ಕ್ಯಾಂಡಲ್ ನಿಮ್ಮ ಮನೆಯನ್ನು ಬೆಳಗಿಸುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ
ಮೇಣದ ದೀಪದ ಪ್ರಕಾಶ ನಿಮ್ಮ ಕಣ್ಣಿಗೆ ಕುಕ್ಕುವುದಿಲ್ಲ. ಇದಲ್ಲದೇ ಇದರ ಸುಗಂಧ ನಿಮ್ಮ ಮನಸ್ಸಿಗೆ ಆರಾಮವನ್ನು ನೀಡುತ್ತದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ತಡೆಯುವಲ್ಲಿ ಸಹಾಯಕವಾಗಿದೆ.
ಪರಿಮಳಯುಕ್ತ ಮೇಣದಬತ್ತಿ(Scented Candles) ಗಳನ್ನು ಬೆಳಗಿಸಿದಾಗ ಅದರಿಂದ ಹೊರಬರುವ ಸುಗಂಧವು ನಿಮ್ಮನ್ನು ಒತ್ತಡಗಳಿಂದ ವಿರಾಮವನ್ನು ನೀಡುತ್ತದೆ. ಜೊತೆಗೆ ಮೆದುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೇ ನಿಮ್ಮ ಮನೆಯಲ್ಲಿ ಪರಿಮಳಯುಕ್ತವಾಗಿರಿಸುತ್ತದೆ. ತಾರಾ ಕ್ಯಾಂಡಲ್ಸ್ ಕಂಪೆನಿಯ ನಿರ್ದೇಶಕರಾದ ಶ್ರೀ ಉಮೇಶ್ ಸಿಂಗ್ ಪರಿಮಳಯುಕ್ತ ಮೇಣದಬತ್ತಿಗಳು ನಿಮ್ಮ ಆರೋಗ್ಯದ ಮೇಲೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಪರಿಮಳಯುಕ್ತ ಮೇಣದಬತ್ತಿಗಳ ಆರೋಗ್ಯ ಪ್ರಯೋಜನಗಳು:
ಉತ್ತಮ ನಿದ್ದೆ:
ನೀವು ಮಲಗುವ ಸಮಯದಲ್ಲಿ ವಿದ್ಯುತ್ತ್ ದೀಪಗಳಿಗಿಂತ ಮೇಣದ ದೀಪವನ್ನು ಹಚ್ಚಿರಿ ಎಂದು ಸಲಹೆ ನೀಡುತ್ತಾರೆ. ಈ ಮೇಣದ ದೀಪದ ಪ್ರಕಾಶ ನಿಮ್ಮ ಕಣ್ಣಿಗೆ ಕುಕ್ಕುವುದಿಲ್ಲ. ಇದಲ್ಲದೇ ಇದರ ಸುಗಂಧ ನಿಮ್ಮ ಮನಸ್ಸಿಗೆ ಆರಾಮವನ್ನು ನೀಡುತ್ತದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ತಡೆಯುವಲ್ಲಿ ಸಹಾಯಕವಾಗಿದೆ.
ಸ್ಮರಣಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ:
ನಿಮ್ಮ ಮೆದುಳಿನ ಪ್ರಮುಖ ಕಾರ್ಯಗಳಲ್ಲಿ ಒಂದು ಸ್ಮರಣೆಯಾಗಿದೆ. ನಿಮ್ಮ ಸ್ಮರಣೆಯು ಇತ್ತೀಚೆಗೆ ಸ್ವಲ್ಪ ಮಬ್ಬು ಅಥವಾ ಗೊಂದಲಮಯವಾಗಿದ್ದರೆ ಅಥವಾ ನೀವು ವಿಷಯಗಳನ್ನು ನೆನಪಿಸಿಕೊಳ್ಳುವಲ್ಲಿ ತೊಂದರೆ ಹೊಂದಿದ್ದರೆ ನೀವು ವಿದ್ಯುತ್ ದೀಪಗಳಿಂದ ದೂರವಿರಿ. ಜೊತೆಗೆ ಮನೆಯಲ್ಲಿ ಮೇಣದಬತ್ತಿಗಳನ್ನು ಉರಿಸಿ. ಇದು ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಈ ಐದು ಲಕ್ಷಣಗಳು ನಿಮ್ಮನ್ನು ಕಾಡುತ್ತಿದ್ದರೆ ಬುದ್ಧಿಮಾಂದ್ಯತೆ ಇರಬಹುದು.. ಇರಲಿ ಎಚ್ಚರ
ಒತ್ತಡ ನಿವಾರಕ:
ಕೆಲವು ಮೇಣದಬತ್ತಿಯ ಪರಿಮಳಗಳು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಈ ಒತ್ತಡದ ಜೀವನಶೈಲಿಯಿಂದಾಗಿ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಮೇಣದಬತ್ತಿಗಳು ಸಹಾಯಕವಾಗಿದೆ.
ಆಧ್ಯಾತ್ಮಿಕ ಆರೋಗ್ಯ:
ನಿಮ್ಮ ದೈನಂದಿನ ದಿನಚರಿಯಲ್ಲಿ ಯೋಗ ಧ್ಯಾನವನ್ನು ಮಾಡುವ ಆಭ್ಯಾಸ ನಿಮಗಿದ್ದರೆ ಮೇಣದಬತ್ತಿಗಳಿಂದ ನಿಮ್ಮ ಕೋಣೆಯನ್ನು ಬೆಳಗಿಸಿ ಎಂದು ಉಮೇಶ್ ಸಿಂಗ್ ಸಲಹೆ ನೀಡುತ್ತಾರೆ. ಮಲ್ಲಿಗೆ, ಲ್ಯಾವೆಂಡರ್ ಮತ್ತು ಪುದೀನಾ, ಶ್ರೀಗಂಧದ ಪರಿಮಳವನ್ನು ಸೂಸುವ ಮೇಣದಬತ್ತಿಯನ್ನು ಆಯ್ಕೆ ಮಾಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: