AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ಪ್ರಿಯರಿಗೆ ಬಿಗ್​​ ಶಾಕ್​: ನಾಲಿಗೆ ಮಾತ್ರವಲ್ಲ ಜೇಜೂ ಸುಡಲಿದೆ ನಿಮ್ಮ ಫೆವರೇಟ್​ ಪೇಯ

ಕಾಫಿ ಪುಡಿ ಬೆಲೆ ಕೆಜಿಗೆ 1000 ರೂ. ಗಡಿ ದಾಟಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಬ್ರೆಜಿಲ್, ವಿಯಟ್ನಾಂನಲ್ಲಿ ಬೆಳೆ ಕುಂಠಿತ, ರಾಜ್ಯದಲ್ಲಿ ಮಳೆಯಿಂದ ಕಾಫಿ ಹೂವು ಉದುರಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದ್ದು, ಕಾಫಿ ದರವೂ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಾಫಿ ಪ್ರಿಯರಿಗೆ ಬಿಗ್​​ ಶಾಕ್​: ನಾಲಿಗೆ ಮಾತ್ರವಲ್ಲ ಜೇಜೂ ಸುಡಲಿದೆ ನಿಮ್ಮ ಫೆವರೇಟ್​ ಪೇಯ
ಕಾಫಿ
Kiran Surya
| Edited By: |

Updated on: Nov 11, 2025 | 8:39 AM

Share

ಬೆಂಗಳೂರು, ನವೆಂಬರ್​ 11: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಚುಮುಚುಮು ಚಳಿಯಲ್ಲಿ ಬೆಳ್ಳಂ ಬೆಳಗ್ಗೆ ಒಂದು ಕಪ್​ ಕಾಫಿ ಇದ್ದರೆ ಬೆಸ್ಟ್​ ಅನಿಸುತ್ತೆ. ಆದರೆ, ಇನ್ಮುಂದೆ ಈ ಬಿಸಿ ಕಾಫಿ ಜನರ ನಾಲಿಗೆಯನ್ನಷ್ಟೇ ಅಲ್ಲ, ಜೇಬನ್ನೂ ಸುಡಲಿದೆ. ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಕಾಫಿಪುಡಿ ಬೆಲೆ ಒಂದು ಕೆಜಿಗೆ ಸಾವಿರ ರೂಪಾಯಿ ಗಡಿಯನ್ನ ಈಗಾಗಲೇ ದಾಟಿದೆ. ದರ 1200 ರೂ,ವರೆಗೂ ಹೋಗುವ ನಿರೀಕ್ಷೆ ಇದೆ. 2022ರಲ್ಲಿ ಕೆಜಿಗೆ‌ 300-400 ರೂಪಾಯಿ ಇದ್ದ ಕಾಫಿಪುಡಿ ಬೆಲೆ ಇದೀಗ ಏಕಾಏಕಿ ಏರಿಕೆಯಾಗಿದೆ. ಕಳೆದ ಒಂದೇ ವರ್ಷದಲ್ಲಿ ಕೆಜಿ ಕಾಫಿಪುಡಿ ಬೆಲೆ 200 ರೂಪಾಯಿವರೆಗೆ ಹೆಚ್ಚಳವಾಗಿದೆ.

ಕಾಫಿಪುಡಿ ಬೆಲೆ ಏರಿಕೆಗೆ ಪ್ರಮುಖ ಕಾರಣ

  • ಕಾಫಿಯನ್ನು ಅತೀ ಹೆಚ್ಚು ಬೆಳೆಯುವ ಬ್ರೆಜಿಲ್,ವಿಯ್ನಟಾಂಗಳಲ್ಲಿ ಕಾಫಿ ಬೆಳೆ ಕುಂಠಿತವಾಗಿರುವುದು
  • ರಾಜ್ಯದಲ್ಲಿ ಅತಿ ಹೆಚ್ಚಿನ ಮಳೆಯಾಗಿ ಕಾಫಿ ಹೂವುಗಳು ಉದುರಿದ್ದು ಕಾಫಿ ಬೀಜಗಳ ಅಭಾವ
  • ಕಾಫಿ ಬೆಳೆಗಾರರು ಎದುರಿಸುತ್ತಿರುವ ಕೆಲಸಗಾರರ ಸಮಸ್ಯೆಯಿಂದ ಇಳುವರಿ ಮೇಲೆ ಪರಿಣಾಮ

