುತ್ತಿದ್ದರೆ, ಅದು ಸ್ತನ ಕ್ಯಾನ್ಸರ್‌ನ ಲಕ್ಷಣವೂ ಆಗಿರಬಹುದು.

4. ಮೊಲೆತೊಟ್ಟು ಅಥವಾ ಸ್ತನದ ವಿನ್ಯಾಸದಲ್ಲಿ ಬದಲಾವಣೆ ಕೂಡ ಈ ಕ್ಯಾನ್ಸರ್​ನ ಲಕ್ಷಣವಾಗಿದೆ.

ಸ್ತನ ಕ್ಯಾನ್ಸರ್ ತಡೆಗಟ್ಟುವ ವಿಧಾನಗಳು

1. ವ್ಯಾಯಾಮ ಮಾಡಿ ಮತ್ತು ಯೋಗ ಮಾಡಿ. 2. ಹೆಚ್ಚು ಉಪ್ಪನ್ನು ಸೇವಿಸಬೇಡಿ. 3. ಮಾಂಸದ ಅತಿಯಾದ ಸೇವನೆಯನ್ನು ತಪ್ಪಿಸಿ. 4. ಧೂಮಪಾನ ಮಾಡಬೇಡಿ ಮತ್ತು ಔಷಧಗಳನ್ನು ಅತಿಯಾಗಿ ತೆಗೆದುಕೊಳ್ಳಬೇಡಿ. 4. ಜನನ ನಿಯಂತ್ರಣ ಮಾತ್ರೆಗಳನ್ನು ನಿರಂತರವಾಗಿ ಬಳಸುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ.

ಇದನ್ನೂ ಓದಿ: Health Tips: ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ; ನಿರ್ಲಕ್ಷ್ಯ ವಹಿಸದಿರುವುದು ಒಳಿತು ನಿಮ್ಮ ಈ ಕೆಲವು ದಿನನಿತ್ಯದ ಅಭ್ಯಾಸಗಳು ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು! ಎಚ್ಚರ