AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chandipura Virus: ಭಾರತದಲ್ಲಿ 20 ವರ್ಷಗಳಲ್ಲಿ ಅತಿ ಹೆಚ್ಚು ಚಂಡಿಪುರ ವೈರಸ್ ಪ್ರಕರಣ ದಾಖಲು, WHO ಎಚ್ಚರಿಕೆ

ಭಾರತದಲ್ಲಿ ಚಂಡಿಪುರ ವೈರಸ್ 20 ವರ್ಷಗಳಲ್ಲಿ ಏಕಾಏಕಿ ಹೆಚ್ಚಳ ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಡಬ್ಲ್ಯುಎಚ್ಒ ಪ್ರಕಾರ, ಜೂನ್ ಆರಂಭದಿಂದ ಆಗಸ್ಟ್ 15 ರ ನಡುವೆ, ಆರೋಗ್ಯ ಸಚಿವಾಲಯವು, ಎಇಎಸ್ (AES) (ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್) ನ 245 ಪ್ರಕರಣಗಳನ್ನು ವರದಿ ಮಾಡಿದೆ, ಇದರಲ್ಲಿ 82 ಸಾವುಗಳು ಸೇರಿವೆ. ಭಾರತದ ಒಟ್ಟು 43 ಜಿಲ್ಲೆಗಳಲ್ಲಿ ಪ್ರಸ್ತುತ ಎಇಎಸ್ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ 64 ಪ್ರಕರಣಗಳು ಚಂಡಿಪುರ ವೈರಸ್ (CHPV) ಸೋಂಕು ಎಂದು ದೃಢಪಟ್ಟಿದೆ.

Chandipura Virus: ಭಾರತದಲ್ಲಿ 20 ವರ್ಷಗಳಲ್ಲಿ ಅತಿ ಹೆಚ್ಚು ಚಂಡಿಪುರ ವೈರಸ್ ಪ್ರಕರಣ ದಾಖಲು, WHO ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Aug 29, 2024 | 5:07 PM

Share

ಪ್ರಸ್ತುತ ಭಾರತದಲ್ಲಿ ಚಂಡಿಪುರ ವೈರಸ್ ಹೆಚ್ಚಾಗಿದ್ದು, 20 ವರ್ಷಗಳಲ್ಲಿ ಏಕಾಏಕಿ ಹೆಚ್ಚಳ ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಡಬ್ಲ್ಯುಎಚ್ಒ ಪ್ರಕಾರ, ಜೂನ್ ಆರಂಭದಿಂದ ಆಗಸ್ಟ್ 15 ರ ನಡುವೆ, ಆರೋಗ್ಯ ಸಚಿವಾಲಯವು, ಎಇಎಸ್ (AES) (ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್) ನ 245 ಪ್ರಕರಣಗಳನ್ನು ವರದಿ ಮಾಡಿದೆ, ಇದರಲ್ಲಿ 82 ಸಾವುಗಳು ಸೇರಿವೆ. ಭಾರತದ ಒಟ್ಟು 43 ಜಿಲ್ಲೆಗಳಲ್ಲಿ ಪ್ರಸ್ತುತ ಎಇಎಸ್ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ 64 ಪ್ರಕರಣಗಳು ಚಂಡಿಪುರ ವೈರಸ್ (CHPV) ಸೋಂಕು ಎಂದು ದೃಢಪಟ್ಟಿದೆ.

ಇದಕ್ಕೆ ಚಿಕಿತ್ಸೆ ಹೇಗೆ?​

“ಚಂಡಿಪುರ ವೈರಸ್ ಭಾರತದ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ವಿರಳವಾದ ಪ್ರಕರಣಗಳು ಕಂಡು ಬರುತ್ತವೆ. ಗಮನಾರ್ಹವಾಗಿ, ಗುಜರಾತಿನಲ್ಲಿ ಪ್ರತಿ ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ಸಿಎಚ್ ಪಿವಿ ಸೋಂಕು ಏಕಾಏಕಿ ಹೆಚ್ಚುತ್ತದೆ. ಈ ವೈರಸ್ ಬಾಕುಲೋವೈರಸ್‌ಗೆ ಸಂಬಂಧಿಸಿದೆ. ಅಂದರೆ ಸೊಳ್ಳೆಗಳು, ಮರಳು ನೊಣಗಳಂತಹ ವಾಹಕಗಳ ಕಡಿತದಿಂದ ಇದು ಹರಡುತ್ತದೆ.. ಸಿಎಚ್ ಪಿವಿ ಸೋಂಕಿನಿಂದ ಸಿಎಫ್ ಆರ್ ಹೆಚ್ಚಾಗಿದೆ (56- 75 ಪ್ರತಿಶತ) ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡಿ, ಆರೈಕೆ ಮಾಡಿದರೆ ಬದುಕುಳಿಯಬಹುದು” ಎಂದು ಡಬ್ಲ್ಯುಎಚ್ಒ ಹೇಳಿದೆ.

