ನಿಮ್ಮ ಕೋಣೆಯಲ್ಲಿ ಮೇಣದಬತ್ತಿ ಬಳಸುವಾಗ ಎಚ್ಚರ; ಕ್ಯಾಂಡಲ್ ಪ್ರಿಯರಿಗೆ ಎಚ್ಚರಿಕೆಯ ಸುದ್ದಿ ಇಲ್ಲಿದೆ

ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದು ಬಹುತೇಕರಿಗೆ ಬಹಳ ಇಷ್ಟದ ಸಂಗತಿ. ಜೊತೆಯಲ್ಲಿ ಸಣ್ಣದಾಗಿ ಮ್ಯೂಸಿಕ್ ಕೇಳಿಬರುತ್ತಿದ್ದರೆ ಆ ಜಾಗ ರೊಮ್ಯಾಂಟಿಕ್ ಆಗಿ ಪರಿವರ್ತನೆಯಾಗಿಬಿಡುತ್ತದೆ. ಆದರೆ, ಇದರಿಂದ ಆರೋಗ್ಯದ ಮೇಲೆ ಏನೆಲ್ಲ ಕೆಟ್ಟ ಪರಿಣಾಮಗಳಾಗುತ್ತವೆ ಗೊತ್ತಾ?

ನಿಮ್ಮ ಕೋಣೆಯಲ್ಲಿ ಮೇಣದಬತ್ತಿ ಬಳಸುವಾಗ ಎಚ್ಚರ; ಕ್ಯಾಂಡಲ್ ಪ್ರಿಯರಿಗೆ ಎಚ್ಚರಿಕೆಯ ಸುದ್ದಿ ಇಲ್ಲಿದೆ
ಕ್ಯಾಂಡಲ್
Follow us
ಸುಷ್ಮಾ ಚಕ್ರೆ
| Updated By: Digi Tech Desk

Updated on: Sep 01, 2023 | 2:42 PM

ಕ್ಯಾಂಡಲ್ ಇಷ್ಟಪಡದ ಜನರೇ ಕಡಿಮೆ. ಕೇವಲ ಬೆಳಕಿನ ಉದ್ದೇಶದಿಂದ ಮಾತ್ರವಲ್ಲದೆ ಪರಿಮಳ, ರೂಮಿನಲ್ಲಿ ಆಹ್ಲಾದತೆಯನ್ನು ಹೆಚ್ಚಿಸಲು, ಅಲಂಕಾರದಲ್ಲಿ ಕೂಡ ಕ್ಯಾಂಡಲ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಪರಿಮಳಭರಿತವಾದ ಕ್ಯಾಂಡಲ್ ಅನ್ನು ನಿಮ್ಮ ಹಾಲ್​ನಲ್ಲೋ, ಬೆಡ್​ ರೂಂನಲ್ಲೋ ಹಚ್ಚಿಟ್ಟರೆ ಅದು ನಿಮ್ಮ ಮೂಡ್ ಅನ್ನೇ ಬದಲಿಸಬಲ್ಲದು. ಆದರೆ, ಈ ಕ್ಯಾಂಡಲ್​​ನಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೂ ಉಂಟಾಗುತ್ತದೆ ಎಂಬುದು ನಿಮಗೆ ಗೊತ್ತಾ?

ಟೇಬಲ್​ ಮೇಲೊಂದು ದೊಡ್ಡದಾದ ಕ್ಯಾಂಡಲ್ ಇಟ್ಟು, ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದು ಬಹುತೇಕರಿಗೆ ಬಹಳ ಇಷ್ಟದ ಸಂಗತಿ. ಜೊತೆಯಲ್ಲಿ ಸಣ್ಣದಾಗಿ ಮ್ಯೂಸಿಕ್ ಕೇಳಿಬರುತ್ತಿದ್ದರೆ ಆ ಜಾಗ ರೊಮ್ಯಾಂಟಿಕ್ ಆಗಿ ಪರಿವರ್ತನೆಯಾಗಿಬಿಡುತ್ತದೆ. ಆದರೆ, ಆರ್ಹಸ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ಇಲಾಖೆಯ ಹೊಸ ಅಧ್ಯಯನವು ಕ್ಯಾಂಡಲ್ ಪ್ರಿಯರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಪರಿಮಳಭರಿತವಾದ ಕ್ಯಾಂಡಲ್​​ ಬಳಸುವವರು ಆ ಗಾಳಿಯನ್ನು ಉಸಿರಾಡುವಾಗ ಎಚ್ಚರದಿಂದಿರಬೇಕು. ಏಕೆಂದರೆ, ರೂಮಿನಲ್ಲಿ ಕ್ಯಾಂಡಲ್​ ಹೊತ್ತಿಸಿಟ್ಟರೆ ಆ ಹೊಗೆಯನ್ನು ಉಸಿರಾಡುವವರ ಆರೋಗ್ಯ ಮತ್ತು ಮೂಡ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆ ಇನ್ನಷ್ಟು ಸರಳ; 7 ನಿಮಿಷಗಳಲ್ಲಿ ನೀಡಬಹುದಾದ ವಿಶ್ವದ ಮೊದಲ ಇಂಜೆಕ್ಷನ್ ಅಭಿವೃದ್ಧಿಪಡಿಸಿದ ಬ್ರಿಟನ್ 

