
ಈ ಬಾರಿ ಮಳೆರಾಯನ ಆಗಮನ ಅಂದಾಜಿಗಿಂತಲೂ ಬೇಗ ಆಗಿದೆ. ಅದರಲ್ಲಿಯೂ ಎಡಬಿಡದೆ ಸುರುಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಳೆ ಹೆಚ್ಚಾದ ಹಿನ್ನೆಲೆ, ಸಾಂಕ್ರಾಮಿಕ ರೋಗಗಳ ಸಮಸ್ಯೆ ಉಂಟಾಗುತ್ತಿದ್ದು ಈ ಸಮಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಡೆಂಘಿ (dengue) ಮತ್ತು ಚಿಕನ್ ಗುನ್ಯಾದ ಟೆನ್ಷನ್ ಆರಂಭವಾಗಿದೆ. ಈಗಾಗಲೇ ಕೊರೊನಾ (Corona) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಆದರೆ ಇದನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ ಇವು ಹೆಚ್ಚಳವಾಗುವ ಮೊದಲೇ ನಮ್ಮ ಆರೋಗ್ಯ (health) ಕಾಪಾಡಿಕೊಳ್ಳುವುದು ಜೊತೆಗೆ ಅವು ಬರದಂತೆ ತಡೆಯಲು ಸಿದ್ಧತೆ ಮಾಡಿಕೊಳ್ಳುವುದು ಬಹಳ ಉತ್ತಮ. ಇವುಗಳನ್ನು ಬರದಂತೆ ತಡೆಯಲು ಬೇರೆ ಮುನ್ನೆಚ್ಚರಿಕೆಗಳ ಜೊತೆಗೆ ನಮ್ಮ ಆಹಾರಕ್ರಮವನ್ನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ಇಂತಹ ರೋಗಗಳನ್ನು ಹತೋಟಿಯಲ್ಲಿಡಲು ಸಾಧ್ಯ. ಹಾಗಾದರೆ ನಾವು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಡೆಂಘಿ ಕಾಯಿಲೆಯ ಅಪಾಯ ಜಾಸ್ತಿಯಾಗುತ್ತಿದೆ. ಹೀಗಾಗಿ ಜ್ವರ ಬಂದಾಕ್ಷಣ ಕೂಡಲೇ ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಡೆಂಘಿ ಜ್ವರದ ಬಗ್ಗೆ ಮೊದಲೇ ತಿಳಿದುಕೊಂಡರೆ ವಾಸಿ ಮಾಡಿಕೊಳ್ಳುವುದು ಬಹಳ ಸುಲಭ. ನಿಯಮಿತವಾದ ರಕ್ತ ಪರೀಕ್ಷೆಗಳ ಮೂಲಕ ಜ್ವರದ ಲಕ್ಷಣಗಳನ್ನು ಪತ್ತೆಹಚ್ಚಬಹುದು. ಜೊತೆಗೆ ಡೆಂಘಿ ವೈರಸ್ ವಿರುದ್ಧ ಹೋರಾಡಲು ರೋಗಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅತ್ಯಗತ್ಯ. ರೋಗಿಗೆ ಅಗತ್ಯವಾದ ಪೋಷಕಾಂಶಗಳು ಮತ್ತು ವಿಟಮಿನ್‌ಗಳಿಂದ ತುಂಬಿರುವ ಆಹಾರಗಳನ್ನು ನೀಡುವ ಮೂಲಕ ಈ ರೋಗ ಬರುವುದನ್ನು ತಡೆಯಬಹುದು.
ಇನ್ನು, ಚಿಕನ್ ಗುನ್ಯಾ ಕೂಡ ವೈರಲ್ ಸೋಂಕಾಗಿದ್ದು, ಇದು ಸೊಳ್ಳೆಗಳಿಂದ ಮನುಷ್ಯರಿಗೆ ಹರಡಿ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಜ್ವರ ಮತ್ತು ಮೈ ಕೈ ನೋವು ಚಿಕನ್ ಗುನ್ಯಾದ ಸಾಮಾನ್ಯ ರೋಗ ಲಕ್ಷಣಗಳು. ಇದರ ಜೊತೆಗೆ ರೋಗ ಲಕ್ಷಣಗಳು ವಿಪರೀತ ಗೊಂಡಾಗ ಮುಖದ ಮೇಲೆ ಅಲ್ಲಲ್ಲಿ ಕಲೆಗಳು ಕಂಡು ಬರುವುದು ಮಾತ್ರವಲ್ಲದೆ ತಲೆ ನೋವು, ವಿಪರೀತ ಆಯಾಸ, ವಾಕರಿಕೆ, ವಾಂತಿಯ ಲಕ್ಷಣಗಳು ಸಹ ಗೋಚರಿಸಬಹುದು. ಹಾಗಾಗಿ ಆದಷ್ಟು ಮನೆಯಲ್ಲಿಯೇ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ನಮ್ಮ ಆಹಾರಗಳಲ್ಲಿ ತಕ್ಕ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಚಿಕನ್ ಗುನ್ಯಾ ಸಮಸ್ಯೆಯಿಂದ ಪಾರಾಗಬಹುದು.
ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೋನಾ ಮಧ್ಯೆ ಡೆಂಘಿ, ಚಿಕುನ್ ಗುನ್ಯಾ ಟೆನ್ಷನ್: ಸೈಲೆಂಟ್ ಆಗಿ ಹೆಚ್ಚಳವಾಗುತ್ತಿವೆ ಪ್ರಕರಣಗಳು
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Fri, 30 May 25