ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವು ಹೆಚ್ಚಾಗಿದ್ದರೆ ಈ ಕೆಳಗಿನ ರೋಗಲಕ್ಷಣಗಳು ಕಂಡುಬರಬಹುದು

ಸಂಶೋಧನೆಯೊಂದರ ಪ್ರಕಾರ, ಹೆಚ್ಚಿನ ಕ್ಯಾಲ್ಸಿಯಂ ಮಟ್ಟವು (ಹೈಪರ್ಕಾಲ್ಸೆಮಿಯಾ) ತಲೆನೋವಿನಿಂದ ಹಿಡಿದು ಮಾರಣಾಂತಿಕ ಹೃದಯ ಸಮಸ್ಯೆಗಳವರೆಗೆ ‘ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಿಳಿದುಬಂದಿದೆ.

ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವು ಹೆಚ್ಚಾಗಿದ್ದರೆ ಈ ಕೆಳಗಿನ ರೋಗಲಕ್ಷಣಗಳು ಕಂಡುಬರಬಹುದು
Calcium
Follow us
ಅಕ್ಷತಾ ವರ್ಕಾಡಿ
|

Updated on: Jul 09, 2023 | 5:07 PM

ಕ್ಯಾಲ್ಸಿಯಂ ಮಾನವ ದೇಹದಲ್ಲಿ ಅತ್ಯಂತ ಹೇರಳವಾಗಿರುವ ಖನಿಜವಾಗಿದೆ. ಬಲವಾದ ಮೂಳೆಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ನಿಮಗೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅಗತ್ಯವಿರುತ್ತದೆ ಮತ್ತು ದೇಹದ ಕ್ಯಾಲ್ಸಿಯಂನ 99 ಪ್ರತಿಶತವು ಮೂಳೆಗಳು ಮತ್ತು ಹಲ್ಲುಗಳಲ್ಲಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಕ್ಯಾಲ್ಸಿಯಂ ಸ್ನಾಯುಗಳ ಚಲನೆ ಮತ್ತು ಹೃದಯರಕ್ತನಾಳದ ಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮೆದುಳು ಮತ್ತು ದೇಹದ ಇತರ ಭಾಗಗಳ ನಡುವೆ ಆರೋಗ್ಯಕರ ಕೆಲಸ ನಿರ್ವಹಿಸುವಲ್ಲಿ ಖನಿಜವು ಪ್ರಮುಖ ಪಾತ್ರ ವಹಿಸುತ್ತದೆ. ಈ ಖನಿಜವು ಅನೇಕ ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ ಮತ್ತು ಮಾರುಕಟ್ಟೆಯಲ್ಲಿ ವಿವಿಧ ಪೂರಕಗಳು ಲಭ್ಯವಿದೆ.

ದೇಹಕ್ಕೆ ಕ್ಯಾಲ್ಸಿಯಂ ಏಕೆ ಬೇಕು?

  • ಮಾನವ ದೇಹದಲ್ಲಿನ ಸುಮಾರು ಶೇಕಡಾ 99ರಷ್ಟು ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳಲ್ಲಿದೆ. ಮೂಳೆಯ ಬೆಳವಣಿಗೆ ಮತ್ತು ನಿರ್ವಹಣೆಗೆ ಕ್ಯಾಲ್ಸಿಯಂ ಅತ್ಯಗತ್ಯ.
  • ಕ್ಯಾಲ್ಸಿಯಂ ಸ್ನಾಯುವಿನ ಸಂಕೋಚನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ರಕ್ತ ಹೆಪ್ಪುಗಟ್ಟುವಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ.
  • ಕ್ಯಾಲ್ಸಿಯಂ ಇಲ್ಲದೆ, ಕೆಲವು ಪ್ರಮುಖ ಕಿಣ್ವಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳು:

  • ಮೊಸರು, ಹಾಲು
  • ಸಾಲ್ಮನ್ ಮೀನು
  • ಹಸಿರು ತರಕಾರಿಗಳು
  • ಹಣ್ಣಿನ ರಸ
  • ಬಾದಾಮಿ, ಎಳ್ಳು ಮುಂತಾದ ಧಾನ್ಯಗಳು

