Cardamom Benefits: ಏಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಆಗುವ 10 ಪ್ರಯೋಜನಗಳಿವು
Cardamom Benefits: ಏಲಕ್ಕಿಯು ಸಿಹಿ ಮತ್ತು ಖಾರದ ಭಕ್ಷ್ಯಗಳಲ್ಲಿ ಬಳಸುವ ವಿಶಿಷ್ಟ ಪರಿಮಳವನ್ನು ಹೊಂದಿದ ಮಸಾಲೆ ಪದಾರ್ಥವಾಗಿದೆ. ಜನರು ಬಿರಿಯಾನಿ, ಸಿಹಿತಿಂಡಿಗಳು ಮತ್ತು ಮಾಂಸ ಭಕ್ಷ್ಯಗಳಲ್ಲಿ ಏಲಕ್ಕಿ ಬೀಜಗಳನ್ನು ಬಳಸುತ್ತಾರೆ. ಹಾಗೆಯೇ ಕಾಫಿ ಮತ್ತು ಚಹಾದಂತಹ ಪಾನೀಯಗಳಲ್ಲಿ ಕೂಡ ಬಳಸುತ್ತಾರೆ.
ಏಲಕ್ಕಿಯನ್ನು ಜನರು ಶತಮಾನಗಳಿಂದ ಅಡುಗೆಯಲ್ಲಿ ಮತ್ತು ಔಷಧಿಯಾಗಿ ಬಳಸುತ್ತಿದ್ದಾರೆ. ಇದು ಮಸಾಲೆಯಾಗಿದ್ದು, ಮಧ್ಯಪ್ರಾಚ್ಯ ಮತ್ತು ಅರೇಬಿಕ್ ಆಹಾರಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಏಲಕ್ಕಿಯು ಭಾರತದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ತಂಪಾದ ವಾತಾವರಣದಲ್ಲಿ ಬೆಳೆಯುವ ಏಲಕ್ಕಿಯನ್ನು ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಉಪ ಬೆಳೆಯಾಗಿ ಬೆಳೆಯುತ್ತಾರೆ.
ಏಲಕ್ಕಿಯು ಸಿಹಿ ಮತ್ತು ಖಾರದ ಭಕ್ಷ್ಯಗಳಲ್ಲಿ ಬಳಸುವ ವಿಶಿಷ್ಟ ಪರಿಮಳವನ್ನು ಹೊಂದಿದ ಮಸಾಲೆ ಪದಾರ್ಥವಾಗಿದೆ. ಜನರು ಬಿರಿಯಾನಿ, ಸಿಹಿತಿಂಡಿಗಳು ಮತ್ತು ಮಾಂಸ ಭಕ್ಷ್ಯಗಳಲ್ಲಿ ಏಲಕ್ಕಿ ಬೀಜಗಳನ್ನು ಬಳಸುತ್ತಾರೆ. ಹಾಗೆಯೇ ಕಾಫಿ ಮತ್ತು ಚಹಾದಂತಹ ಪಾನೀಯಗಳಲ್ಲಿ ಕೂಡ ಬಳಸುತ್ತಾರೆ.
ಏಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಆಗುವ 10 ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
1. ಏಲಕ್ಕಿ ಬೀಜಗಳ ಎಣ್ಣೆಯು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಕೊಲ್ಲುತ್ತದೆ. ಕೆಲವು ಬ್ಯಾಕ್ಟೀರಿಯಾಗಳ ಜೀವಕೋಶದ ಪೊರೆಯನ್ನು ಹಾನಿಗೊಳಿಸುವ ಸಾಮರ್ಥ್ಯವನ್ನು ಏಲಕ್ಕಿ ಹೊಂದಿದೆ.
2. ಏಲಕ್ಕಿಯು ಮೆಟಬಾಲಿಕ್ ಸಿಂಡ್ರೋಮ್‌ನ ಕೆಲವು ಅಂಶಗಳಿಗೆ ಸಹಾಯ ಮಾಡುತ್ತದೆ. ಮೆಟಾಬಾಲಿಕ್ ಸಿಂಡ್ರೋಮ್ ಎನ್ನುವುದು ಆರೋಗ್ಯ ಸ್ಥಿತಿಗಳ ಒಂದು ಗುಂಪಾಗಿದ್ದು, ಅದು ಹೃದ್ರೋಗ ಮತ್ತು ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು. ಬೊಜ್ಜು, ಅಧಿಕ ಮಧುಮೇಹ, ಅಧಿಕ ರಕ್ತದೊತ್ತಡ, ಹೆಚ್ಚಿನ ಟ್ರೈಗ್ಲಿಸರೈಡ್ಗಳು, ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ಇದನ್ನೂ ಓದಿ: ನಿಮ್ಮ ಚರ್ಮಕ್ಕೆ ವ್ಯಾಸಲಿನ್ ಹಚ್ಚುವುದು ಒಳ್ಳೆಯದಾ? ಪೆಟ್ರೋಲಿಯಂ ಜೆಲ್ಲಿಯ ಅಡ್ಡ ಪರಿಣಾಮಗಳೇನು?
