AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಎದ್ದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ! ಇವೇ ಆರೋಗ್ಯ ಹಾಳು ಮಾಡುತ್ತವೆ

ಬೆಳಗ್ಗಿನ ಅಭ್ಯಾಸಗಳು ಆರೋಗ್ಯಕರವಾಗಿದ್ದಾಗ ಮಾತ್ರ ನಮ್ಮ ದೇಹ ಮತ್ತು ಮನಸ್ಥಿತಿ ಸರಿಯಾಗಿರುತ್ತದೆ. ಯೋಗ ತರಬೇತಿ ನೀಡುವ ಮನೀಷಾ ಯಾದವ್ ಬೆಳಗ್ಗೆ ಎದ್ದ ತಕ್ಷಣ ಯಾವ ಕೆಲಸಗಳನ್ನು ಮಾಡಬಾರದು, ಅವುಗಳಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ತೊಂದರೆಗಳಾಗುತ್ತವೆ ಎಂಬುದರ ಬಗ್ಗೆ ಇನ್ಸ್ಟಾದಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು, ಬೆಳಿಗ್ಗೆ ಎದ್ದು ಅನುಸರಿಸುವ ಕೆಲವು ಅನಾರೋಗ್ಯಕರ ಅಭ್ಯಾಸಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇವು ನಿಮ್ಮ ದಿನವನ್ನು ಮಾತ್ರವಲ್ಲ ಇಡೀ ಜೀವನಕ್ಕೆ ತೊಂದರೆ ತರಬಹುದು ಎಂದು ಹೇಳಿದ್ದಾರೆ. ಹಾಗಾದರೆ ಆ ಚಟುವಟಿಕೆಗಳು ಯಾವವು ಮತ್ತು ಅವು ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ! ಇವೇ ಆರೋಗ್ಯ ಹಾಳು ಮಾಡುತ್ತವೆ
Break Free From Toxic Morning Habits
ಪ್ರೀತಿ ಭಟ್​, ಗುಣವಂತೆ
|

Updated on: Oct 25, 2025 | 6:13 PM

Share

ಬೆಳಗ್ಗಿನ ದಿನಚರಿ ಯಾವಾಗಲೂ ಆರೋಗ್ಯಕರವಾಗಿರಬೇಕು ಎಂಬುದು ಆರೋಗ್ಯ ತಜ್ಞರ ವಾದ. ಆದರೆ ಇದನ್ನು ಎಲ್ಲರೂ ಪಾಲಿಸುವುದಿಲ್ಲ. ಹಾಗಾಗಿ ಒಬ್ಬೊಬ್ಬರ ದಿನಚರಿ ಒಂದೊಂದು ರೀತಿಯಾಗಿರುತ್ತದೆ. ಆದರೆ ನೀವು ಬೆಳಗ್ಗಿನ ಸಮಯದಲ್ಲಿ ಮಾಡುವ ಕೆಲಸಗಳು ಬಹಳ ಮುಖ್ಯವಾಗುತ್ತದೆ. ಆದರೆ ನಮ್ಮಲ್ಲಿ ಅನೇಕರು, ಎಚ್ಚರವಾಗಿ ಕಣ್ಣುಬಿಟ್ಟ ತಕ್ಷಣ ಫೋನ್‌ ನೋಡುತ್ತಾರೆ, ಎದ್ದು ಬಂದು ಚಹಾ ಅಥವಾ ಕಾಫಿ ಕುಡಿಯುತ್ತಾರೆ ಅಥವಾ ಇನ್ನೇನಾದರೂ ಮಾಡುತ್ತಾರೆ. ಇವೆಲ್ಲವೂ ಒಂದು ರೀತಿಯ ಸಂತೋಷ ಕೊಡಬಹುದು. ಆದರೆ ದೀರ್ಘಾವಧಿಯಲ್ಲಿ, ಈ ರೀತಿಯ ಅಭ್ಯಾಸಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಯೋಗ ತರಬೇತಿ ನೀಡುವ ಮನೀಷಾ ಯಾದವ್ (wellnesswithmanisha) ಎಚ್ಚರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ವೀಡಿಯೊ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವರು ಹೇಳುವ ಪ್ರಕಾರ, ಬೆಳಿಗ್ಗೆ ಎದ್ದು ಅನುಸರಿಸುವ ಕೆಲವು ಅನಾರೋಗ್ಯಕರ ಅಭ್ಯಾಸಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇವು ನಿಮ್ಮ ದಿನವನ್ನು ಮಾತ್ರವಲ್ಲ ಇಡೀ ಜೀವನಕ್ಕೆ ತೊಂದರೆ ತರಬಹುದು ಎಂದು ಹೇಳಿದ್ದಾರೆ. ಹಾಗಾದರೆ ಆ ಚಟುವಟಿಕೆಗಳು ಯಾವುವು ಮತ್ತು ಅವು ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀರು ಕುಡಿಯದಿರುವುದು