ಹೆಚ್ಚಿನ ಕ್ಯಾಲ್ಸಿಯಂ ಮಟ್ಟಗಳ ಚಿಹ್ನೆಗಳು:

ಅತಿಯಾದ ಕ್ಯಾಲ್ಸಿಯಂ ಒಳ್ಳೆಯದಕ್ಕಿಂತ ದೇಹಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಹೆಚ್ಚಿನ ಕ್ಯಾಲ್ಸಿಯಂ ಮಟ್ಟವು (ಹೈಪರ್ಕಾಲ್ಸೆಮಿಯಾ) ತಲೆನೋವಿನಿಂದ ಮಾರಣಾಂತಿಕ ಹೃದಯ ಸಮಸ್ಯೆಗಳವರೆಗೆ ತೀವ್ರತೆಯ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಯಾವಾಗಲೂ ನಿದ್ರೆಯ ಮಂಪರಿನಲ್ಲಿರುತ್ತೀರಾ? ಇದಕ್ಕೆ ಕಾರಣವೇನು?

ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವು ಹೆಚ್ಚಾಗಿದ್ದರೆ ಈ ಕೆಳಗಿನ ರೋಗಲಕ್ಷಣಗಳು ಕಂಡುಬರಬಹುದು:

  • ಮೂಳೆ ನೋವು, ತಲೆನೋವು, ಆಯಾಸ ಮತ್ತು ಆಲಸ್ಯ
  • ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಬಾಯಾರಿಕೆ.
  • ವಾಕರಿಕೆ, ವಾಂತಿ, ಮಲಬದ್ಧತೆ ಮತ್ತು ಹಸಿವಿನ ಕೊರತೆ.
  • ಸ್ನಾಯು ನೋವು, ದೌರ್ಬಲ್ಯ ಅಥವಾ ಸೆಳೆತ.
  • ಮೂತ್ರಪಿಂಡದ ಕಲ್ಲುಗಳು, ಮೂತ್ರಪಿಂಡ ವೈಫಲ್ಯ.
  • ಗೊಂದಲ, ಕಿರಿಕಿರಿ ಮತ್ತು ಖಿನ್ನತೆ.

ಆರೋಗ್ಯಕರ ದೇಹಕ್ಕೆ ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಅಗತ್ಯ:

ಆಫೀಸ್​​ ಆಫ್ ಡಯೆಟರಿ ಸಪ್ಲಿಮೆಂಟ್ಸ್ (ODS) ಪ್ರಕಾರ, ವಯಸ್ಸಿನ ಆಧಾರದ ಮೇಲೆ ಕ್ಯಾಲ್ಸಿಯಂ ಪ್ರಮಾಣವನ್ನು ಸೂಚಿಸಿದ್ದಾರೆ.

  • 0-6 ತಿಂಗಳುಗಳು: 200 ಮಿಲಿಗ್ರಾಂ
  • 7-12 ತಿಂಗಳುಗಳು: 260 ಮಿಗ್ರಾಂ
  • 1-3 ವರ್ಷಗಳು: 700 ಮಿಗ್ರಾಂ
  • 4-8 ವರ್ಷಗಳು: 1,000 ಮಿಗ್ರಾಂ
  • 9-18 ವರ್ಷಗಳು: 1,300 ಮಿಗ್ರಾಂ
  • 19-50 ವರ್ಷಗಳು: 1,000 ಮಿಗ್ರಾಂ
  • 51-70 ವರ್ಷಗಳು: ಪುರುಷರಿಗೆ 1,000 ಮಿಗ್ರಾಂ ಮತ್ತು ಮಹಿಳೆಯರಿಗೆ 1,200 ಮಿಗ್ರಾಂ
  • 71 ವರ್ಷ ಮತ್ತು ಮೇಲ್ಪಟ್ಟವರು: 1,200 ಮಿಗ್ರಾಂ
  • ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ವಯಸ್ಸಿಗೆ ಅನುಗುಣವಾಗಿ 1,000-1,300 ಮಿಗ್ರಾಂ ಅಗತ್ಯವಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