ಪುರುಷರ ಕ್ಯಾನ್ಸರ್ ಪ್ರಮಾಣ ಶೇ.84ರಷ್ಟು ಹೆಚ್ಚಳ, ಮುಂದಿನ 25 ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಸಾವಿನ ಸಂಖ್ಯೆ: ಅಧ್ಯಯನ
ಒಂದು ಅಧ್ಯಯನವು, 2050 ರ ವೇಳೆಗೆ ಪುರುಷರಲ್ಲಿ ಕ್ಯಾನ್ಸರ್ ರೋಗನಿರ್ಣಯ ಮತ್ತು ಸಾವುನೋವುಗಳ ಸಂಖ್ಯೆಯು ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪೀರ್- ರಿವ್ಯೂಡ್ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ 2022 ರಿಂದ 2050 ರ ನಡುವೆ ಕ್ಯಾನ್ಸರ್ ಸಮಸ್ಯೆಯು ಜಾಗತಿಕವಾಗಿ ಶೇಕಡಾ 84 ರಷ್ಟು ಹೆಚ್ಚಳವಾಗಲಿದ್ದು, ಪುರುಷರಲ್ಲಿ ಕ್ಯಾನ್ಸರ್ ನಿಂದ ಹೆಚ್ಚುವ ಸಾವುಗಳಲ್ಲಿ ಶೇಕಡಾ 93 ರಷ್ಟು ಹೆಚ್ಚಳವಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಸಂಖ್ಯೆ 2022 ರಲ್ಲಿ 5.4 ಮಿಲಿಯನ್ ನಿಂದ 2050 ರಲ್ಲಿ 10.5 ಮಿಲಿಯನ್ ಗೆ ಏರುವ ನಿರೀಕ್ಷೆಯಿದೆ. ಹಾಗಾದರೆ ಪುರುಷರಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿರಲು ಕಾರಣವೇನು? ಯಾವ ರೀತಿಯ ಕ್ಯಾನ್ಸರ್ ಹೆಚ್ಚಾಗುತ್ತದೆ? ಇಲ್ಲಿದೆ ಮಾಹಿತಿ.
ಕ್ಯಾನ್ಸರ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದಕ್ಕೆ ಪೂರಕ ಎನ್ನುವಂತೆ ಹಲವಾರು ರೀತಿಯ ಅಧ್ಯಯನಗಳು ನಡೆಯುತ್ತಿದೆ. ಇದೆ ವಿಷಯವಾಗಿ ನಡೆದಂತಹ ಒಂದು ಅಧ್ಯಯನದಲ್ಲಿ, 2050 ರ ವೇಳೆಗೆ ಪುರುಷರಲ್ಲಿ ಕ್ಯಾನ್ಸರ್ ರೋಗನಿರ್ಣಯ ಮತ್ತು ಸಾವುನೋವುಗಳ ಸಂಖ್ಯೆಯು ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪೀರ್- ರಿವ್ಯೂಡ್ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ 2022 ರಿಂದ 2050 ರ ನಡುವೆ ಕ್ಯಾನ್ಸರ್ ಸಮಸ್ಯೆಯು ಜಾಗತಿಕವಾಗಿ ಶೇಕಡಾ 84 ರಷ್ಟು ಹೆಚ್ಚಳವಾಗಲಿದ್ದು, ಪುರುಷರಲ್ಲಿ ಕ್ಯಾನ್ಸರ್ ನಿಂದ ಹೆಚ್ಚುವ ಸಾವುಗಳಲ್ಲಿ ಶೇಕಡಾ 93 ರಷ್ಟು ಹೆಚ್ಚಳವಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಸಂಖ್ಯೆ 2022 ರಲ್ಲಿ 5.4 ಮಿಲಿಯನ್ ನಿಂದ 2050 ರಲ್ಲಿ 10.5 ಮಿಲಿಯನ್ ಗೆ ಏರುವ ನಿರೀಕ್ಷೆಯಿದೆ. ಹಾಗಾದರೆ ಪುರುಷರಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿರಲು ಕಾರಣವೇನು? ಯಾವ ರೀತಿಯ ಕ್ಯಾನ್ಸರ್ ಹೆಚ್ಚಾಗುತ್ತದೆ? ಇಲ್ಲಿದೆ ಮಾಹಿತಿ.
ಪುರುಷರಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿರಲು ಕಾರಣವೇನು?