3. ಹೃದಯದ ಆರೋಗ್ಯಕ್ಕೆ ಏಲಕ್ಕಿ ಸಹಕಾರಿ. ಏಲಕ್ಕಿಯು ಹೃದಯಾಘಾತದಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಏಲಕ್ಕಿಯಲ್ಲಿನ ಉತ್ಕರ್ಷಣ ನಿರೋಧಕ ಅಂಶ ಹೃದಯದ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
4. ಅನೇಕ ಜನರು ಪುದೀನ ಮತ್ತು ದಾಲ್ಚಿನ್ನಿಯನ್ನು ಮೌತ್ ಫ್ರೆಶನರ್‌ಗಳೆಂದು ಭಾವಿಸಿದ್ದಾರೆ. ಆದರೆ, ಅದರ ಜೊತೆಗೆ ಜನರು ಹಲವು ಶತಮಾನಗಳಿಂದ ಏಲಕ್ಕಿಯನ್ನು ಬಾಯಿಯ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಬಳಸುತ್ತಿದ್ದಾರೆ. ಕೇವಲ ಸುವಾಸನೆಗೆ ಮಾತ್ರವಲ್ಲದೆ ಏಲಕ್ಕಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಬ್ಯಾಕ್ಟೀರಿಯಾ ಬಾಯಿಯ ದುರ್ವಾಸನೆ, ಒಸಡಿನ ಕಾಯಿಲೆಗೆ ಕಾರಣವಾಗಿದೆ.
5. ಯಕೃತ್ತಿನ ಆರೋಗ್ಯಕ್ಕೆ ಏಲಕ್ಕಿ ಸಹಕಾರಿ. ಆಯುರ್ವೇದ ಔಷಧದಲ್ಲಿ ಜನರು ಅದರ ನಿರ್ವಿಶೀಕರಣ ಗುಣಲಕ್ಷಣಗಳಿಗಾಗಿ ಏಲಕ್ಕಿಯನ್ನು ಬಳಸುತ್ತಾರೆ. ಇದು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
6. ತೂಕ ಇಳಿಸಲು ಏಲಕ್ಕಿ ಸಹಕಾರಿ. ಲಿವರ್ನ ಆರೋಗ್ಯಕ್ಕೆ ಒಳ್ಳೆಯದು.
7. ಏಲಕ್ಕಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಏಲಕ್ಕಿಯು ನೈಸರ್ಗಿಕ ಫೈಟೊಕೆಮಿಕಲ್‌ಗಳನ್ನು ಹೊಂದಿದ್ದು ಅದು ಕ್ಯಾನ್ಸರ್‌ನಂತಹ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Cardamom Benefits: ದಿನವೂ ಏಲಕ್ಕಿ ಬಳಸುವುದರಿಂದಾಗುವ 10 ಪ್ರಯೋಜನಗಳಿವು
8. ಹುಣ್ಣುಗಳನ್ನು ತಡೆಗಟ್ಟುತ್ತದೆ. ಏಲಕ್ಕಿಯು ಜೀರ್ಣಕಾರಿ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ಏಲಕ್ಕಿ ಹಾಕಿದ ಚಹಾವನ್ನು ಸೇವಿಸುವುದರಿಂದ ಹೊಟ್ಟೆಯ ಹುಣ್ಣುಗಳಿಂದ ಪಾರಾಗಬಹುದು.
9. ಪುರುಷರು ದಿನವೂ ರಾತ್ರಿ ಒಂದು ಏಲಕ್ಕಿ ತಿನ್ನುವುದರಿಂದ ಲೈಂಗಿಕ ದೌರ್ಬಲ್ಯದಿಂದ ಪಾರಾಗಿ, ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. ಹಾಲು ಅಥವಾ ನೀರಿನೊಂದಿಗೆ ರಾತ್ರಿ ಏಲಕ್ಕಿ ಸೇವಿಸುವುದರಿಂದ ಲೈಂಗಿಕತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದೂರವಾಗುತ್ತವೆ.
10. ರಾತ್ರಿ ಏಲಕ್ಕಿ ತಿಂದರೆ ಗೊರಕೆ ಸಮಸ್ಯೆಯೂ ಕಡಿಮೆಯಾಗುತ್ತದೆ. ಮಲಬದ್ಧತೆ ನಿವಾರಿಸಲು ಕೂಡ ಏಲಕ್ಕಿ ಸಹಕಾರಿಯಾಗಿದೆ. ಅಸ್ತಮಾ, ಮಧುಮೇಹ (ಡಯಾಬಿಟಿಸ್)ಸಮಸ್ಯೆಗಳಿಗೂ ಏಲಕ್ಕಿಯಿಂದ ಪರಿಹಾರ ಸಿಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