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಬಹಳ ಮುಖ್ಯ. ಇದು ಆಯಾಸ, ಆಲಸ್ಯ, ತಲೆನೋವು, ಮಾನಸಿಕ ಸಮಸ್ಯೆಗಳು, ಬಾಯಿಯ ದುರ್ವಾಸನೆ, ಒಣ ಚರ್ಮ, ದುರ್ಬಲಗೊಂಡ ರೋಗನಿರೋಧಕ ಶಕ್ತಿ, ಮಲಬದ್ಧತೆ ಮತ್ತು ದೇಹದ ನೋವು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಎಲ್ಲಾ ಸಮಸ್ಯೆಗಳು ನಿರ್ಜಲೀಕರಣದಿಂದ ಉಂಟಾಗುತ್ತವೆ. ಆದ್ದರಿಂದ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ಬೆಳಿಗ್ಗೆ ಎರಡು ಗ್ಲಾಸ್ ನೀರು ಕುಡಿಯುವುದರಿಂದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.

ಫೋನ್ ನೋಡುವುದು

ಅನೇಕರು ಎಚ್ಚರವಾದ ತಕ್ಷಣ ತಮ್ಮ ಫೋನ್‌ಗಳನ್ನು ಪರಿಶೀಲಿಸುತ್ತಾರೆ. ಸಾಮಾನ್ಯವಾಗಿ ನಿದ್ದೆಯಿಂದ ಎಚ್ಚರವಾದಾಗ ಮೆದುಳು ಸ್ವಲ್ಪ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಆ ಸಮಯದಲ್ಲಿ ನೀವು ನಿಮ್ಮ ಫೋನ್ ಅನ್ನು ನೋಡುವುದರಿಂದ ಅದು ನಿಮ್ಮ ಮೆದುಳಿಗೆ ಒಂದೇ ಬಾರಿಗೆ ಆಘಾತ ನೀಡುತ್ತದೆ. ಮಾತ್ರವಲ್ಲ ಬೆಳಿಗ್ಗೆ ನಿಮಗೆ ಬೇಸರ ನೀಡುವ ಅಥವಾ ಆಘಾತ ಉಂಟುಮಾಡುವ ಸುದ್ದಿ, ಸಂದೇಶಗಳು ಅಥವಾ ಇಮೇಲ್‌ಗಳನ್ನು ನೋಡುವುದು ಕೂಡ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಎಲ್ಲಾ ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಎಚ್ಚರವಾದ ನಂತರ ಕನಿಷ್ಠ ಒಂದು ಗಂಟೆ ಅಥವಾ ಒಂದೂವರೆ ಗಂಟೆಯಾದರೂ ನಿಮ್ಮ ಫೋನ್ ನೋಡುವುದನ್ನು ಬಿಟ್ಟು ಬೇರೆ ಕೆಲಸಗಳ ಬಗ್ಗೆ ಗಮನ ಕೊಡಿ.

ಇದನ್ನೂ ಓದಿ: ನಿಮ್ಮ ಬೆಳಗಿನ ದಿನಚರಿ ಹೀಗಿದ್ದರೆ ಒತ್ತಡದ ಕಡಿಮೆಯಾಗಿ ಮನಸ್ಸಿಗೆ ಶಾಂತಿ ಸಿಗೋದಂತೂ ಗ್ಯಾರಂಟಿ

