AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namma Metro: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗ ಉದ್ಘಾಟನೆ 2026ಕ್ಕೆ ಮುಂದೂಡಿಕೆ

Bengaluru Metro Pink Line; ಬೆಂಗಳೂರು ನಮ್ಮ ಮೆಟ್ರೋ ಪಿಂಕ್ ಮಾರ್ಗದ ಉದ್ಘಾಟನೆಯು ರೈಲು ರೇಕ್‌ಗಳ ಕೊರತೆಯಿಂದ ಮತ್ತೆ ವಿಳಂಬವಾಗಿದೆ.ಮೊದಲು 2020ಕ್ಕೆ ನಿಗದಿಯಾಗಿದ್ದ ಉದ್ಘಾಟನೆ ಈಗ ಮೇ 2026ಕ್ಕೆ ಮುಂದೂಡಲ್ಪಟ್ಟಿದೆ. BEML ಸಂಸ್ಥೆಯಿಂದ ಮೆಟ್ರೋ ಬೋಗಿಗಳ ಪೂರೈಕೆ ವಿಳಂಬವಾಗಿರುವುದರಿಂದ ಉದ್ಘಾಟನೆಯಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಪಿಂಕ್ ಲೈನ್ ಸೇವೆಗಳಿಗಾಗಿ ಇನ್ನೂ ಹೆಚ್ಚು ಕಾಲ ಕಾಯಬೇಕಾಗಿದೆ.

Namma Metro: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗ ಉದ್ಘಾಟನೆ 2026ಕ್ಕೆ ಮುಂದೂಡಿಕೆ
ಬೆಂಗಳೂರು ಮೆಟ್ರೋ ರೈಲು
Kiran Surya
| Updated By: ಭಾವನಾ ಹೆಗಡೆ|

Updated on:Nov 14, 2025 | 10:29 AM

Share

ಬೆಂಗಳೂರು, ನವೆಂಬರ್ 11: ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಮಾರ್ಗ (Namma Metro Pink Line) ಉದ್ಘಾಟನೆಯು ಮತ್ತೊಮ್ಮೆ ಅಡಚಣೆಗೆ ಗುರಿಯಾಗಿದ್ದು, ಈ ಬಾರಿ ರೈಲು ರೇಕ್‌ಗಳ ಕೊರತೆ ಎದುರಾಗಿದೆ. ಇದರಿಂದಾಗಿ ಮಾರ್ಗದ ಉದ್ಘಾಟನೆಯು ಸುಮಾರು ಐದು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ.

2020 ರಲ್ಲಿ ಉದ್ಘಾಟನೆಗೊಳ್ಳಬೇಕಿದ್ದ 21.25 ಕಿ.ಮೀ. ಕಾಳೇನ ಅಗ್ರಹಾರ-ನಾಗವಾರ ಕಾರಿಡಾರ್ ನಿರಂತರವಾಗಿ ಮುಂದೂಡಲ್ಪಟ್ಟಿತ್ತು. ಮೊದಲು 2025 ರ ಅಂತ್ಯಕ್ಕೆ ಮುಂದೂಡಿಕೆಯಾಗಿದ್ದರೆ, ನಂತರ ಮಾರ್ಚ್ 2026 ಕ್ಕೆ ಮತ್ತು ಈಗ ಮತ್ತೊಮ್ಮೆ ಮೇ 2026 ಕ್ಕೆ  ಮುಂದೂಡಲಾಗಿದೆ. ಎಲವೇಟೆಡ್ ಸ್ಟೇಶನ್​ಗಳು ಸಿದ್ಧವಾಗಿದ್ದರೂ, ಪ್ರಾಯೋಗಿಕ ಚಾಲನೆಗಾಗಿ ಇನ್ನೂ ಯಾವುದೇ ರೈಲು ಸೆಟ್‌ಗಳು ಬಂದಿಲ್ಲ ಎಂದು ತಿಳಿದುಬಂದಿದೆ.

BEML ನಿಂದ ಬರಬೇಕಿದೆ 318 ಬೋಗಿಗಳು

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಗೆ (BMRCL) ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) 318 ಮೆಟ್ರೋ ಬೋಗಿಗಳನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿತ್ತು. ಇವುಗಳಲ್ಲಿ 96 ಬೋಗಿಗಳನ್ನು ಪಿಂಕ್ ಲೈನ್‌ಗೆ ಮತ್ತು ಉಳಿದವುಗಳನ್ನು ಬ್ಲೂ ಲೈನ್‌ಗೆ ಎಂದು ಹೇಳಲಾಗಿತ್ತು. ಆದರೆ BEML ನಿಂದ ಇನ್ನೂ ಯಾವುದೇ ರೈಲುಗಳನ್ನು ಬಂದಿಲ್ಲವೆಂದು ಹೇಳಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಮೊದಲ ಮೂಲಮಾದರಿಯ ರೇಕ್ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ನಂತರ ಪರೀಕ್ಷೆ ಮತ್ತು ಸುರಕ್ಷತಾ ಅನುಮೋದನೆಗಳಿಗೆ ಕನಿಷ್ಠ ಎರಡು ತಿಂಗಳುಗಳು ಹಿಡಿಯಬಹುದು. ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕನಿಷ್ಠ ಮೂರು ರೈಲುಗಳಾದರೂ ಬೇಕಾದ್ದರಿಂದ 2026 ರ ಮಧ್ಯದವರೆಗೂ ಪಿಂಕ್ ಲೈನ್ ರೈಲು ಹಳಿಗಿಳಿಯುವ ಸಾಧ್ಯತೆಯಿಲ್ಲ.