ತಡೆಯುವುದು ಹೇಗೆ?

“ಹೆಚ್ಚಿನ ಅಪಾಯವಿರುವ ಪ್ರದೇಶಗಳ ಜನರಿಗೆ ಈ ಬಗ್ಗೆ ಅರಿವು ಮೂಡಿಸಿ, ಮುನ್ನೆಚ್ಚರಿಕೆ ವಹಿಸಬೇಕು. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೀವ್ರ ಜ್ವರ ಅಥವಾ ಬೇರೆ ರೋಗ ಲಕ್ಷಣ ಕಂಡು ಬಂದರೆ ಅದನ್ನು ನಿರ್ಲಕ್ಷಿಸದೆಯೇ ಸರಿಯಾದ ಚಿಕಿತ್ಸೆ ನೀಡಬೇಕು. ಸಿಎಚ್ ಪಿವಿ ಪ್ರಸರಣವನ್ನು ನಿಯಂತ್ರಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದರೂ, ಮಳೆಗಾಲದಿಂದಾಗಿ ಇದನ್ನು ತಡೆಯುವುದು ಕಷ್ಟಕರ. ಅಲ್ಲದೆ ಮುಂಬರುವ ವಾರಗಳಲ್ಲಿ ವೈರಸ್ ಮತ್ತಷ್ಟು ಹರಡುವ ಸಾಧ್ಯತೆಯಿದೆ. ಇದನ್ನು ತಡೆಯಲು ಸೊಳ್ಳೆ ಮತ್ತು ಉಣ್ಣೆಗಳ ಕಡಿತದಿಂದ ಆದಷ್ಟು ರಕ್ಷಣೆ ಪಡೆಯಿರಿ” ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.

ಇದನ್ನೂ ಓದಿ: ನೀವು ಸದಾ ಚಪ್ಪಲಿ ಅಥವಾ ಶೂ ಧರಿಸಿರುತ್ತೀರಾ, ಈ ಸಮಸ್ಯೆಗಳನ್ನು ನಿಮ್ಮನ್ನು ಬಾಧಿಸಬಹುದು

“ಈ ವೈರಸ್ ನ ನಿಯಂತ್ರಣ ಮತ್ತು ತಡೆಗಟ್ಟುವ ಕ್ರಮಗಳನ್ನು ಜನರಿಗೆ ತಿಳಿಸುವುದಲ್ಲದೆ, ಸಮಗ್ರ ಕೀಟನಾಶಕ ಸಿಂಪಡಣೆ ಮತ್ತು ಹೊಗೆ ಹಾಕುವುದು ಇನ್ನಿತರ ಕ್ರಮ ಕೈಗೊಳ್ಳಲು ಸರಕಾರಗಳಿಂದ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಅದರ ರೋಗಲಕ್ಷಣಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ವೈದ್ಯಕೀಯ ಸಿಬಂದಿಗೆ ಮಾಹಿತಿ ನೀಡಲು ಉಪಕ್ರಮಗಳು ನಡೆಯುತ್ತಿವೆ. ಎನ್ಸೆಫಾಲಿಟಿಸ್ಗೆ ಕಾರಣವಾಗುವ ಇತರ ವೈರಸ್ಗಳನ್ನು ಗುರುತಿಸಲು ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ (ಜಿಬಿಆರ್ಸಿ) ಸಕ್ರಿಯವಾಗಿ ಸಂಶೋಧನೆ ನಡೆಸುತ್ತಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ” ಎಂದು ಡಬ್ಲ್ಯುಎಚ್ಒ ಹೇಳಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Thu, 29 August 24

ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್