ಪುರುಷರಲ್ಲಿ ಕ್ಯಾನ್ಸರ್ ಸಂಭವ ಮತ್ತು ಮರಣವನ್ನು ಅಂದಾಜು ಮಾಡಲು, ಸಂಶೋಧಕರು 185 ದೇಶಗಳಿಂದ ಡೇಟಾವನ್ನು ಸಂಗ್ರಹಿಸಿದ್ದು, ಅಧ್ಯಯನದ ಲೇಖಕರು ಹೇಳುವ ಪ್ರಕಾರ, ಪುರುಷರು ಮಹಿಳೆಯರಿಗಿಂತ ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ, ಇದು ಕ್ಯಾನ್ಸರ್ ಮತ್ತು ಅದಕ್ಕೆ ಸಂಬಂಧಿತ ಸಾವುನೋವುಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಪುರುಷರು ಕ್ಯಾನ್ಸರ್ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಾಗ, ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಬರುವ ಸಾಧ್ಯತೆ ತುಂಬಾ ಕಡಿಮೆ ಮತ್ತು ಕೆಲಸದಲ್ಲಿ ಕ್ಯಾನ್ಸರ್ ಕಾರಕಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ವಯಸ್ಸಾದವರಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ
65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕ್ಯಾನ್ಸರ್ ಕಂಡು ಬರುತ್ತಿದ್ದು, ಯುವಕರಿಗೆ ಹೋಲಿಸಿದರೆ ಅವರು ಬದುಕುಳಿಯುವ ಪ್ರಮಾಣ ಕಡಿಮೆ ಆಗಿದೆ. ಏಕೆಂದರೆ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದಿರುವುದು, ಅನಾರೋಗ್ಯ ಕೊನೆ ಹಂತಕ್ಕೆ ಹೋದಾಗ ರೋಗನಿರ್ಣಯ ಮಾಡಲಾಗುತ್ತದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಅವರಲ್ಲಿ ಕೆಲವರಿಗೆ ಅಷ್ಟು ಪ್ರಮಾಣದ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಇವೆಲ್ಲಾ ಕಾರಣದಿಂದ, ವಯಸ್ಸಾದವರಲ್ಲಿ ಕ್ಯಾನ್ಸರ್ ನಿಂದ ಸಂಭವಿಸಬಹುದಾದ ಸಾವು 3.4 ಮಿಲಿಯನ್ ನಿಂದ 7.7 ಮಿಲಿಯನ್ ಗೆ ಏರುವ ನಿರೀಕ್ಷೆಯಿದೆ. ಅಲ್ಲದೆ ಕ್ಯಾನ್ಸರ್ ಪ್ರಕರಣಗಳು 2022 ರಲ್ಲಿ 6 ಮಿಲಿಯನ್ ನಿಂದ 2050 ರ ವೇಳೆಗೆ 13.1 ಮಿಲಿಯನ್ ಗೆ ಏರುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡದಿರಲು ವೈಜ್ಞಾನಿಕ ಕಾರಣವೇನು?
ಎಲ್ಲೆಲ್ಲಿ ಹೆಚ್ಚಳ?
ವಿವಿಧ ರಾಷ್ಟ್ರಗಳ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಕ್ಯಾನ್ಸರ್ ಫಲಿತಾಂಶಗಳಲ್ಲಿನ ವ್ಯತ್ಯಾಸಗಳನ್ನು ಸಂಶೋಧಕರು ಗುರುತಿಸಿದ್ದಾರೆ. “2022 ಮತ್ತು 2050 ರ ನಡುವೆ, ಆಫ್ರಿಕಾ ಮತ್ತು ಪೂರ್ವ ಮೆಡಿಟರೇನಿಯನ್ನಲ್ಲಿ, ಕ್ಯಾನ್ಸರ್ ಪ್ರಕರಣ ಮತ್ತು ಸಾವುಗಳ ಸಂಖ್ಯೆ 2.5 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆ ವ್ಯತಿರಿಕ್ತವಾಗಿ, ಯುರೋಪ್ ನಲ್ಲಿ ಇದರ ಅರ್ಧದಷ್ಟು ಹೆಚ್ಚಳ ಕಂಡು ಬರುವ ನಿರೀಕ್ಷೆಯಿದೆ” ಎಂದು ಸಂಶೋಧಕರು ಹೇಳಿದ್ದಾರೆ.
ಯಾವ ರೀತಿಯ ಕ್ಯಾನ್ಸರ್ ಹೆಚ್ಚಾಗುತ್ತದೆ?
2050 ರಲ್ಲಿ ಜಾಗತಿಕವಾಗಿ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚಾಗಲು ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ ಎಂದು ಊಹಿಸಲಾಗಿದೆ, 2022 ರಿಂದ 2050 ರವರೆಗೆ ಶೇಕಡಾ 87 ಕ್ಕಿಂತ ಹೆಚ್ಚಾಗಿದೆ. ಇದರ ನಂತರ ಪ್ರಾಸ್ಟೇಟ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಬರುತ್ತದೆ. ಅಲ್ಲದೆ 2050 ರ ವೇಳೆಗೆ ಮೂತ್ರಕೋಶದ ಕ್ಯಾನ್ಸರ್ ಹೆಚ್ಚು ಮಾರಣಾಂತಿಕವಾಗಲಿದೆ ಎಂದು ಊಹಿಸಲಾಗಿದ್ದರೂ, ಚರ್ಮದ ಕ್ಯಾನ್ಸರ್, ಹೆಚ್ಚಿನ ಸಾವುಗಳಿಗೆ ಕಾರಣವಾಗಬಹುದು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