Child Health: ಮಕ್ಕಳಲ್ಲಿ ಆಗಾಗ್ಗೆ ಕಾಡುವ ಬಿಕ್ಕಳಿಸುವಿಕೆಗೆ ಕಾರಣ ಮತ್ತು ತಕ್ಷಣದ ಪರಿಹಾರ

ಜನನದ ನಂತರದ ಮೊದಲ ಕೆಲವು ತಿಂಗಳು ಮಕ್ಕಳು ಬಹಳಷ್ಟು ಬಿಕ್ಕಳಿಸುವಿಕೆಯನ್ನು ಅನುಭವಿಸುತ್ತಾರೆ, ಆದರೆ ಮಗು ಬೆಳೆದಂತೆ, ಬಿಕ್ಕಳಿಸುವಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸದ್ಯಕ್ಕೆ ಮಕ್ಕಳಲ್ಲಿ ಕಾಡುವ ಬಿಕ್ಕಳಿಕೆಯ ಹಿಂದಿನ ಕಾರಣ ಮತ್ತು ಕೆಲವು ಮನೆಮದ್ದುಗಳನ್ನು ಇಲ್ಲಿ ತಿಳಿದುಕೊಳ್ಳಿ.

Child Health: ಮಕ್ಕಳಲ್ಲಿ ಆಗಾಗ್ಗೆ ಕಾಡುವ ಬಿಕ್ಕಳಿಸುವಿಕೆಗೆ ಕಾರಣ ಮತ್ತು ತಕ್ಷಣದ ಪರಿಹಾರ
Hiccups Image Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Dec 25, 2023 | 2:05 PM

ಬಿಕ್ಕಳಿಕೆ ಸಂಭವಿಸಿದಾಗ, ಯಾರಾದರೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯರು ಹೇಳುವುದುಂಟು. ಆದರೆ ಈ ಸಮಸ್ಯೆ ಮುಂದುವರಿದರೆ ಅದು ತೊಂದರೆಗೆ ಕಾರಣವಾಗಬಹುದು. ಅನೇಕ ಬಾರಿ, ಬಿಕ್ಕಳಿಸುವಿಕೆಯು ಮಕ್ಕಳನ್ನು ಬಹಳಷ್ಟು ತೊಂದರೆಗೊಳಿಸುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಪೋಷಕರಿಗೆ ಅರ್ಥವಾಗುವುದಿಲ್ಲ. ಸ್ವಲ್ಪ ಸಮಯದ ನಂತರ ಬಿಕ್ಕಳಿಕೆಗಳು ತಾನಾಗಿಯೇ ನಿಲ್ಲುತ್ತವೆ. ಜನನದ ನಂತರದ ಮೊದಲ ಕೆಲವು ದಿನಗಳಲ್ಲಿ ಮಕ್ಕಳು ಬಹಳಷ್ಟು ಬಿಕ್ಕಳಿಸುವಿಕೆಯನ್ನು ಅನುಭವಿಸುತ್ತಾರೆ, ಆದರೆ ಮಗು ಬೆಳೆದಂತೆ, ಬಿಕ್ಕಳಿಸುವಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸದ್ಯಕ್ಕೆ ಮಕ್ಕಳಲ್ಲಿ ಕಾಡುವ ಬಿಕ್ಕಳಿಕೆಯ ಹಿಂದಿನ ಕಾರಣ ಮತ್ತು ಕೆಲವು ಮನೆಮದ್ದುಗಳನ್ನು ಇಲ್ಲಿ ತಿಳಿದುಕೊಳ್ಳಿ.

ಚಿಕ್ಕ ಮಕ್ಕಳಲ್ಲಿ ಬಿಕ್ಕಳಿಸುವಿಕೆಗೆ ಕಾರಣವೇನು?

ಹಸುಗೂಸು ಎದೆಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಆಗಾಗ್ಗೆ ಬಿಕ್ಕಳಿಕೆ ಕಾಡುತ್ತದೆ. ಆದ್ದರಿಂದ ಹಾಲು ಕುಡಿಸಿದ ನಂತರ ಮಗುವನ್ನು ಭುಜದ ಮೇಲೆ ಮಲಗಿಸಿ ಬೆನ್ನಿನ ನಿಧಾನವಾಗಿ ತಟ್ಟಿ ಅಥವಾ ಮಸಾಜ್ ಮಾಡಿ. ಅನೇಕ ಬಾರಿ, ಮಗು ಹೆಚ್ಚಾಗಿ ಹಾಲು ಕುಡಿದರೂ ಸಹ, ಬಿಕ್ಕಳಿಕೆ ಉಂಟಾಗುತ್ತದೆ.

ಇದನ್ನೂ ಓದಿ: ಇಲಿ ಕಚ್ಚಿ 40 ದಿನದ ಹಸುಗೂಸು ಸಾವು

ಬಿಕ್ಕಳಿಸುವಿಕೆಗೆ ಕೆಲ ಮನೆಮದ್ದುಗಳು:

ಜೇನುತುಪ್ಪ:

ಮಗುವಿಗೆ ನಿರಂತರ ಬಿಕ್ಕಳಿಕೆ ಇದ್ದರೆ, ಚಮಚದ ಸಹಾಯದಿಂದ ನಾಲಿಗೆಗೆ ಸ್ವಲ್ಪ ಜೇನುತುಪ್ಪ ಸವರಿ.ಇದು ಮಗುವಿಗೆ ಸ್ವಲ್ಪ ಸಮಯದಲ್ಲಿ ಬಿಕ್ಕಳಿಕೆಯಿಂದ ಪರಿಹಾರ ನೀಡುತ್ತದೆ.

ಕಲ್ಲು ಸಕ್ಕರೆ:

ಮಗುವು 6 ತಿಂಗಳಿಗಿಂತ ದೊಡ್ಡದಾಗಿದ್ದರೆ ಚಿಕ್ಕ ತುಂಡು ಕಲ್ಲು ಸಕ್ಕರೆಯನ್ನು ಮಗುವಿನ ಬಾಯಲ್ಲಿ ಇಡಿ. ಕಲ್ಲು ಸಕ್ಕರೆ ನಿಧಾನವಾಗಿ ಕರಗುವುದರಿಂದ ಬಿಕ್ಕಳಿಸುವಿಕೆ ನಿಧಾನವಾಗಿ ಕಡಿಮೆಯಾಗುತ್ತದೆ.

ಹಾಲುಣಿಸುವುದರಿಂದ ಚಿಕ್ಕ ಮಕ್ಕಳಲ್ಲಿ ಬಿಕ್ಕಳಿಕೆ ಸಾಮಾನ್ಯವಾಗಿರುತ್ತದೆ. ಆದರೆ ಪದೇ ಪದೇ ಕಾಡುತ್ತಿದ್ದು ನಿಮ್ಮ ಮಗುವಿನ ನಿದ್ದೆಗೆ ಅಡ್ಡಿಯುಂಟಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್