ಚಹಾ, ಕಾಫಿ ಕುಡಿಯುವುದು

ಇದು ಅನೇಕರಿಗೆ ಇಷ್ಟವಾಗುವ ಅಭ್ಯಾಸ. ಬೆಳಿಗ್ಗೆ ಬಿಸಿ ಬಿಸಿಯಾಗಿ ಹಬೆಯಾಡುವ ಚಹಾ ಅಥವಾ ಕಾಫಿ ಕುಡಿಯುವುದರಿಂದ ನಿರಾಳವಾದ ಭಾವನೆ ಸಿಗುತ್ತದೆ. ಆದರೆ ಇದು ಹೀಗೆಯೇ ಮುಂದುವರಿದರೆ, ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಹೌದು. ಚಹಾ ಮತ್ತು ಕಾಫಿಯಲ್ಲಿರುವ ಗುಣಲಕ್ಷಣಗಳು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತವೆ. ಇದು ನಿಯಮಿತವಾಗಿ ಮುಂದುವರಿದರೆ, ಅದು ಇಡೀ ಜೀರ್ಣಾಂಗ ವ್ಯವಸ್ಥೆಗೆ ಹೊಡೆತ ಕೊಡುತ್ತದೆ. ಆದ್ದರಿಂದ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಸೇವನೆಯ ಬದಲಿಗೆ, ಬೆಚ್ಚಗಿನ ನೀರು, ಗಿಡಮೂಲಿಕೆ ಚಹಾ ಅಥವಾ ನಿಂಬೆ ರಸದೊಂದಿಗೆ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ವ್ಯಾಯಾಮ ಮಾಡದಿರುವುದು

ಅನೇಕರು ವ್ಯಾಯಾಮವನ್ನು ಎಂದರೆ ಒಂದು ರೀತಿಯ ಶಿಕ್ಷೆ ಎಂದು ಭಾವಿಸಿದ್ದಾರೆ. ಅದಕ್ಕಾಗಿಯೇ ಅಂತವರು ವ್ಯಾಯಾಮ ಮಾಡುವ ಗೋಜಿಗೆ ಹೋಗುವುದಿಲ್ಲ. ಇದು ದೇಹವನ್ನು ಬಿಗಿಗೊಳಿಸುತ್ತದೆ ಮಾತ್ರವಲ್ಲ ಹಿಗ್ಗಿಸುವಿಕೆ ಇಲ್ಲದ ಕಾರಣ, ಸ್ನಾಯು ನೋವು ಮತ್ತು ಕೀಲು ನೋವು ಬರಲು ಪ್ರಾರಂಭಿಸುತ್ತದೆ. ಅಲ್ಲದೆ, ಆಲಸ್ಯ ಹೆಚ್ಚಾಗುತ್ತದೆ. ಇವೆಲ್ಲವೂ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಇದರ ಬದಲು, ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಮಾಡಲು ಪ್ರಯತ್ನಿಸಿ. ಯೋಗ, ಹಿಗ್ಗಿಸುವಿಕೆ, ನೃತ್ಯ, ಈಜು ಅಥವಾ ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನೀವು ಆನಂದಿಸುವ ಯಾವುದಾದರೂ ಆರೋಗ್ಯಕರ ಚಟುವಟಿಕೆಗಳನ್ನು ಮಾಡಿ.

ನಿಯಮಿತವಾಗಿ ಮಲವಿಸರ್ಜನೆ ಮಾಡದಿರುವುದು

ಬೆಳಿಗ್ಗೆ ಮಲವಿಸರ್ಜನೆ ಸರಾಗವಾಗಿ ನಡೆದಾಗ, ದೇಹ, ಹೊಟ್ಟೆ ಎರಡು ಕೂಡ ಹಗುರವಾಗಿರುತ್ತದೆ. ಆದರೆ ಕೆಲವರಿಗೆ, ಇದು ನಿಯಮಿತವಾಗಿ ಆಗುವುದಿಲ್ಲ. ಎದ್ದ ತಕ್ಷಣ ಅಲ್ಲದಿದ್ದರೂ ಕೂಡ, ಎದ್ದ ಕನಿಷ್ಠ 30 ನಿಮಿಷಗಳಲ್ಲಿ ಹೊಟ್ಟೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ, ಚಯಾಪಚಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಆರೋಗ್ಯ ಹಾಳಾಗುವುದನ್ನು ತಪ್ಪಿಸುತ್ತದೆ.

ನೀವು ಕೂಡ ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ತಕ್ಷಣವೇ ಅವುಗಳಿಗೆ ಗುಡ್ ಬೈ ಹೇಳಿ. ಇಲ್ಲದಿದ್ದರೆ, ನೀವೇ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಂತಾಗುತ್ತದೆ. ಆದ್ದರಿಂದ, ಬಹಳ ಜಾಗರೂಕರಾಗಿರಿ. ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ ಎಂಬುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