ನಿಧಾನಗತಿಯ ಕಾಮಗಾರಿ

18 ನಿಲ್ದಾಣಗಳನ್ನು ಒಳಗೊಂಡಿರುವ ಪಿಂಕ್ ಲೈನ್‌ನ ಕೆಲಸವು ಎಂಟು ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ವರ್ಷಕ್ಕೆ ಸರಾಸರಿ 2.5 ಕಿ.ಮೀ ಕಾರಿಡಾರ್ ಮಾತ್ರ ನಿರ್ಮಾಣವಾಗುತ್ತಿದ್ದು, ಇದು ಮೆಟ್ರೋ ಯೋಜನೆಗಳಲ್ಲಿ ಅತ್ಯಂತ ನಿಧಾನಗತಿಯ ಯೋಜನೆಯಾಗಿದೆ. ಒಟ್ಟು 21.25 ಕಿ.ಮೀ ಕಾರಿಡಾರ್​ನಲ್ಲಿ, 7.5 ಕಿ.ಮೀ. ಎಲವೇಟೆಡ್ ಮಾರ್ಗವಾಗಿದ್ದರೆ (ಕಲೇನ ಅಗ್ರಹಾರದಿಂದ ತಾವರೆಕೆರೆವರೆಗೆ), 13 ಕಿ.ಮೀ. ಸುರಂಗ ಮಾರ್ಗವಾಗಿದೆ (ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ). ಸುರಂಗ ವಿಭಾಗವು ಡಿಸೆಂಬರ್ 2026 ರ ವೇಳೆಗೆ ತೆರೆಯುವ ನಿರೀಕ್ಷೆಯಿದೆ. ಎಲವೇಟೆಡ್ ಮಾರ್ಗವು ಕಲೇನಾ ಅಗ್ರಹಾರ, ಹುಳಿಮಾವು, ಐಐಎಂ-ಬೆಂಗಳೂರು, ಜೆಪಿ ನಗರ 4 ನೇ ಹಂತ, ಜಯದೇವ ಮತ್ತು ತಾವರೆಕೆರೆ ಮುಂತಾದ ನಿಲ್ದಾಣಗಳನ್ನು ಒಳಗೊಂಡಿರಲಿದೆ.

ಇದನ್ನೂ ಓದಿ ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗವಾಗಲಿದೆ ಪಿಂಕ್ ಲೈನ್, ಬಿಎಂಆರ್​ಸಿಎಲ್ ಬಿಗ್ ಅಪ್​ಡೇಟ್

2026ರಲ್ಲಿ ಪಿಂಕ್ ಲೈನ್ ಮೆಟ್ರೋ ಆರಂಭ

2017 ರಲ್ಲಿ ಸಿಂಪ್ಲೆಕ್ಸ್ ಇನ್ಫ್ರಾಗೆ ನೀಡಲಾದ ಆರಂಭಿಕ ಒಪ್ಪಂದವನ್ನು ಕೇವಲ ಶೇ. 37 ಕೆಲಸ ಪೂರ್ಣಗೊಂಡ ನಂತರ 2021 ರಲ್ಲಿ ರದ್ದುಗೊಳಿಸಲಾಗಿತ್ತು. ನಂತರ ಜಿಆರ್ ಇನ್ಫ್ರಾಪ್ರಾಜೆಕ್ಟ್ಸ್ ಅಧಿಕಾರ ವಹಿಸಿಕೊಂಡು ಉಳಿದ ಭಾಗವನ್ನು ಪರಿಷ್ಕೃತ ವೇಳಾಪಟ್ಟಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿತು. BEML ರೈಲುಗಳನ್ನು ವಿತರಿಸಿದ ನಂತರ ಮೂರು ಅಥವಾ ನಾಲ್ಕು ರೈಲುಗಳೊಂದಿಗೆ ಎಲವೇಟೆಡ್ ಮಾರ್ಗದಲ್ಲಿ ಸೇವೆಗಳು ಪ್ರಾರಂಭವಾಗಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:01 am, Tue, 11 November 25

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ
ಶೂಟಿಂಗ್ ವೇಳೆ ನಿರ್ದೇಶಕ ಸಾವು, ಘಟನೆ ವಿವರಿಸಿದ ನಿರ್ಮಾಪಕ: ವಿಡಿಯೋ