ಈ ಅಧ್ಯಯನದ ಸಹ ಲೇಖಕ ಕರಿನ್ ರೋಸೆನ್‌ಕಿಲ್ಡೆ ಲಾರ್ಸೆನ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ಅಧ್ಯಯನವು ಮೇಣದಬತ್ತಿಗಳನ್ನು ಸುಡುವ ಹೊಗೆಯಿಂದ ಉಂಟಾಗುವ ಒಳಾಂಗಣ ವಾಯು ಮಾಲಿನ್ಯವು ಯುವಕ-ಯುವತಿಯರಲ್ಲಿ ಕಿರಿಕಿರಿ ಮತ್ತು ಉರಿಯೂತದಂತಹ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ. ಅಲ್ಲದೆ, ಇದರಿಂದ ಅಸ್ತಮಾ ಮತ್ತು ಉಸಿರಾಟದ ತೊಂದರೆ ಎದುರಿಸುತ್ತಿರುವವರ ಆರೋಗ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ಅಡುಗೆ ಮಾಡುವಾಗ ಸ್ಟವ್​​ನಿಂದ ಹೊರಹೋಗುವ ಹೊಗೆಯಿಂದ ಅಲ್ಟ್ರಾಫೈನ್ ಕಣಗಳು ಉತ್ಪತ್ತಿಯಾಗುತ್ತವೆ. ಕ್ಯಾಂಡಲ್​ನಿಂದಲೂ ಈ ಕಣಗಳು ಉತ್ಪತ್ತಿಯಾಗುತ್ತವೆ. ಅದನ್ನೇ ನಾವು ಉಸಿರಾಡುತ್ತೇವೆ. ಈ ಕಣಗಳು ಆರೋಗ್ಯಕ್ಕೆ ಹಾನಿಕಾರಕವೆಂದು ಹಿಂದಿನ ಅಧ್ಯಯನಗಳು ತೋರಿಸಿಕೊಟ್ಟಿವೆ. 18 ಮತ್ತು 25ರ ನಡುವಿನ ವಯೋಮಾನದವರು ಕೊಂಚ ಮಟ್ಟಿಗಾದರೂ ಅಸ್ತಮಾದ ಗುಣಲಕ್ಷಣಗಳನ್ನು ಹೊಂದಿದ್ದರೆ ಅವರ ಮೇಲೆ ಇದರಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಕರಿನ್ ರೋಸೆನ್‌ಕಿಲ್ಡೆ ಲಾರ್ಸೆನ್ ಹೇಳಿದ್ದಾರೆ.

ಇದನ್ನೂ ಓದಿ: Smelly Armpits: ನಿಮ್ಮ ಈ ಆಹಾರಕ್ರಮಗಳು ಕೂಡ ಕಂಕುಳಲ್ಲಿನ ಕೆಟ್ಟ ವಾಸನೆಗೆ ಕಾರಣವಾಗಬಹುದು! 

ಹೀಗಾಗಿ, ಉಸಿರಾಟದ ತೊಂದರೆ ಅಥವಾ ಅಸ್ತಮಾದ ಲಕ್ಷಣಗಳಿರುವ ಯುವಜನರು ಕ್ಯಾಂಡಲ್ ಬಳಸುವಾಗ ಮತ್ತು ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುವಾಗ ಎಚ್ಚರ ವಹಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್