AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee: ಪೋಷಕರಿಗೆ ಅಲರ್ಟ್! ನಿಮ್ಮ ಮಕ್ಕಳು ಕಾಫಿ ಕುಡಿಯುತ್ತಾರಾ? ಈ ವಿಷಯಗಳನ್ನು ನೀವು ತಿಳಿಯಲೇಬೇಕು

Coffee and Caffeine Bad for Kids?: ಆದರೆ ಚಿಕ್ಕ ಮಕ್ಕಳಿಗೆ, ಬಾಲಕ-ಬಾಲಕಿಯರಿಗೆ ಹಲವು ವಿಷಯಗಳನ್ನು ವಿವರಿಸುವುದು, ತಿಳಿಯಹೇಳುವುದು ಪೋಷಕರಿಗೆ ಕಷ್ಟ ಕಷ್ಟ. ಅದರಲ್ಲೂ ಆ ಮಕ್ಕಳ ಆಹಾರದ ವಿಷಯದಲ್ಲಿ..

Coffee: ಪೋಷಕರಿಗೆ ಅಲರ್ಟ್! ನಿಮ್ಮ ಮಕ್ಕಳು ಕಾಫಿ ಕುಡಿಯುತ್ತಾರಾ? ಈ ವಿಷಯಗಳನ್ನು ನೀವು ತಿಳಿಯಲೇಬೇಕು
ಪೋಷಕರಿಗೆ ಅಲರ್ಟ್! ನಿಮ್ಮ ಮಕ್ಕಳು ಕಾಫಿ ಕುಡಿಯುತ್ತಾರಾ? ಈ ವಿಷಯಗಳನ್ನು ನೀವು ತಿಳಿಯಲೇಬೇಕು
TV9 Web
| Updated By: ಸಾಧು ಶ್ರೀನಾಥ್​|

Updated on: Aug 29, 2022 | 7:11 PM

Share

ಕಾಫಿ ಮತ್ತು ಕೆಫೀನ್ ಮಕ್ಕಳಿಗೆ ಕೆಟ್ಟದ್ದೇ?: ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದದ್ದನ್ನು ನೀಡಲು ಬಯಸುತ್ತಾರೆ. ಅದಕ್ಕೇ ಮಕ್ಕಳ ಪ್ರತಿಯೊಂದು ಸಣ್ಣ ವಿಚಾರವನ್ನೂ ನೋಡಿಕೊಳ್ಳುತ್ತಾರೆ.. ಕಣ್ಣಲ್ಲಿ ಕಣ್ಣಿಟ್ಟು ಪೊರೆಯುತ್ತಾರೆ. ವಿಶೇಷವಾಗಿ ಆಹಾರ ಮತ್ತು ಪೋಷಕಾಂಶಗಳ ವಿಷಯದಲ್ಲಿ ಪೋಷಕರು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಅನೇಕ ವಿಷಯಗಳನ್ನು ವಿವರಿಸಲು ಪೋಷಕರು ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ನಾವು ಹೇಳಬೇಕಾಗಿಲ್ಲ.

ಅದರಲ್ಲೂ ಅವರ ಆಹಾರದ ವಿಷಯಕ್ಕೆ ಬಂದರೆ.. ಅವರನ್ನು ತಡೆಯುವುದು ತುಂಬಾ ಕಷ್ಟವಾಗುತ್ತದೆ. ಅನೇಕ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕಾಫಿ ಕುಡಿಯಲು ಪ್ರಾರಂಭಿಸುತ್ತಾರೆ. ಇದು ಮಕ್ಕಳಿಗೆ ಒಳ್ಳೆಯದೇ? ಇದು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ? ಈ ವಿಷಯಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ.. ಚಿಕ್ಕ ಮಕ್ಕಳು ಕಾಫಿ ಕುಡಿದರೆ.. ನಿಜಕ್ಕೂ ಅದು ಒಳ್ಳೆಯದೋ, ಅಲ್ಲವೋ ಎಂಬುದನ್ನು ಈಗ ತಿಳಿಯೋಣ..

ತಜ್ಞರು ಏನು ಹೇಳುತ್ತಾರೆ?

ಮಕ್ಕಳು ಅಥವಾ ಬೆಳೆಯುತ್ತಿರುವ ವಯಸ್ಸಿನ ಬಾಲಕ-ಬಾಲಕಿಯರಿಗೆ ಕೆಫೀನ್ ನಿಂದ ಮಾಡಿದ ಉತ್ಪನ್ನಗಳು ಪ್ರಯೋಜನಕಾರಿಯಲ್ಲ ಎಂದು ತಜ್ಞರು ಸೂಚಿಸುತ್ತಾರೆ. ಅದು ಕಾಫಿ ಅಥವಾ ಟೀ ಆಗಿರಲಿ, ಎರಡನ್ನೂ ಆರೋಗ್ಯಕರ ಬದಲಿಗೆ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಮಕ್ಕಳಿಗೆ ನೀಡುವುದರಿಂದ ಅವರ ದೇಹದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಆದರೆ ಸ್ವಲ್ಪ ಮಟ್ಟಿಗೆ ಮಕ್ಕಳಿಗೆ ಕೆಫೀನ್ ನೀಡಬಹುದು. ಏಕೆಂದರೆ ಅದು ಅವರ ಮನಸ್ಸನ್ನು ಸಕ್ರಿಯವಾಗಿರಿಸುತ್ತದೆ ಎಂದು ನಂಬಲಾಗಿದೆ. ಆದರೆ.. ಆದಷ್ಟು ಅದರಿಂದ ದೂರವಿರುವುದೇ ಉತ್ತಮ.

ಮಕ್ಕಳಿಗೆ ಎಷ್ಟು ಕೆಫೀನ್ ಬೇಕು?

ಕಾಫಿ ಸೇವನೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂಬ ಅನುಮಾನ, ಆತಂಕ ಅನೇಕರಲ್ಲಿದೆ. ಆದರೆ ವಾಸ್ತವವಾಗಿ ಇದು ಸರಿಯಲ್ಲ. 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ 100 ಮಿ. ಗ್ರಾಂ. ಕೆಫೀನ್ ಅನ್ನು ನೀಡಬಹುದು ಎಂದು ತಜ್ಞರು ಹೇಳುತ್ತಾರೆ. ಅಂದರೆ 1 ರಿಂದ 2 ಕಪ್ ಕಾಫಿ. ಇದಕ್ಕಿಂತ ಹೆಚ್ಚು ಕೆಫೀನ್ ಅವರ ದೇಹಕ್ಕೆ ಹಾನಿ ಮಾಡುತ್ತದೆ.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್