Benefits Of Drinking Black Coffee
ಅನೇಕರು ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಈ ಒಂದು ಅಭ್ಯಾಸ ಅವರನ್ನು ದಿನವಿಡೀ ಉತ್ಸಾಹಭರಿತರಾಗಿರುವುದಕ್ಕೆ ಸಹಾಯ ಮಾಡುತ್ತದೆ. ಅದರಲ್ಲಿಯೂ ಎಲ್ಲಾ ರೀತಿಯ ಕಾಫಿಗಳಲ್ಲಿ, ಬ್ಲಾಕ್ ಕಾಫಿ (Black Coffee) ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಫೀನ್ ಜೊತೆಗೆ, ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾದ ಅನೇಕ ಪದಾರ್ಥಗಳನ್ನು ಇದು ಒಳಗೊಂಡಿದೆ. ಕೆಲವರು ಬೆಳಗ್ಗಿನ ಸಮಯದಲ್ಲಿ ಕಾಫಿ ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ನೀವು ತಯಾರಿಸುವ ಬ್ಲಾಕ್ ಕಾಫಿಗೆ ಹಾಲು ಸೇರಿಸದೆಯೇ ಕುಡಿಯುವುದು ಒಳ್ಳೆಯದು. ಅದರಲ್ಲಿಯೂ ಬೆಳಗ್ಗಿನ ಸಮಯದಲ್ಲಿ ರೂಢಿಸಿಕೊಂಡಿರುವ ಈ ಅಭ್ಯಾಸ ನಿಜಕ್ಕೂ ಪ್ರಯೋಜನಕಾರಿ. ಹಾಗಾದರೆ ಬ್ಲಾಕ್ ಕಾಫಿ ಯಾರಿಗೆ ಒಳ್ಳೆಯದು, ಇದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಬೆಳಿಗ್ಗೆ ಎದ್ದು ಬ್ಲಾಕ್ ಕಾಫಿ ಕುಡಿಯುವುದರಿಂದ ಯಕೃತ್ತಿನ ಕೊಬ್ಬು ಕಡಿಮೆಯಾಗುತ್ತದೆ ಮತ್ತು ಯಕೃತ್ತಿನ ಕಾರ್ಯವು ಸುಧಾರಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮಾತ್ರವಲ್ಲ, ನೀವು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ, ಪ್ರತಿನಿತ್ಯವೂ ಬ್ಲಾಕ್ ಕಾಫಿ ಕುಡಿಯಲು ಪ್ರಾರಂಭಿಸಬಹುದು. ಅದಕ್ಕೂ ಮೊದಲು ನಿಮ್ಮ ವೈದ್ಯರ ಬಳಿ ನೀವು ಬ್ಲಾಕ್ ಕಾಫಿ ಕುಡಿಯಬಹುದೋ, ಬೇಡವೋ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಾದರೆ ಇದು ಯಾರಿಗೆ ಒಳ್ಳೆಯದು, ಯಾರಿಗಲ್ಲ ಎಂಬುದನ್ನು ತಿಳಿದುಕೊಳ್ಳಿ.
- ಬ್ಲಾಕ್ ಕಾಫಿ ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಾತ್ರವಲ್ಲ ನೀವು ಸೇವಿಸುವ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ ನಿಮಗೆ ಜೀರ್ಣಕ್ರಿಯೆಯ ಸಮಸ್ಯೆಗಳಿದ್ದರೆ, ಹೆಚ್ಚು ಬಾರಿ ಕಾಫಿ ಕುಡಿಯಬಾರದು.
- ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಕಾಫಿ ಕುಡಿಯುವುದರಿಂದ ಕೊಬ್ಬನ್ನು ಕರಗಿಸಬಹುದು ಮತ್ತು ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ. ಹೆಚ್ಚಿನ ಕೆಟ್ಟ ಕೊಲೆಸ್ಟ್ರಾಲ್ ಇರುವವರು ಪ್ರತಿದಿನ ಬೆಳಿಗ್ಗೆ ಬ್ಲಾಕ್ ಕಾಫಿ ಕುಡಿಯುವುದು ಒಳ್ಳೆಯದು.