ಇದನ್ನೂ ಓದಿ:  ಒಂದು ದಿನವೂ ಮಿಸ್ ಮಾಡ್ದೆ ಬ್ಲಾಕ್ ಕಾಫಿ ಕುಡಿತೀರಾ ಹಾಗಿದ್ರೆ ನೀವು ಈ ಸ್ಟೋರಿ ಓದಲೇಬೇಕು

ಹೋಟೆಲ್​ಗಳಲ್ಲಿ ಕಾಫಿ ದರ ಏರಿಕೆ?

ಕಾಫಿಪುಡಿ ದರ ನಿರಂತರವಾಗಿ ಏರಿಕೆ ಆಗುತ್ತಿರೋದು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು,ಕಾಫಿಪುಡಿ ದರ ಇದೇ ರೀತಿ ಏರಿಕೆ ಆಗುತ್ತಿದ್ದರೆ, ಅನಿವಾರ್ಯವಾಗಿ ಕಾಫಿ ದರವೂ ಹೆಚ್ಚಳವಾಗಲಿದೆ. ಈಗಾಗಲೇ ಹೋಟೆಲ್ ಮತ್ತು ಕ್ಯಾಂಟೀನ್ ಗಳಲ್ಲಿ ಒಂದು ಕಾಫಿ ಬೆಲೆ 12ರಿಂದ 15 ರೂಪಾಯಿ, 15ರಿಂದ 17 ರೂಪಾಯಿ, 18ರಿಂದ 20 ರೂಪಾಯಿ ವರೆಗೆ ಏರಿಕೆ ಆಗಿದೆ. ಮತ್ತೆ ಕಾಫಿ ಪುಡಿ ದರ ಏರಿಕೆ ಆದರೆ 15ರಿಂದ 25 ರೂಪಾಯಿವರೆಗೆ ದರ ಏರಿಕೆ ಆಗುವ ಸಾಧ್ಯತೆಗಳಿವೆ. ಮುಂದಿನ ತಿಂಗಳು ಮತ್ತೆ ಕೆಜಿಗೆ 150-200 ರೂಪಾಯಿ ವರೆಗೆ ಕಾಫಿಪುಡಿ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಫಿಪುಡಿ ಬೆಲೆ ಏರಿಕೆ ಕೇವಲ ವ್ಯಾಪಾರಸ್ಥರಿಗೆ ಮಾತ್ರ ನೋವು ಉಂಟುಮಾಡಿಲ್ಲ, ಕಾಫಿ ಪ್ರಿಯರಿಗೂ ಇದರ ಬಿಸಿ ತಟ್ಟಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಕಾಫಿ ಪ್ರಿಯರು, ಈ ಹಿಂದೆ ಮೂವರು ಹೋಟೆಲ್​ಗೆ ಬಂದ್ರೆ ಮೂರು ಕಾಫಿ ಆರ್ಡರ್ ಮಾಡ್ತಿದ್ವಿ ಆದರೆ ಈಗ ಎರಡು ಕಾಫಿ ತಗೊಂಡು ಶೆರ್​ ಮಾಡಿಕೊಳ್ಳುತ್ತಿದ್ದೀವಿ‌. ಡಿಸೆಂಬರ್​​ನಲ್ಲಿ ಮತ್ತೆ ಕಾಫಿ ದರ ಏರಿಕೆ ಆದರೆ ಒಂದು ಕಾಫಿಯಲ್ಲಿ ಮೂವರು ಕುಡಿಯಬೇಕು ಅಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