- ಬ್ಲಾಕ್ ಕಾಫಿ ದೇಹದ ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ, ಹಾಗಾಗಿ ಕ್ಯಾಲೋರಿ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಸುಲಭವಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ, ತೂಕ ಇಳಿಸಿಕೊಳ್ಳಲು, ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಕಾಫಿ ಕುಡಿಯುವುದು ಬಹಳ ಪ್ರಯೋಜನಕಾರಿ.
- ಬ್ಲಾಕ್ ಕಾಫಿ ಕುಡಿಯುವುದರಿಂದ ನರಮಂಡಲವು ಉತ್ತೇಜನಗೊಳ್ಳುತ್ತದೆ. ಇದು ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ನೀವು ದಿನವಿಡೀ ಚೈತನ್ಯಶೀಲರಾಗಿರುತ್ತೀರಿ.
- ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಬ್ಲಾಕ್ ಕಾಫಿ ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ. ಮಾತ್ರವಲ್ಲ ಇದು ಹೃದಯ ನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ.
- ಬ್ಲಾಕ್ ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳಿವೆ. ಇವು ಚರ್ಮವನ್ನು ಆರೋಗ್ಯಕರವಾಗಿಡುತ್ತವೆ ಮತ್ತು ಚರ್ಮ ಸಂಬಂಧಿ ಸಮಸ್ಯೆಗಳು ಬರುವುದನ್ನು ತಡೆಯುತ್ತವೆ.
- ಬ್ಲಾಕ್ ಕಾಫಿ ಕುಡಿಯುವುದರಿಂದ ಮನಸ್ಥಿತಿ ಸುಧಾರಿಸುತ್ತದೆ. ದಿನವಿಡಿ ಉತ್ಸಾಹದಿಂದ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಕಿರಿಕಿರಿ ಮತ್ತು ಆತಂಕದಂತಹ ಸಮಸ್ಯೆಗಳು ಉಂಟಾಗುವುದಿಲ್ಲ.
- ಬ್ಲಾಕ್ ಕಾಫಿ ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ. ಇದು ಕೊಬ್ಬಿನ ಯಕೃತ್ತಿನಂತಹ ಸಮಸ್ಯೆಗಳಿಂದ ರಕ್ಷಿಸುತ್ತದೆ. ಹಾಗಾಗಿ ಬ್ಲಾಕ್ ಕಾಫಿ ಕುಡಿಯುವುದು ಯಕೃತ್ತನ್ನು ಆರೋಗ್ಯಕರವಾಗಿಡಲು ಒಳ್ಳೆಯದು.
- ಬೆಳಿಗ್ಗೆ ಎದ್ದು ಬ್ಲಾಕ್ ಕಾಫಿ ಕುಡಿಯುವುದರಿಂದ ಮೆದುಳಿನ ಕಾರ್ಯ ಸುಧಾರಿಸುತ್ತದೆ. ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ. ಇದು ಬುದ್ಧಿಮಾಂದ್ಯತೆಯನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಾಫಿ ಪ್ರಿಯರಿಗೆ ಬಿಗ್ ಶಾಕ್: ನಾಲಿಗೆ ಮಾತ್ರವಲ್ಲ ಜೇಜೂ ಸುಡಲಿದೆ ನಿಮ್ಮ ಫೆವರೇಟ್ ಪೇಯ
ದಿನಕ್ಕೆ ಎಷ್ಟು ಕಪ್ ಕಾಫಿ ಒಳ್ಳೆಯದು?
ಬ್ಲಾಕ್ ಕಾಫಿ ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ತಡೆಗಟ್ಟುವಲ್ಲಿಯೂ ಸಹಾಯ ಮಾಡುತ್ತವೆ. ಮಾತ್ರವಲ್ಲ ನಾವು ನಂಬಲು ಅಸಾಧ್ಯವಾದ ಪ್ರಯೋಜನಗಳನ್ನು ಹೊಂದಿದೆ. ಆದರೆ ಯಾವುದನ್ನೂ ಕೂಡ ಅತಿಯಾಗಿ ಸೇವನೆ ಮಾಡಬಾರದು. ಅದಕ್ಕಾಗಿಯೇ ತಜ್ಞರು ದಿನಕ್ಕೆ 1 ರಿಂದ 2 ಕಪ್ ಕಾಫಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ ಎನ್ನುತ್ತಾರೆ. ಆದರೆ ಅದಕ್ಕಿಂತ ಹೆಚ್ಚು ಕಾಫಿ ಸೇವನೆ ಒಳ್ಳೆಯದಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